ವಿಜಯಪುರ ಕಾಂಗ್ರೆಸ್ ಕಚೇರಿ ಗೋಡೆಗೆ ವೀರ ಸಾವರ್ಕರ್ ಫೋಟೋ ಅಂಟಿಸಿದ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ 
ರಾಜ್ಯ

ವಿಜಯಪುರ ಕಾಂಗ್ರೆಸ್ ಕಚೇರಿ ಗೋಡೆಗೆ ವೀರ ಸಾವರ್ಕರ್ ಫೋಟೋ: ಆರೋಪಿ ಬಸವರಾಜ ಹೂಗಾರ ಬಂಧಿಸುವಂತೆ ಆಗ್ರಹ

ರಾಜ್ಯದಲ್ಲಿ ವೀರ ಸಾವರ್ಕರ್​ ಭಾವಚಿತ್ರ ಅಂಟಿಸುವ ವಿವಾದ ಕಾಡ್ಗಿಚ್ಚಿನಂತೆ ವಿವಿಧ ಜಿಲ್ಲೆಗಳಿಗೆ ಹಬ್ಬುತ್ತಿದೆ. ನಿನ್ನೆ ವಿಜಯಪುರ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಸಾವರ್ಕರ್ ಫೋಟೋಗಳನ್ನು ಹಿಂದೂಪರ ಸಂಘಟನೆ ಸದಸ್ಯರೊಬ್ಬರು ಅಂಟಿಸಿದ್ದಾರೆ.

ವಿಜಯಪುರ: ರಾಜ್ಯದಲ್ಲಿ ವೀರ ಸಾವರ್ಕರ್​ ಭಾವಚಿತ್ರ ಅಂಟಿಸುವ ವಿವಾದ ಕಾಡ್ಗಿಚ್ಚಿನಂತೆ ವಿವಿಧ ಜಿಲ್ಲೆಗಳಿಗೆ ಹಬ್ಬುತ್ತಿದೆ. ನಿನ್ನೆ ವಿಜಯಪುರ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಸಾವರ್ಕರ್ ಫೋಟೋಗಳನ್ನು ಹಿಂದೂಪರ ಸಂಘಟನೆ ಸದಸ್ಯರೊಬ್ಬರು ಅಂಟಿಸಿದ್ದಾರೆ.

ಇದೇ ಸಂದರ್ಭದಲ್ಲಿ ಹಲವು ಹಿಂದೂ ಸಂಘಟನೆಗಳ ಕಾರ್ಯಕರ್ತರು ಇದೇ ತಿಂಗಳು ಕೊನೆಗೆ ಇರುವ ಹಿಂದೂಗಳ ಪ್ರಮುಖ ಹಬ್ಬ ಗಣೇಶ ಚತುರ್ಥಿ ಅಂಗವಾಗಿ 9 ದಿನಗಳ ಕಾಲ ವೀರ ಸಾವರ್ಕರ್ ಭಾವಚಿತ್ರವನ್ನು ಅಲ್ಲಲ್ಲಿ ನೇತಾಡಿಸಲು  ತೀರ್ಮಾನಿಸಿದ್ದಾರೆ. ನಿನ್ನೆ ಕಾಂಗ್ರೆಸ್ ಕಚೇರಿ ಹೊರಗೆ ಹಿಂದೂಪರ ಸಂಘಟನೆ ಸದಸ್ಯರು  ತಡರಾತ್ರಿ ಆಗಮಿಸಿ ಹತ್ತಕ್ಕೂ ಹೆಚ್ಚು ಫೋಟೋ ಅಂಟಿಸಿದ್ದಾರೆ. ಕಾಂಗ್ರೆಸ್​ ಕಚೇರಿಯ ಬಾಗಿಲು, ಬೋರ್ಡ್, ಗೋಡೆಗಳಿಗೆ ಫೋಟೋ  ಅಂಟಿಸಿ ಪರಾರಿಯಾಗಿದ್ದಾರೆ.

ಇಂದು ಬೆಳಗ್ಗೆ ಕಾಂಗ್ರೆಸ್ ಕಚೇರಿಗೆ ಸಿಬ್ಬಂದಿ ಬಂದು ನೋಡಿದಾಗ ವಿಷಯ ಗಮನಕ್ಕೆ ಬಂದಿದ್ದು ಪೊಲೀಸರಿಗೆ ವಿಷಯ ಮುಟ್ಟಿಸಿದರು. ಪೊಲೀಸರ ಭದ್ರತೆ ನಡುವೆ ಕಾಂಗ್ರೆಸ್ ಕಾರ್ಯಕರ್ತರು ಇಂದು ವಿ ಡಿ ಸಾವರ್ಕರ್ ಫೋಟೋಗಳನ್ನು ಕಚೇರಿ ಗೋಡೆಯಿಂದ ಕಿತ್ತೆಸೆದರು. 

