ರಾಜ್ಯ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಹಿಳೆಯಿಂದ 4 ಕೆಜಿ ಹೆರಾಯಿನ್ ವಶಕ್ಕೆ ಪಡೆದ ಡಿಆರ್‌ಐ

Srinivasamurthy VN

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಹಿಳೆಯೊಬ್ಬರಿಂದ ಬರೊಬ್ಬರಿ 4 ಕೆಜಿ ಹೆರಾಯಿನ್ ಅನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ)ದ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ಆಫ್ರಿಕನ್ ಮೂಲದ ಮಹಿಳಾ ಪ್ರಯಾಣಿಕರಿಂದ 4 ಕೆಜಿ ಹೆರಾಯಿನ್ ಅನ್ನು ಡಿಆರ್‌ಐ ವಶಪಡಿಸಿಕೊಂಡಿದೆ. ಮೂಲಗಳ ಪ್ರಕಾರ, ನಂಬಲರ್ಹ ಮೂಲಗಳ ಮಾಹಿತಿಯ ಮೇರೆಗೆ, ಮಧ್ಯ ಪ್ರಾಚ್ಯದಿಂದ ವಿಮಾನದಲ್ಲಿ ಬಂದಿದ್ದ ಆರೋಪಿಯನ್ನು ಡಿಆರ್‌ಐ ಸಿಬ್ಬಂದಿ ತಡೆದರು. ಈ ವೇಳೆ ಆಕೆಯ ಬಳಿ ಇದ್ದ ಸುಮಾರು 28 ಕೋಟಿ ಮೌಲ್ಯದ 4ಕೆಜಿ ಹೆರಾಯಿನ್ ಅನ್ನು ವಶಪಡಿಸಿಕೊಂಡರು.

ಆರೋಪಿಯನ್ನು ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸ್ (NDPS) ಆಕ್ಟ್, 1985 ರ ಅಡಿಯಲ್ಲಿ ಬಂಧಿಸಲಾಗಿದೆ. ಆಕೆಯನ್ನು ಗೊತ್ತುಪಡಿಸಿದ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕಳೆದ ಮೂರು ತಿಂಗಳಲ್ಲಿ, ಡಿಐಆರ್ ಕೆಐಎಯಿಂದಲೇ 22 ಕೆಜಿ ಸೇರಿದಂತೆ ದೇಶದ ವಿವಿಧ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಿಂದ 70 ಕೆಜಿ ಹೆರಾಯಿನ್ ವಶಪಡಿಸಿಕೊಂಡಿದೆ.

ಇತ್ತೀಚಿನ ದಿನಗಳಲ್ಲಿ ಮಾದಕವಸ್ತು ಕಳ್ಳಸಾಗಣೆಯಲ್ಲಿ ತೀವ್ರ ಏರಿಕೆ ಕಂಡುಬಂದಿದ್ದು, ವಿಶೇಷವಾಗಿ ಈ ವರ್ಷ ಹೆರಾಯಿನ್ ಮತ್ತು ಕೊಕೇನ್ ನಂತಹ ಉನ್ನತ ಮಟ್ಟದ ಮಾದಕದ್ರವ್ಯಗಳ ಅಕ್ರಮ ಸಾಗಣೆ ಹೆಚ್ಚಾಗಿದೆ. ಈ ಹಿಂದೆ ಮುಂಡ್ರಾ ಬಂದರಿನಲ್ಲಿ ಇತ್ತೀಚೆಗೆ ಡಿಆರ್‌ಐ ಮೂಲಕ 3000 ಕೆಜಿ ಹೆರಾಯಿನ್ ಅಕ್ರಮ ಸಾಗಾಟ ತಡೆದಿತ್ತು. ಇದು ವಿಶ್ವದ ಅತಿದೊಡ್ಡ ಕಳ್ಳ ಸಾಗಣೆಯಾಗಿದೆ.

ಅಂತಾರಾಷ್ಟ್ರೀಯ ಸಿಂಡಿಕೇಟ್‌ಗಳಿಂದ ಸಮುದ್ರ, ಭೂಮಿ ಮತ್ತು ವಾಯು ಮಾರ್ಗಗಳ ಮೂಲಕ ಡ್ರಗ್ಸ್ ಅನ್ನು ಕಳ್ಳಸಾಗಾಣಿಕೆ ಮಾಡಲಾಗುತ್ತಿದೆ. ಆದರೆ ಸಮುದ್ರ ಮಾರ್ಗವನ್ನು ಬೃಹತ್ ಸಾಗಣೆಗೆ ಬಳಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. 

ಇನ್ನು ಪೂರೈಕೆ ಸರಪಳಿಯಲ್ಲಿನ ಅಡಚಣೆಯಿಂದಾಗಿ ಬ್ಲಾಕ್ ಮಾರ್ಕೆನ್ ನಲ್ಲಿ ಹೆರಾಯಿನ್ ಬೆಲೆಯೂ ಗಗನಕ್ಕೇರಿದೆ. ಈಗ ಪ್ರತಿ ಕೆಜಿ ಹೆರಾಯಿನ್ ಗೆ 7 ಕೋಟಿ ರೂ.  ತೆರಲಾಗುತ್ತಿದೆ. ಅಲ್ಲದೆ ಹೆರಾಯಿನ್ ಅನ್ನು ಮತ್ತಷ್ಟು ಕಲಬೆರಕೆ ಮಾಡಲಾಗುತ್ತದೆ ಮತ್ತು ದುಬಾರಿ ಬೆಲೆಗೆ ಮಾರಾಟ ಮಾಡಲಾಗುತ್ತದೆ ಎಂದು ಹೇಳಲಾಗಿದೆ.
 

SCROLL FOR NEXT