ರಾಜ್ಯ

ತುಮಕೂರು: ಪೋಸ್ಟರ್ ನಲ್ಲಿ ಮಹಾತ್ಮಾ ಗಾಂಧಿ- ನಾಥೂರಾಮ್ ಗೋಡ್ಸೆ ಫೋಟೋ; ಉದ್ವಿಗ್ನ ಸ್ಥಿತಿಯನ್ನು ತಪ್ಪಿಸಿದ ಪೊಲೀಸರು

Sumana Upadhyaya

ತುಮಕೂರು: ವೀರ ಸಾವರ್ಕರ್ ಫ್ಲೆಕ್ಸ್ ವಿವಾದ ತುಮಕೂರಿನಲ್ಲಿ ಮಹಾತ್ಮಾ ಗಾಂಧಿ ಮತ್ತು ಅವರನ್ನು ಹತ್ಯೆ ಮಾಡಿದ ನಾಥೂರಾಮ್ ಗೋಡ್ಸೆಯ ಭಾವಚಿತ್ರವಿರುವ ಫ್ಲೆಕ್ಸ್ ನ್ನು ಹಾಕಿ ವಿವಾದಕ್ಕೆ ಎಡೆಮಾಡಿದೆ. ಕೊನೆಗೆ ಪೊಲೀಸರು ಮಧ್ಯೆ ಪ್ರವೇಶಿಸಿ ಫ್ಲೆಕ್ಸ್ ತೆಗೆಸಿ ಆಗಬಹುದಾಗಿದ್ದ ಉದ್ವಿಗ್ನ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.

ತುಮಕೂರಿನ ಮಧುಗಿರಿ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಮೊನ್ನೆ 76ನೇ ಸ್ವಾತಂತ್ರ್ಯ ದಿನ ಕಾರ್ಯಕ್ರಮದಲ್ಲಿ ಭಗತ್ ಸಿಂಗ್ ಯುವ ಸಂಘಟನೆ ದಂಡಿನ ಮಾರಮ್ಮ ದೇವಸ್ಥಾನದಲ್ಲಿ ಮಹಾತ್ಮಾ ಗಾಂಧಿ ಮತ್ತು ನಾಥೂರಾಮ್ ಗೋಡ್ಸೆ ಇಬ್ಬರೂ ಇರುವ ಫ್ಲೆಕ್ಸ್ ನ್ನು ಹಾಕಿತ್ತು. 

ಸೋಷಿಯಲ್ ಮೀಡಿಯಾದಲ್ಲಿ ಇದು ವೈರಲ್ ಆಗುತ್ತಿದ್ದಂತೆ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ನಿನ್ನೆ ಮಂಗಳವಾರ ಫ್ಲೆಕ್ಸ್ ನ್ನು ತೆಗೆಸಿದ್ದಾರೆ. ಅಮೃತ ಭಾರತಿಗೆ ಕನ್ನಡದ ಆರತಿ ಶೀರ್ಷಿಕೆ ಪೋಸ್ಟರ್ ನಲ್ಲಿತ್ತು. ಅದರಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ಭಗತ್ ಸಿಂಗ್, ರಾಣಿ ಚೆನ್ನಮ್ಮ, ಚಂದ್ರಶೇಖರ ಆಜಾದ್, ಸುಭಾಷ್ ಚಂದ್ರ ಬೋಸ್ ಮತ್ತಿತರರ ಫೋಟೋಗಳಿದ್ದವು. 

ಆದರೆ ಅದರಲ್ಲಿ ನಾಥೂರಾಮ್ ಗೋಡ್ಸೆಯ ಚಿತ್ರವನ್ನು ಮುದ್ರಿಸಲಾಗಿದೆ. ಪೊಲೀಸರು ಸ್ವಪ್ರೇರಿತವಾಗಿ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

SCROLL FOR NEXT