ಸಾಂಕೇತಿಕ ಚಿತ್ರ 
ರಾಜ್ಯ

ಅನ್ಯಕೋಮಿನ ಇಬ್ಬರು ಯುವಕರೊಂದಿಗೆ ಯುವತಿ ಪ್ರವಾಸ; ಪ್ರವಾಸಿಗರ ಮೇಲೆ ಹಿಂದೂ ಯುವಕರ ದಾಳಿ

ಕೊಡಗಿಗೆ ಆಗಮಿಸಿದ್ದ, ಪ್ರವಾಸಿಗರ ಮೇಲೆ ಹಿಂದೂ ಯುವಕರಿದ್ದ ಗುಂಪು ದಾಳಿ ನಡೆಸಿದೆ. ಮಡಿಕೇರಿಯ ಮಂಡಲಪಟ್ಟಿ ಪ್ರವಾಸ ತಾಣದಲ್ಲಿ ಈ ಘಟನೆ ನಡೆದಿದೆ.

ನವದೆಹಲಿ: ಕೊಡಗಿಗೆ ಆಗಮಿಸಿದ್ದ, ಪ್ರವಾಸಿಗರ ಮೇಲೆ ಹಿಂದೂ ಯುವಕರಿದ್ದ ಗುಂಪು ದಾಳಿ ನಡೆಸಿದೆ. ಮಡಿಕೇರಿಯ ಮಂಡಲಪಟ್ಟಿ ಪ್ರವಾಸ ತಾಣದಲ್ಲಿ ಈ ಘಟನೆ ನಡೆದಿದೆ. 

ಅನಾಮಿಕ ದುಷ್ಕರ್ಮಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸುತ್ತಿದ್ದಾರೆ. ನಂದಾ ಕಿಶನ್, ಸಮನ್ ಸಾಜಿದ್, ಶಂಶೀರ್ ಹಾಗೂ ಇಬ್ಬರು ಯುವತಿಯರು ಓರ್ವ ಹಿಂದೂ ಯುವತಿ ಮಡಿಕೇರಿಯ ಪ್ರವಾಸಕ್ಕೆ ಹೋಗಿದ್ದರು. ಯುವಕರು ಪ್ರವಾಸಕ್ಕೆ ತೆರಳಲು ಪೋಷಕರಿಂದಲೂ ಅನುಮತಿ ಪಡೆದಿದ್ದರು. ಪ್ರವಾಸ ಮುಗಿಸಿ ವಾಪಸ್ಸಾಗಲು ಕಾರಿನ ಬಳಿ ಬಂದಾಗ ಅವರನ್ನು ಐವರು ಯುವಕರ ಗುಂಪು ತಡೆದಿದೆ.

ಹಿಂದೂ ಯುವತಿಯೊಬ್ಬರು ಇಬ್ಬರು ಮುಸ್ಲಿಮ್ ಯುವಕರೊಂದಿಗೆ ಪ್ರವಾಸಕ್ಕೆ ಬಂದಿದ್ದರ ವಿರುದ್ಧ ಯುವಕರ ಗುಂಪು ಆಕ್ಷೇಪ ವ್ಯಕ್ತಪಡಿಸಿದೆ. ತಕ್ಷಣವೇ 5 ಯುವಕರೊಂದಿಗೆ ಇನ್ನೂ ಒಂದಷ್ಟು ಮಂದಿ ಸೇರಿಕೊಂಡು ಸಮನ್, ಶಂಶೀರ್ ವಿರುದ್ಧ ದಾಳಿ ನಡೆಸಿದ್ದಾರೆ, ಇಬ್ಬರು ಯುವತಿಯರ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಲಾಗಿದ್ದು ದಾಳಿಯ ಘಟನೆಯನ್ನು ಹೆಮ್ಮೆಯಿಂದ ಸಾಮಾಜಿಕ ಜಾಲತಾಣದಲ್ಲಿ ವಿವರಿಸಲಾಗಿದೆ.

ನಂದಾ ಕಿಶನ್ ಅವರು ಅನಾಮಿಕ ದುಷ್ಕರ್ಮಿಗಳ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮೆ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್