ರಾಜ್ಯ

ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಹಳಿ ತಪ್ಪಿದ ಎರಡು ಬೋಗಿಗಳು: ರಕ್ಷಣಾ ಕಾರ್ಯಾಚರಣೆ ಅಣಕು ಪ್ರದರ್ಶನ

Nagaraja AB

ಬೆಂಗಳೂರು: ಯಶವಂತಪುರ ರೈಲ್ವೆ ನಿಲ್ದಾಣದಲ್ಲಿಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯಿಂದ ರೈಲು ಹಳ್ಳಿ ತಪ್ಪಿದಾಗ ಕೈಗೊಳ್ಳಬೇಕಾದ ರಕ್ಷಣಾ ಕಾರ್ಯಾಚರಣೆ ಕುರಿತಂತೆ ಅಣಕು ಪ್ರದರ್ಶನ ನಡೆಸಲಾಯಿತು. 

ಎರಡು ಬೋಗಿಗಳು ಹಳಿ ತಪ್ಪಿದಾಗ ರೈಲ್ವೆ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಜಂಟಿಯಾಗಿ ಕಾರ್ಯಾಚರಣೆ ಕೈಗೊಂಡು ಗಾಯಾಳುಗಳನ್ನು ರಕ್ಷಿಸಿದರು. ಏಣಿಗಳನ್ನು ಹಾಕಿ ಕಿಟಕಿ ಮೂಲಕ ಬೋಗಿಯಲ್ಲಿದ್ದ  ಗಾಯಾಳುಗಳನ್ನು ಹೊರಗೆ ತಂದರು. ತದನಂತರ ಸ್ಟ್ರೇಚರ್ ಮೂಲಕ ಕರೆದೊಯ್ದು ಚಿಕಿತ್ಸೆ ಒದಗಿಸಿದರು.

ಬೋಗಿಯೊಳಗಿದ್ದ ಕೆಲ ರೈಲ್ವೆ ಸಿಬ್ಬಂದಿ ಪ್ರಯಾಣಿಕರಂತೆ ನಟಿಸಿದರು. ಸುತ್ತಮುತ್ತಲಿನ ಕಟ್ಟಡ ಮೇಲಿಂದ ನೂರಾರು ಪ್ರೇಕ್ಷಕರು ಈ ಅಣಕು ಕಾರ್ಯಾಚರಣೆಯನ್ನು ವೀಕ್ಷಿಸಿದರು.

SCROLL FOR NEXT