ರಾಜ್ಯ

ಶುಕ್ರವಾರ ಬೆಳಗ್ಗೆ ಮೂರು ಗಂಟೆಗಳಲ್ಲಿಯೇ ಬೆಂಗಳೂರಿನಲ್ಲಿ 41 ಮಿಮೀ ಮಳೆ

Ramyashree GN

ಬೆಂಗಳೂರು: ಶುಕ್ರವಾರ ಬೆಳಗ್ಗೆ ಎದ್ದ ಬೆಂಗಳೂರಿಗರಿಗೆ ಮಳೆಯನ್ನು ಕಂಡು ಆಶ್ಚರ್ಯಚಕಿತರಾದರು. ನಗರದಲ್ಲಿ ಶುಕ್ರವಾರ ಮುಂಜಾನೆ 3 ರಿಂದ 6 ಗಂಟೆಯ ನಡುವೆ 41.4 ಮಿಮೀ ಮಳೆ ದಾಖಲಾಗಿದ್ದು, ಬಿಬಿಎಂಪಿ ವ್ಯಾಪ್ತಿಯಲ್ಲಿ ಬಹುತೇಕ ರಸ್ತೆಯಲ್ಲಿ ಗುಂಡಿಗಳು ಬಿದ್ದಿವೆ.

ಗುರುವಾರ ಮಧ್ಯರಾತ್ರಿಯಿಂದ ಶುಕ್ರವಾರ ಬೆಳಗಿನ ಜಾವದವರೆಗೆ ನಗರದ 42 ಸ್ಥಳಗಳಲ್ಲಿ ಭಾರಿ ಮಳೆಯಾಗಿದೆ ಎಂದು ಹವಾಮಾನ ಇಲಾಖೆಯ ಅಂಕಿಅಂಶಗಳು ತೋರಿಸಿವೆ.

ಶುಕ್ರವಾರ ಬೆಳಗ್ಗೆ 6 ಗಂಟೆವರೆಗೆ ಗೊಟ್ಟಿಗೆರೆಯಲ್ಲಿ 61ಮಿಮೀ, ಅಂಜನಾಪುರ 60 ಮಿಮೀ, ಹೆಮ್ಮಿಗೆಪುರ 53 ಮಿಮೀ, ದೊರೆಸಾನಿಪಾಳ್ಯ 51ಮಿಮೀ, ಅರಕೆರೆ 49 ಮಿಮೀ, ಬಿಳೇಕಹಳ್ಳಿ 48 ಮಿಮೀ, ಬೇಗೂರು 42ಮಿಮೀ, ಗೊಲ್ಲಹಳ್ಳಿ 41ಮಿಮೀ, ರಾಜಮಹಲ್ 36 ಮಿಮೀ, ರಾಜರಾಜೇಶ್ವರಿ ನಗರ 34 ಮಿಮೀ, ರಾಜಮಹಲ್ 36 ಮಿಮೀ, ಚಾಮಪೇಟೆ 3 ಮಿಮೀ, ಚಾಮಪೇಟೆ 09 ಮಿಮೀ, ಎಚ್‌ಎಎಲ್ 30 ಮಿಮೀ, ಕೆಂಗೇರಿ 30 ಮಿಮೀ ಮತ್ತು ಕಾಟನ್‌ಪೇಟೆಯಲ್ಲಿ 29 ಮಿಲಿ ಮೀಟರ್ ಮಳೆಯಾಗಿದೆ.

ಶುಕ್ರವಾರದಿಂದ ಭಾನುವಾರದವರೆಗೆ ದಕ್ಷಿಣ ಒಳನಾಡಿನ ಕೆಲವು ಭಾಗಗಳಲ್ಲಿ ಗುಡುಗು ಸಿಡಿಲು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆಯ ಪ್ರಕಟಣೆ ತಿಳಿಸಿದೆ.

SCROLL FOR NEXT