ರಾಜ್ಯ

ಕ್ಷಯರೋಗ ಸುಲಭ ಪತ್ತೆಗೆ ಸಾಧನ ಕಂಡು ಹಿಡಿದ ಐಐಎಸ್'ಸಿ ವಿದ್ಯಾರ್ಥಿಗೆ ಬರ್ಲಿನ್ ಶೃಂಗಸಭೆಯಲ್ಲಿ ಬಹುಮಾನ!

Manjula VN

ಬೆಂಗಳೂರು: ಜರ್ಮನಿಯ ಬರ್ಲಿನ್‌ನಲ್ಲಿ ನಡೆದ ಅಂತರಾಷ್ಟ್ರೀಯ ಶೃಂಗಸಭೆಯಲ್ಲಿ ಐಐಎಸ್‌ಸಿ ವಿದ್ಯಾರ್ಥಿಯೊಬ್ಬರು ಕ್ಷಯರೋಗ (ಟಿಬಿ) ರೋಗವನ್ನು ಅಗ್ಗದ ಮತ್ತು ಹೆಚ್ಚು ಸುಲಭವಾಗಿ ಪತ್ತೆಹಚ್ಚುವ ಸಾಧನ ಕಂಡು ಹಿಡಿದಕ್ಕಾಗಿ ಮೂರನೇ ಬಹುಮಾನವನ್ನು ಗೆದ್ದಿದ್ದಾರೆ.

ಐಐಎಸ್‌ಸಿಯ ಕೆಮಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಪಿಎಚ್‌ಡಿ ವಿದ್ವಾಂಸರಾದ ಆಯುಷಿ ಚೌಹಾಣ್ ಅವರಿಗೆ ಜರ್ಮನಿಯಲ್ಲಿ ನಡೆದ ಫಾಲಿಂಗ್ ವಾಲ್ಸ್ ಲ್ಯಾಬ್ ಮತ್ತು ಸೈನ್ಸ್ ಸಮ್ಮಿಟ್ 2022ರಲ್ಲಿ 'ವರ್ಷದ ಉದಯೋನ್ಮುಖ ಪ್ರತಿಭೆಗಳ ಬ್ರೇಕ್ ಥ್ರೂ' ವಿಭಾಗದಲ್ಲಿ ಮೂರನೇ ಬಹುಮಾನವನ್ನು ನೀಡಲಾಯಿತು.

ಆಯುಷಿ ಹಾಗೂ ಅವರ ಸಲಹೆಗಾರ ಡಾ.ಭೂಷಣ್ ಟೋಲೆ ಅವರು, ನಿಯಮಿತ ಮತ್ತು ಔಷಧ-ನಿರೋಧಕ ಕ್ಷಯರೋಗವನ್ನು ಪತ್ತೆಹಚ್ಚಲು ಪಾಕೆಟ್-ಗಾತ್ರದ ಸಾಧನವನ್ನು ಅಭಿವೃದ್ಧಿಪಡಿಸಿದ್ದಾರೆ.

ಇದು ರೋಗನಿರ್ಣಯದ ಭಾಗವನ್ನು ಸಾಧನ-ಮುಕ್ತವಾಗಿ ಮಾಡುತ್ತದೆ. “ಸಾಧನವು ಉಪಕರಣ ವೆಚ್ಚವನ್ನು ಶೇ.99.6 ಮತ್ತು ಪರೀಕ್ಷಾ ವೆಚ್ಚವನ್ನು ಶೇ.87 ರಷ್ಟು ಕಡಿಮೆ ಮಾಡುತ್ತದೆ, ಅದನ್ನು ಇನ್ನೂ ಕಡಿಮೆ ಮಾಡಬಹುದು ಎಂದು ಆಯುಷಿ ಹೇಳಿದ್ದಾರೆ.

ಶೃಂಗಸಭೆಯಲ್ಲಿ ಮಾತನಾಡಿದ ಆಯುಷಿಯವರು, ದೇಶದಲ್ಲಿ ಕೇವಲ ಮೂರನೇ ಒಂದು ಭಾಗದಷ್ಟು ಕ್ಷಯರೋಗ ಪ್ರಕರಣಗಳು ವರದಿಯಾಗಿವೆ. ಇದು ಹೆಚ್ಚಿನ ಪ್ರಮಾಣದಲ್ಲಿ ಸಲಕರಣೆಗಳ ಅಗತ್ಯಗಳಿಗೆ ಕಾರಣವಾಗಿದೆ, ನಾವು ಆವಿಷ್ಕರಿಸಿರುವ ರೋಗನಿರ್ಣಯ ವಿಧಾನವು ಮನೆಯಲ್ಲಿಯೇ ಮಾಡಿಕೊಳ್ಳುವ ಗರ್ಭಧಾರಣೆ ಪರೀಕ್ಷೆ ಮತ್ತು ಕೋವಿಡ್ ಪರೀಕ್ಷೆಗಳಂತೆಯೇ ಇರುತ್ತದೆ. ನಮ್ಮ ಈ ಆವಿಷ್ಕಾರವು 2035 ರ ವೇಳೆಗೆ ಕ್ಷಯರೋಗವನ್ನು ಕೊನೆಗೊಳಿಸಬಹುದು ಎಂದು ನಾನು ನಂಬುತ್ತೇನೆಂದು ತಿಳಿಸಿದ್ದಾರೆ.

SCROLL FOR NEXT