ರಾಜ್ಯ

ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರಿ ನೌಕರಿ ಮಾತ್ರ; 50 ಲಕ್ಷ ರು. ಪರಿಹಾರ, ನಿವೇಶನ ಇಲ್ಲ: ಸರ್ಕಾರದ ನಿರ್ಧಾರಕ್ಕೆ ವ್ಯಾಪಕ ಟೀಕೆ

Shilpa D

ಬೆಂಗಳೂರು: ಕರ್ತವ್ಯನಿರತ ಸಮಯದಲ್ಲಿ ಹುತಾತ್ಮರಾದ ಯೋಧರ ಕುಟುಂಬದ ಅವಲಂಬಿತ ಸದಸ್ಯರಿಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ನೌಕರಿ ಕಲ್ಪಿಸುವ ಕುರಿತು ಸಚಿವ ಸಂಪುಟ ಸಭೆ ಮಹತ್ವದ ತೀರ್ಮಾನ ಕೈಗೊಂಡಿದೆ.

ಹುತಾತ್ಮ ಯೋಧರ ಕುಟುಂಬಸ್ಥರಿಗೆ ಪರಿಹಾರ ಧನ ಮತ್ತು ಸೈಟ್ ಕೊಡುವುದರ ಬದಲು, ಅನಕಂಪದ ಆಧಾರದಲ್ಲಿ ಸರ್ಕಾರಿ ನೌಕರಿ ಕೊಡ್ತೇವೆ. ಇನ್ನು ಕೆಪಿಎಸ್ ಸಿ ಆಯ್ಕೆಯಲ್ಲಿ ಡಿ ಗ್ರೂಪ್ ಗೆ ವೈವಾ ಮಾಡದೇ, ನೇರ ಸಂದರ್ಶನ ಮೂಲಕ ನೇಮಕಾತಿ ಮಾಡಲು ಕಾಯ್ದೆಗೆ ತಿದ್ದುಪಡಿ ತರಲಾಗುವುದು ಎಂದು ಸಚಿವ ಸಂಪುಟ ಸಭೆ ನಂತರ ಕಾನೂನು ಮತ್ತು ಸಂಸದೀಯ ಖಾತೆ ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದ್ದಾರೆ.

ಹುತಾತ್ಮ ಸೈನಿಕ ಕುಚುಂಬಗಳಿಗೆ 60x40 ಚದರ ಅಡಿ ನಿವೇಶನ ಮತ್ತು 50 ಲಕ್ಷ ರೂ.ಗಳನ್ನು ನೀಡುವುದಿಲ್ಲ,  ಇದು ರಾಜ್ಯ ಸರ್ಕಾರದಿಂದ ಸಹಾಯವನ್ನು ಪಡೆಯದ ಎಲ್ಲರಿಗೂ ಅನ್ವಯಿಸುತ್ತದೆ ಎಂದು ಅವರು ಹೇಳಿದರು. "ಕರ್ನಾಟಕದಲ್ಲಿ, ಸುಮಾರು 400 ಕ್ಕೂ ಹೆಚ್ಚು ಕುಟುಂಬಗಳಿವೆ, ಅದರಲ್ಲಿ 200 ಅರ್ಹರಾಗಿದ್ದಾರೆ. ನಮ್ಮ ಆರಂಭಿಕ ಅಂದಾಜಿನ ಪ್ರಕಾರ, ಪರಿಹಾರದ ಆಧಾರದ ಮೇಲೆ ಉದ್ಯೋಗ ನೀಡಲಾಗುವುದು ಎಂದು ಹೇಳಿದ್ದಾರೆ.

ಭಾರತದಲ್ಲಿ ಅನೇಕ ರಾಜ್ಯಗಳು ಪರೀಕ್ಷೆಯಿಲ್ಲದೆ ಹುತಾತ್ಮ ಯೋಧರ ಕುಟುಂಬಗಳಿಗೆ ಸರ್ಕಾರಿ ಉದ್ಯೋಗ ಭೂಮಿ ಮತ್ತು ಪರಿಹಾರ  ಹಣ ನೀಡುತ್ತಿವೆ. ಕರ್ನಾಟಕ ಸರ್ಕಾರ ಹುತಾತ್ಮರ ಕುಟುಂಬದ ಸದಸ್ಯರಿಗೆ  ಕೆಲಸ ಕೊಡುವ ಮೂಲಕ ಕನಿಷ್ಠ ಸೌಲಭ್ಯ ನೀಡುತ್ತಿದೆ. ಯಾವುದೇ ಹೆಚ್ಚಿನ ಸವಲತ್ತು ನೀಡಲು ಆಸಕ್ತಿ ತೋರುತ್ತಿಲ್ಲ ಎಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಮಾಜಿ ನಿರ್ದೇಶಕ ಬ್ರಿಗೇಡಿಯರ್ ರವಿ ಮುನಿಸ್ವಾಮಿ  ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ನಿಯಮಾನುಸಾರ ರಾಜ್ಯ ಸರ್ಕಾರ ಎರಡು ಎಕರೆ ನೀರಾವರಿ ಭೂಮಿ ಅಥವಾ ಎಂಟು ಎಕರೆ ಖುಷ್ಕಿ ಜಮೀನು ನೀಡಬೇಕಿದ್ದರೂ ಸರ್ಕಾರ ಅದನ್ನು ಪಾಲಿಸುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಹುತಾತ್ಮರ ಕುಟುಂಬ ಸದಸ್ಯರು 20 ವರ್ಷಗಳ ನಂತರವೂ ಈ ಸೌಲಭ್ಯಗಳನ್ನು ಪಡೆಯಲು ಕಚೇರಿಯಿಂದ ಕಚೇರಿಗೆ ಅಲೆದಾಡುವುದನ್ನು ನಾನು ನೋಡಿದ್ದೇನೆ. ದೇಶಕ್ಕಾಗಿ  ಪ್ರಾಣ ಕಳೆದುಕೊಳ್ಳುವ ಕುಟುಂಬದ ಸದಸ್ಯರನ್ನು ನಾವು ನಡೆಸಿಕೊಳ್ಳುವುದು ಇದೇ ರೀತಿನಾ?  ಎಂದು ಬ್ರಿಗೇಡಿಯರ್ ಮುನಿಸ್ವಾಮಿ ಪ್ರಶ್ನಿಸಿದ್ದಾರೆ. ರಾಜ್ಯ ಸರಕಾರ ಕನಿಷ್ಠ 1 ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಹುತಾತ್ಮರಾದ ಯೋಧರ ವಿಧವೆ ಪತ್ನಿಯರಿಗೆ  ಸರ್ಕಾರ ಯಾವ ರೀತಿಯ ಕೆಲಸ ನೀಡುತ್ತದೆ. “ಇದು ಗ್ರೂಪ್ ಡಿ ಕೇಡರ್ ಆಗಿರುತ್ತದೆ.  ವೋಟಿಗಾಗಿ ನೋಟು ಹಂಚುವ ಸರ್ಕಾರ, ಆ ಹಣವನ್ನು ಹುತಾತ್ಮ ಯೋಧರ ಕುಟುಂಬಗಳಿಗೆ ನೀಡಲಿ ಎಂದು ಆಗ್ರಹಿಸಿದ್ದಾರೆ.  ಅವರಿಗೆ ಸರ್ಕಾರಿ ನೌಕರಿ, ಭೂಮಿ ಮತ್ತು 1 ಕೋಟಿ ರೂಪಾಯಿ ಪರಿಹಾರ ನೀಡಬೇಕು' ಎಂದು ಒತ್ತಾಯಿಸಿದರು.

SCROLL FOR NEXT