ಇಂದು ಬಿಜೆಪಿ ಯುವ ಮೋರ್ಚಾ ಮಹಾನಗರ ಪಾಲಿಕೆ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಘೋಷಿಸಿದ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ಕಚೇರಿ ಹಾಗೂ ಸುತ್ತಮುತ್ತ ಪೊಲೀಸ್ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.

ಸಾವರ್ಕರ್ ಫೋಟೋ ಅಂಟಿಸಿದ್ದು ನಾನೇ: ಇನ್ನು ಇಂದು ಮಾಧ್ಯಮ ಪ್ರತಿನಿಧಿಗಳ ಮುಂದೆ ಹೇಳಿಕೆ ನೀಡಿರುವ ವಿಜಯಪುರ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಬಸವರಾಜ ಹೂಗಾರ, ಹುಬ್ಬಳ್ಳಿಯಲ್ಲಿ ಕಾಂಗ್ರೆಸ್​ನವರು ಸಾವರ್ಕರ್ ಫೋಟೋ ಸುಟ್ಟಿದ್ದರು. ಈ ಮೂಲಕ ವಿ.ಡಿ.ಸಾವರ್ಕರ್​​ಗೆ ಅಪಮಾನ ಮಾಡಿದ್ದಾರೆ. ಇಂಥ ವಿವಾದ ಸೃಷ್ಟಿಸುವ ಕೆಲಸ ಪದೇಪದೆ ಮಾಡುತ್ತಿದ್ದಾರೆ.

ವಿವಾದ ಅಂತ್ಯಗೊಳಿಸಲು ಕಾಂಗ್ರೆಸ್ ಕಚೇರಿ ಗೋಡೆಗೆ ಸಾವರ್ಕರ್ ಫೋಟೋ ಅಂಟಿಸಿದ್ದೇನೆ. ಸಾವರ್ಕರ್ ಫೋಟೋ ಅಂಟಿಸಿದ್ದು ದೊಡ್ಡ ಅಪರಾಧವಲ್ಲ. ಸಾವರ್ಕರ್ ಬಗ್ಗೆ ಮಾತನಾಡುವುದನ್ನು ಇಲ್ಲಿಗೆ ನಿಲ್ಲಿಸಿದರೆ ಸರಿ, ಇಲ್ಲದಿದ್ದರೆ ನಾಳೆ ‘ಕೈ’​​ ನಾಯಕರ ಮನೆಗಳಿಗೆ ಫೋಟೋ ಹೋಗುತ್ತೆ, ಅದರಲ್ಲಿ ಯಾವುದೇ ಅನುಮಾನ ಬೇಡ ಎಂದು ಹೇಳಿದ್ದಾರೆ. ಲಜ್ಜೆಗೇಡಿತನ ಕೆಲಸ ಮಾಡುತ್ತಿರುವ ಕಾಂಗ್ರೆಸ್​ಗೆ ತಕ್ಕ ಪಾಠ ಕಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದ ಅವರು, ಇಂದು ವಿಜಯಪುರ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ.

ಹೂಗಾರ್ ಅವರನ್ನು ಬಂಧಿಸಬೇಕು: ಕಾಂಗ್ರೆಸ್ ಕಚೇರಿ ಗೋಡೆಗೆ ಸಾವರ್ಕರ್ ಫೋಟೋ ಅಂಟಿಸಿರುವ ಬಸವರಾಜ ಹೂಗಾರ ಅವರನ್ನು ಪೊಲೀಸರು ತಕ್ಷಣ ಬಂಧಿಸಬೇಕು, ಒಂದು ವೇಳೆ ಪೊಲೀಸರು ಬಂಧಿಸುವಲ್ಲಿ ವಿಫಲರಾದರೆ ಬಿಜೆಪಿಯವರು ವಿರೋಧಿಸುವ ಟಿಪ್ಪು ಸುಲ್ತಾನ್ ಸೇರಿದಂತೆ ಸ್ವಾತಂತ್ರ್ಯ ಹೋರಾಟಗಾರರ ಫೋಟೋಗಳನ್ನು ಬಿಜೆಪಿ ಕಚೇರಿ ಹೊರಗೆ ಅಂಟಿಸುತ್ತೇವೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಜು ಅಲಗೂರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

SCROLL FOR NEXT