ಸಾಂದರ್ಭಿಕ ಚಿತ್ರ 
ರಾಜ್ಯ

ಭಟ್ಕಳ: ಬ್ರೆಡ್ ತರಲು ಹೋಗಿದ್ದ ಬಾಲಕ ಅಪಹರಣ; ಕಾರಿನಲ್ಲಿ ಬಂದು ದುಷ್ಕರ್ಮಿಗಳ ಕೃತ್ಯ, ಸಿಸಿಟಿವಿಯಲ್ಲಿ ದೃಶ್ಯ ಸೆರೆ

ತಾಲೂಕಿನ ಆಜಾದ್ ನಗರದಲ್ಲಿ ನಿನ್ನೆ ರಾತ್ರಿ 8 ವರ್ಷದ ಬಾಲಕನನ್ನು ಅಪಹರಿಸಿದ ಘಟನೆ ನಡೆದಿದೆ. ಬಾಲಕ ಅಲಿ ಸಾದಾ (8) ಅಂಗಡಿಯಿಂದ ಬ್ರೆಡ್ ತರಲು ಹೋಗಿದ್ದ ಸಂದರ್ಭದಲ್ಲಿ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಅಪಹರಿಸಿದ್ದಾರೆ

ಭಟ್ಕಳ: ತಾಲೂಕಿನ ಆಜಾದ್ ನಗರದಲ್ಲಿ ನಿನ್ನೆ ರಾತ್ರಿ 8 ವರ್ಷದ ಬಾಲಕನನ್ನು ಅಪಹರಿಸಿದ ಘಟನೆ ನಡೆದಿದೆ. ಬಾಲಕ ಅಲಿ ಸಾದಾ (8) ಅಂಗಡಿಯಿಂದ ಬ್ರೆಡ್ ತರಲು ಹೋಗಿದ್ದ ಸಂದರ್ಭದಲ್ಲಿ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಅಪಹರಿಸಿದ್ದಾರೆ.

ಕೊಕ್ತಿ ಆಜಾದ ನಗರ ನಿವಾಸಿ ಅಲಿ ಸಾದಾ ಇಸ್ಲಾಂ ಸಾದಾ ಅಪಹರಣವಾದ ಬಾಲಕ. ಈತನ ತಂದೆ ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ. ಶನಿವಾರ ಸಂಜೆಯಿಂದ ಬಾಲಕನ ಮನೆ ಮುಂದೆ ಅಪರಿಚಿತ ಕಾರೊಂದು ಸಂಚರಿಸುತ್ತಿದ್ದ ದೃಶ್ಯ ಹಾಗೂ ಕಾರಿನಲ್ಲಿ ಬಾಲಕನನ್ನು ಅಪಹರಣ ಮಾಡಿಕೊಂಡು ಹೋಗಿರುವ ದೃಶ್ಯ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ದಾಖಲಾಗಿದೆ.

ಭಟ್ಕಳ ಶಹರ ಠಾಣೆ ಸಿ.ಪಿ.ಐ ದಿವಾಕರ ಅವರ ನೇತೃತ್ವದಲ್ಲಿ ಬಾಲಕನ ರಕ್ಷಣೆಗೆ ಹಾಗೂ ಅಪಹರಣಕಾರರ ಪತ್ತೆಗೆ ಹುಡುಕಾಟ ಆರಂಭವಾಗಿದೆ. ಭಾನುವಾರ ಬೆಳಿಗ್ಗೆಯವರೆಗೂ ಆರೋಪಿಗಳು ಪತ್ತೆಯಾಗಿಲ್ಲ.

ಮಾಹಿತಿ ಲಭಿಸಿದ ಕೂಡಲೇ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ. ನಗರದ ವಿವಿಧೆಡೆ ಪೊಲೀಸರನ್ನು ನಿಯೋಜಿಸಿ ತನಿಖೆ ನಡೆಸಲಾಗುತ್ತಿದೆ. ಸಂಜೆಯಿಂದ ಇದೇ ಪ್ರದೇಶದಲ್ಲಿ ವಾಹನ ಸುತ್ತುತ್ತಿರುವುದು ಕಂಡು ಬಂದಿದ್ದು ಅಪಹರಣದ ವೇಳೆ ವ್ಯಾನ್ ಹಿಂದೆ ದ್ವಿಚಕ್ರ ವಾಹನವೂ ಕಾಣಿಸಿಕೊಂಡಿದೆ. ಪೊಲೀಸರು ಇತರ ಮನೆಗಳ ಹೊರಗಿನ ಸಿಸಿಟಿವಿ ದೃಶ್ಯಗಳನ್ನು ಸಹ ಪಡೆದುಕೊಂಡಿದ್ದು, ಕೂಲಂಕಷವಾಗಿ ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT