ರಾಜ್ಯ

ರಾಜಕೀಯ ನೇತಾರರಿಂದ ಪದೇ ಪದೇ ನಿಯಮ ಉಲ್ಲಂಘನೆ: ಒಂದೇ ಒಂದು ದೂರು ದಾಖಲಿಸದ ಬಿಬಿಎಂಪಿ!

Shilpa D

ಬೆಂಗಳೂರು: ಹೈಕೋರ್ಟ್ ಮತ್ತು ಬಿಬಿಎಂಪಿ ಆದೇಶಗಳನ್ನು ಒಂದು ತಿಂಗಳಲ್ಲಿ ಮೂರನೇ ಬಾರಿ  ಫ್ಲೆಕ್ಸ್  ನಿಯಮ ಉಲ್ಲಂಘಿಸಲಾಗಿದೆ. ಆದರೆ ಬಿಬಿಎಂಪಿ ಇನ್ನೂ ಒಂದೇ ಒಂದು ಪ್ರಕರಣ ದಾಖಲಿಸಿಲ್ಲ.

ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಂ ಅವರ ಪುತ್ರ ಜೀಶನ್ ಮತ್ತು ಬಿಜೆಪಿ ಮುಖಂಡ ಸಿ.ಟಿ.ರವಿ ಬೆಂಬಲಿಗರು  ಹಾಗೂ ಜಮೀರ್ ಅಹಮದ್ ಖಾನ್ ಅವರ ಬೆಂಬಲಿಗರು ಮತ್ತು ಕಾಂಗ್ರೆಸ್ ನಾಯಕರು ನಗರದಲ್ಲಿ ಫ್ಲೆಕ್ಸ್ ಮತ್ತು ಬ್ಯಾನರ್‌ ನಿಷೇಧಿಸುವ ಆದೇಶವನ್ನು ಉಲ್ಲಂಘಿಸಿದ್ದಾರೆ.

ಆಗಸ್ಟ್ 1 ರಂದು ಜಮೀರ್ ಅಹ್ಮದ್ ಅವರ ಜನ್ಮದಿನದಂದು, ಅವರ ಬೆಂಬಲಿಗರು ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದ ಬಳಿ ಕಾಕ್‌ಬರ್ನ್ ರಸ್ತೆ ಮತ್ತು ಸುತ್ತಮುತ್ತ ಫ್ಲೆಕ್ಸ್‌ಗಳನ್ನು ಹಾಕಿದರು. ಇತ್ತೀಚೆಗೆ ಚಾಮರಾಜನಗರ ಹಾಗೂ ಮಂಡ್ಯದ ಬಿಜೆಪಿ ಮುಖಂಡರು ವಿಧಾನಸೌಧದ ಬಳಿ ಹಾಗೂ ರಾಜಭವನ ರಸ್ತೆಯಲ್ಲಿ ಫ್ಲೆಕ್ಸ್‌ಗಳನ್ನು ಹಾಕಿದ್ದರು.

ಫ್ಲೆಕ್ಸ್‌ಗಳನ್ನು ಹಾಕುವವರ ವಿರುದ್ಧ ದಂಡ ವಿಧಿಸುವ ಮತ್ತು ಪ್ರಕರಣ ದಾಖಲಿಸುವ ಬಗ್ಗೆ ಬಿಬಿಎಂಪಿ  ಹೇಳುತ್ತದೆ. ಆದರೆ ಇದುವರೆಗೆ ಒಂದೇ ಒಂದು ಪ್ರಕರಣ ದಾಖಲಾಗಿಲ್ಲ ಎಂದು ನಾಗರಿಕರು ಆರೋಪಿಸಿದ್ದಾರೆ.

ನಗರದ ಸೌಂದರ್ಯವನ್ನು ವಿರೂಪಗೊಳಿಸಿದ್ದಕ್ಕಾಗಿ ಬಿಬಿಎಂಪಿ ಯಾರ ವಿರುದ್ಧವಾದರೂ  ಪ್ರಕರಣ ದಾಖಲಿಸಿದೆಯೇ ಎಂದು ಕಂದಾಯ ವಿಶೇಷ ಆಯುಕ್ತ ಆರ್‌ಎಲ್ ದೀಪಕ್ ಅವರನ್ನು ಪ್ರಶ್ನಿಸಲಾಯತು. ಈ ಸಂಬಂಧ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಅವರು. ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಪರಿಶೀಲಿಸಬೇಕು ಎಂದು ಹೇಳಿದರು.  1,000 ದಂಡ ವಿಧಿಸಲಾಗುವುದು ಮತ್ತು ವ್ಯಕ್ತಿಯ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗುವುದು ಎಂದು ಬಿಬಿಎಂಪಿ ಹೇಳಿತ್ತು.

SCROLL FOR NEXT