ರಸ್ತೆಗೆ ಟೊಮೊಟೋ ಸುರಿದ ರೈತರು 
ರಾಜ್ಯ

ಟೊಮೊಟೊ ಬೆಲೆ ಕೆಜಿಗೆ 1 ರುಪಾಯಿಗೆ ಕುಸಿತ: ಚಿತ್ರದುರ್ಗದಲ್ಲಿ ರಸ್ತೆಗೆ ಬೆಳೆ ಸುರಿದು ರೈತರ ಆಕ್ರೋಶ!

ಟೊಮೇಟೊ ಬೆಲೆಯಲ್ಲಿ ತೀವ್ರ ಕುಸಿತ ಉಂಟಾಗಿದ್ದು, ಶುಕ್ರವಾರ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಚಿಕ್ಕಮ್ಮನಹಳ್ಳಿ ಗ್ರಾಮದ ರೈತರು ತಮ್ಮ ಉತ್ಪನ್ನಗಳನ್ನು ರಸ್ತೆಗೆ ಸುರಿದಿದ್ದಾರೆ.

ಚಿತ್ರದುರ್ಗ: ಟೊಮೇಟೊ ಬೆಲೆಯಲ್ಲಿ ತೀವ್ರ ಕುಸಿತ ಉಂಟಾಗಿದ್ದು, ಶುಕ್ರವಾರ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಚಿಕ್ಕಮ್ಮನಹಳ್ಳಿ ಗ್ರಾಮದ ರೈತರು ತಮ್ಮ ಉತ್ಪನ್ನಗಳನ್ನು ರಸ್ತೆಗೆ ಸುರಿದಿದ್ದಾರೆ.

ಈ ವರ್ಷ ಮೇ ತಿಂಗಳಲ್ಲಿ ಕೆಜಿಗೆ 100 ರೂ.ಗೆ ಮಾರಾಟವಾಗಿದ್ದ ಟೊಮೇಟೊ ಬೆಲೆಯಲ್ಲಿ ಭಾರಿ ಕುಸಿತ ಕಂಡಿದ್ದು, 15 ಕೆಜಿ ಇರುವ ಟೊಮ್ಯಾಟೊ ಬಾಕ್ಸ್‌ ಅನ್ನು 10 ರುಪಾಯಿಗೂ ತೆಗೆದುಕೊಳ್ಳಲು ವ್ಯಾಪಾರಸ್ಥರು ಸಿದ್ಧರಿಲ್ಲ. ಇದರಿಂದ ಬೇಸರಗೊಂಡ ರೈತರು ಟೊಮೆಟೊವನ್ನು ರಾಷ್ಟ್ರೀಯ ಹೆದ್ದಾರಿ 150ಎ ರಸ್ತೆ ಮೇಲೆ ಸುರಿದು ಟ್ರಾಕ್ಟರ್‌ಗಳನ್ನು ಚಲಾಯಿಸಿದರು.

ಈ ಪ್ರದೇಶದಲ್ಲಿ ಸಂಸ್ಕರಣಾ ಘಟಕಗಳ ಕೊರತೆಯೂ ಟೊಮೆಟೊ ಬೆಳೆಗಾರರ ​​ಮೇಲೆ ಪರಿಣಾಮ ಬೀರುತ್ತಿದೆ. ಇತ್ತೀಚೆಗಷ್ಟೇ ಟೊಮೇಟೊ ದಾಖಲೆಯ ಬೆಲೆ ಬಾಚಿದ್ದರಿಂದ ಕಲ್ಲಹಳ್ಳಿ, ತೊರೆಕೋಲಮ್ಮನಹಳ್ಳಿ, ನಾಯಕನಹಟ್ಟಿ ಮತ್ತಿತರ ಭಾಗದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಬಿತ್ತನೆ ಮಾಡಿದ್ದರು. ಆದರೆ ಮಾರುಕಟ್ಟೆಯಲ್ಲಿ ಉತ್ತಮ ಇಳುವರಿ  ಬಂದಿರುವುದರಿಂದ ಬೆಲೆ ಕುಸಿದಿದೆ.

