ರೇಣುಕಾಚಾರ್ಯ 
ರಾಜ್ಯ

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾಗಿ ರೇಣುಕಾಚಾರ್ಯ, ಜೀವರಾಜ್ ನೇಮಕ

ರಾಜ್ಯದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾಗಿ ಶಾಸಕ ಎಂ.ಪಿ ರೇಣುಕಾಚಾರ್ಯ ಹಾಗೂ ಮಾಜಿ ಶಾಸಕ ಡಿ.ಎನ್. ಜೀವರಾಜ್ ಅವರು ನೇಮಕಗೊಂಡಿದ್ದಾರೆ.‌

ಬೆಂಗಳೂರು: ರಾಜ್ಯದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾಗಿ ಶಾಸಕ ಎಂ.ಪಿ ರೇಣುಕಾಚಾರ್ಯ ಹಾಗೂ ಮಾಜಿ ಶಾಸಕ ಡಿ.ಎನ್. ಜೀವರಾಜ್ ಅವರು ನೇಮಕಗೊಂಡಿದ್ದಾರೆ.‌

ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಇವರನ್ನು ನೇಮಿಸಿ, ಸಂಪುಟ ದರ್ಜೆಯ ಸಚಿವರ ಸ್ನಾನಮಾನದೊಂದಿಗೆ, ಸಂಪುಟ ದರ್ಜೆ ಸಚಿವರಿಗೆ ಅನ್ವಯಿಸುವ ಎಲ್ಲ ಸೌಲಭ್ಯಗಳನ್ನು ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಹೊನ್ನಾಳಿ ಕ್ಷೇತ್ರದ ಶಾಸಕ ಎಂ.ಪಿ.ರೇಣುಕಾಚಾರ್ಯ ಮತ್ತು ಮಾಜಿ ಶಾಸಕ ಡಿ.ಎನ್.ಜೀವರಾಜ್ ಇಬ್ಬರೂ ಬಿ.ಎಸ್.ಯಡಿಯೂರಪ್ಪ ಸರ್ಕಾರದಲ್ಲೂ ರಾಜಕೀಯ ಕಾರ್ಯದರ್ಶಿಯಾಗಿದ್ದರು. ಇದೀಗ ಅವರನ್ನು ಮತ್ತೆ ನೇಮಕ ಮಾಡಲಾಗಿದೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪರಮಾಪ್ತರೆಂದೇ ಕರೆಸಿಕೊಳ್ಳುವ ಹೊನ್ನಾಳಿ ಕ್ಷೇತ್ರದ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರು, ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು. ಯಡಿಯೂರಪ್ಪ ಸಂಪುಟದಲ್ಲಿ ಅವರಿಗೆ ಮಂತ್ರಿ ಸ್ಥಾನ ಸಿಕ್ಕಿರಲಿಲ್ಲ. ಆದರೆ, ಯಡಿಯೂರಪ್ಪ ಅವರು, ರೇಣುಕಾಚಾರ್ಯ ಅವರನ್ನು ರಾಜಕೀಯ ಕಾರ್ಯದರ್ಶಿಯಾಗಿ ನೇಮಕ ಮಾಡಿಕೊಂಡರು. 

ಬಸವರಾಜ ಬೊಮ್ಮಾಯಿ ಅವರ ಸಂಪುಟದಲ್ಲೂ ಸಚಿವ ಸ್ಥಾನ ಸಿಗದ ಕಾರಣ, ರೇಣುಕಾಚಾರ್ಯ ಅವರಿಗೆ ಮತ್ತೆ ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆ ಸಿಕ್ಕಿದೆ. ಕೋವಿಡ್ ಸಂದರ್ಭದಲ್ಲಿ ಹೊನ್ನಾಳಿ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿ ಜನಮನ್ನಣೆಗಳಿಸಿದ್ದರು.

ಯಡಿಯೂರಪ್ಪ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಮಾಜಿ ಸಚಿವ ಡಿ.ಎನ್. ಜೀವರಾಜ್ ಅವರಿಗೂ ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆ ಒಲಿದು ಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

5 ರಾಜ್ಯಗಳ ಚುನಾವಣೆ: ರಾಜಕೀಯ ಪಕ್ಷಗಳ ಖರ್ಚು- ದೇಣಿಗೆ ಮಾಹಿತಿ ಬಹಿರಂಗ; ಆಡಳಿತಾರೂಢ ಬಿಜೆಪಿಗೆ ಬಂದಿದ್ದೆಷ್ಟು?

'ಚಿಂತೆ ಮಾಡುತ್ತ ಕೂರಬೇಡಿ'; ಟಾಕ್ಸಿಕ್ ಸೋಲು ಒಪ್ಪಿಕೊಂಡ ಯಶ್‌: ಆಪ್ತನ ಬಳಿ ರಾಕಿಂಗ್ ಸ್ಟಾರ್ ಹೇಳಿದ್ದೇನು?

Duleep Trophy: 'ತಗೋ... ತಗೋ..ಮೊದ್ಲು DRS ತಗೋ'.. ನಾಯಕ ಇಶಾನ್ ಕಿಶನ್ ಗೆ ದುಂಬಾಲು ಬಿದ್ದ 'ಸೂಪರ್ ಡೆಪ್ಯುಟಿ' Vaibhav Sooryavanshi, ಆಗಿದ್ದೇನು? Video

ಈ ದಶಕದ ಅಂತ್ಯಕ್ಕೆ AI ನಮ್ಮನ್ನೆಲ್ಲಾ ಕೊಲ್ಲುತ್ತೆ: Anthropic ಸಂಶೋಧಕನ ರಾಜೀನಾಮೆ; ಸುರಕ್ಷತಾ ಕಾರ್ಯನಿರ್ವಾಹಕರಿಂದಲೂ ಬೆಂಬಲ!

ಸೆಪ್ಟೆಂಬರ್ 12 ರಂದು ತಮಿಳುನಾಡಿನಾದ್ಯಂತ DMK ಪ್ರತಿಭಟನೆ! ಕಾರಣವೇನು ಗೊತ್ತಾ?