ರಾಜ್ಯ

ಕರ್ನಾಟಕ ಅರಣ್ಯ ಇಲಾಖೆ ಶ್ವಾನದಳದ ಮೊದಲ ಶ್ವಾನ 13 ವರ್ಷದ ರಾಣಾ ಇನ್ನಿಲ್ಲ

Sumana Upadhyaya

ಬೆಂಗಳೂರು: ಕರ್ನಾಟಕ ಅರಣ್ಯ ಇಲಾಖೆ ಶ್ವಾನದಳದ ಮೊದಲ ಶ್ವಾನ ರಾಣಾ ಇನ್ನಿಲ್ಲ, ವನ್ಯಜೀವಿ ಅಪರಾಧ ಪತ್ತೆ ದಳದ ಶ್ವಾನ ರಾಣಾ ಆಗಿತ್ತು. 13 ವರ್ಷದ ಜರ್ಮನ್ ಶೆಫರ್ಡ್ ಶ್ವಾನ ಇಂದು ಮಂಗಳವಾರ ಬಂಡೀಪುರ ಹುಲಿ ಅಭಯಾರಣ್ಯದಲ್ಲಿ ಮೃತಪಟ್ಟಿದೆ.

ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಮಾಹಿತಿ ನೀಡಿದ ಬಂಡೀಪುರ ಹುಲಿ ಅಭಯಾರಣ್ಯದ ನಿರ್ದೇಶಕ ರಮೇಶ್, ವಯೋಸಹಜ ಕಾಯಿಲೆಯಿಂದ ಶ್ವಾನ ಮೃತಪಟ್ಟಿದ್ದು, ರಾಣಾ ಸೇವೆಯಿಂದ ನಿವೃತ್ತಿಯಾಗಿ ಬೇರೆ ಶ್ವಾನವನ್ನು ನೇಮಕ ಮಾಡಿದ್ದರೂ ಕೂಡ ಅದರ ಸ್ಥಾನವನ್ನು ತುಂಬಲು ಬೇರೆ ನಾಯಿಗೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ರಾಣಾ ಕರ್ನಾಟಕ ಅರಣ್ಯ ಇಲಾಖೆ ಶ್ವಾನದಳಕ್ಕೆ 2014ರಲ್ಲಿ ಸೇರ್ಪಡೆಯಾಗಿತ್ತು. ಭೋಪಾಲ್ ನ 9ನೇ ಬೆಟಾಲಿಯನ್, ವಿಶೇಷ ಸಶಸ್ತ್ರ ಪಡೆ ಮತ್ತು ಶ್ವಾನದಳದಲ್ಲಿ ಅದಕ್ಕೆ ತರಬೇತಿಯಾಗಿತ್ತು. ಕಳೆದ 5 ವರ್ಷಗಳಲ್ಲಿ 50ಕ್ಕೂ ಹೆಚ್ಚು ಪ್ರಕರಣಗಳನ್ನು ಬೇಧಿಸುವಲ್ಲಿ ರಾಣಾ ಪಾತ್ರ ಮುಖ್ಯವಾಗಿದೆ. ಹುಲಿ ಬೇಟೆ ಪ್ರಕರಣಗಳು ಮತ್ತು ಶಸ್ತ್ರಾಸ್ತ್ರಗಳನ್ನು ಪತ್ತೆಹಚ್ಚುವಲ್ಲಿ ರಾಣಾ ಪಾತ್ರ ಬಹಳ ಮುಖ್ಯವಾಗಿದೆ. 

ಕರ್ನಾಟಕ ಅರಣ್ಯ ಇಲಾಖೆ ಮೊದಲ ಶ್ವಾನದಳ ತರಬೇತುದಾರ 32 ವರ್ಷದ ಪ್ರಕಾಶ್ ಹೊನ್ನಕೋರೆಯವರೇ ರಾಣನಿಗೂ ತರಬೇತಿ ಕೊಟ್ಟವರು. ಶ್ವಾನ ಜೊತೆ ಆತ್ಮೀಯತೆ ಹೊಂದಿದ್ದ ಅವರು ಇಂದು ಬಹಳ ಬೇಸರಗೊಂಡಿದ್ದಾರೆ. ಅವರೇ ರಾಣಾ ಜೊತೆ ಆರಂಭದಲ್ಲಿಯೂ ಕೊನೆಗೂ ಇದ್ದವರು. ಶ್ವಾನದಳಕ್ಕೆ ಸೇರಿಸಿ ಭೋಪಾಲ್ ನಲ್ಲಿ ತರಬೇತಿ ಕೊಡಿಸಿ 30ಕ್ಕೂ ಹೆಚ್ಚು ಪ್ರಕರಣಗಳನ್ನು ಬೇಧಿಸುವಲ್ಲಿ ಕಳೆದ 2 ವರ್ಷಗಳ ಕಾಲ ಇದ್ದರು.

ನಂತರ ವನ್ಯಜೀವಿ ಅಪರಾಧ ಪ್ರಕರಣವನ್ನು ಬೇಧಿಸುವ ತಂಡದ ಡಾ ಸಾಕೇತ್ ಎನ್ನುವವರು ರಾಣನನ್ನು ಅರಣ್ಯ ಇಲಾಖೆಗೆ ಪರಿಚಯಿಸಿದ್ದರು. ಅರಣ್ಯ ಇಲಾಖೆಯಿಂದ ಗೌರವವಾಗಿ ರಾಣಾನ ಅಂತಿಮ ವಿಧಿವಿಧಾನ ನೆರವೇರಿತು.

SCROLL FOR NEXT