ನಾಲ್ಕು ಎಕರೆಯಲ್ಲಿ ಟೊಮೇಟೊ ಬೆಳೆದಿದ್ದು, ಉತ್ತಮ ಇಳುವರಿ ಬಂದಿದೆ. ಶುಕ್ರವಾರ ನಾನು 150 ಬಾಕ್ಸ್ ಕೊಯ್ಲು ಮಾಡಿದ್ದ,  ಆದರೆ ವ್ಯಾಪಾರಿಗಳು ಬಾಕ್ಸ್ ಗೆ 10 ರೂಪಾಯಿಗೂ ತೆಗೆದುಕೊಳ್ಳಲು ಬರುತ್ತಿಲ್ಲ, ಹೀಗಾಗಿ ಬೀದರ್-ಶ್ರೀರಂಗಪಟ್ಟಣ ಹೆದ್ದಾರಿ ಪಕ್ಕದಲ್ಲಿ ಟೊಮೇಟೊ ಹಾಕಲು ನಿರ್ಧರಿಸಿದ್ದೇನೆ. ನನ್ನ ಹೂಡಿಕೆಯನ್ನು ಮರಳಿ ಪಡೆಯಲು ಸಾಧ್ಯವಾಗಲಿಲ್ಲ ಮತ್ತು ಈಗ ನಾನು 4 ಲಕ್ಷ ರೂಪಾಯಿ ಸಾಲವನ್ನು ಹೊಂದಿದ್ದೇನೆ ಎಂದು ಕಲ್ಲಹಳ್ಳಿಯ ರೈತ ಮಾರುತೇಶ್ ಹೇಳಿದ್ದಾರೆ.

ರಸ್ತೆಯಲ್ಲಿ ಸಾಗುವ ಜನರು, ಟ್ರಕ್ ಚಾಲಕರು ಮತ್ತು ಇತರರು ರಸ್ತೆ ಮೇಲೆ ಸುರಿದಿದ್ದ ಟೊಮೆಟೊಗಳನ್ನು  ತೆಗೆದುಕೊಂಡು ಹೋಗುತ್ತಿದ್ದ ದೃಶ್ಯ ಕಂಡು ಬಂತು. ಚಳ್ಳಕೆರೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ವಿರೂಪಾಕ್ಷಪ್ಪ ಮಾತನಾಡಿ, ‘ಉತ್ತಮ ಗುಣಮಟ್ಟದ ಟೊಮೇಟೊ ಬಾಕ್ಸ್‌ಗೆ 60-70 ರೂ.ಗೆ ಮಾರಾಟವಾಗಿತ್ತು. ಅಂದರೆ ಕೇವಲ ರೂ. ಪ್ರತಿ ಕೆಜಿಗೆ 1 ರೂ. ಇದ್ದು ಉತ್ಪಾದನಾ ವೆಚ್ಚವನ್ನು ಸಹ ಪೂರೈಸುವುದಿಲ್ಲ ಎಂದು ತಿಳಿಸಿದ್ದಾರೆ.

ಗುರುವಾರ ಪ್ರತಿ ಬಾಕ್ಸ್‌ಗೆ 140 ರೂ. ಇತ್ತು, ಆದರೂ ಉತ್ಪಾದನಾ ವೆಚ್ಚ ಭರಿಸಲು ಆಗಿಲ್ಲ.  ಚಿಕ್ಕಮ್ಮನಹಳ್ಳಿ ಮಧ್ಯ ಕರ್ನಾಟಕದಲ್ಲಿಯೇ ಅತಿ ದೊಡ್ಡ ಟೊಮೆಟೊ ಮಾರುಕಟ್ಟೆಯನ್ನು ಹೊಂದಿದೆ. ಕೂಡ್ಲಿಗಿ, ಬಳ್ಳಾರಿ, ಮೊಳಕಾಲ್ಮುರು, ಚಿತ್ರದುರ್ಗ, ಹಿರಿಯೂರು, ರಾಯದುರ್ಗ, ಸಿರಾ, ಚಳ್ಳಕೆರೆ ಮತ್ತಿತರೆಡೆ ಬೆಳೆಯುವ ಟೊಮೇಟೊ ಇಲ್ಲಿಗೆ ತರಲಾಗುತ್ತದೆ. ಬೆಂಗಳೂರು, ತೆಲಂಗಾಣ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರಕ್ಕೆ ಇಲ್ಲಿಂದ ಕಳುಹಿಸಲಾಗುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT