ರಾಜ್ಯ

ಭಾರತೀಯ ಕ್ರಿಕೆಟ್ ತಂಡದಲ್ಲೂ ಮೀಸಲಾತಿ ಜಾರಿಯಾಗಬೇಕು: ನಟ ಚೇತನ್ ಅಹಿಂಸಾ

Manjula VN

ಚಾಮರಾಜನಗರ: ಸದಾ ಒಂದಲ್ಲಾ ಒಂದು ವಿಚಾರ ಹಾಗೂ ವಿವಾದದಲ್ಲಿ ಸುದ್ದಿಯಾಗುತ್ತಿರುವ ನಟ ಚೇತನ್ ಅಹಿಂಸಾ ಅವರು ಇದೀಗ ಕ್ರಿಕೆಟ್ ಟೀಂನಲ್ಲಿನ ಜಾತಿಯನ್ನು ಕೆದಕಿ ಮೀಸಲಾತಿ ಜಾರಿಗೆ ಒತ್ತಾಯಿಸಿದ್ದಾರೆ.

ಭಾರತೀಯ ಕ್ರಿಕೆಟ್ ತಂಡದಲ್ಲಿ ಶೇಕಡಾ ‌70 ರಷ್ಟು ಆಟಗಾರರು ಮೇಲ್ಜಾತಿಯವರೇ ಇದ್ದಾರೆ. ಹೀಗಾಗಿ ಭಾರತೀಯ ಕ್ರಿಕೆಟ್ ತಂಡದಲ್ಲೂ ಮೀಸಲಾತಿ ಜಾರಿಯಾಗಬೇಕು. ಎಸ್​ಸಿ ಮತ್ತು ಎಸ್​ಟಿ ಸಮುದಾಯಕ್ಕೆ ಮೀಸಲಾತಿ ಕೊಟ್ಟರೆ ಭಾರತದ ಕ್ರಿಕೆಟ್ ತಂಡ ಇನ್ನೂ ಉತ್ತಮವಾಗಲಿದೆ ಎಂದು ಹೇಳಿದ್ದಾರೆ.

ಭಾನುವಾರ ಚಾಮರಾಜನಗರದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ಪುಣ್ಯತಿಥಿ ಪರಿನಿರ್ವಾಣ ದಿವಸ್ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಚೇತನ್ ಅವರು ಮಾತನಾಡಿದರು.

ಭಾನುವಾರ ಚಾಮರಾಜನಗರದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ಪುಣ್ಯತಿಥಿ ಪರಿನಿರ್ವಾಣ ದಿವಸ್ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಚೇತನ್ ಅವರು ಮಾತನಾಡಿದರು. ದಕ್ಷಿಣ ಆಫ್ರಿಕಾ ಟೀಂನಲ್ಲಿ 2016 ರಿಂದ 6 ಮಂದಿ ಕರಿಯರಿಗೆ ಮೀಸಲಾತಿ ನೀಡಲಾಗುತ್ತಿದೆ. ಭಾರತೀಯ ಕ್ರಿಕೆಟ್ ಶ್ರೀಮಂತವಾಗಿದೆ. ದಕ್ಷಿಣ ಆಫ್ರಿಕಾದ ಮಾದರಿಯಲ್ಲಿ ಭಾರತೀಯ ಕ್ರಿಕೆಟ್​ ತಂಡದಲ್ಲೂ ಮೀಸಲಾತಿ ನೀಡಬೇಕು. ಎಸ್​ಸಿ ಎಸ್​ಟಿಗೆ ಮೀಸಲಾತಿ ಕೊಟ್ಟಲ್ಲಿ ಇನ್ನೂ ಉತ್ತಮ ಕ್ರಿಕೆಟ್ ಟೀಂ ಆಗುತ್ತದೆ ಎಂದು ತಿಳಿಸಿದರು.

ಭಾರತದಲ್ಲಿ, ಎಸ್‌ಸಿ ಮತ್ತು ಎಸ್‌ಟಿಗಳಂತಹ ಪ್ರತಿಭಾವಂತ ಕೆಳಜಾತಿಯ ಆಟಗಾರರು ಸಹ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗುತ್ತಿಲ್ಲ. ಈ ಸಂಬಂಧ ನಾನು ಕರ್ನಾಟಕದಿಂದ ಬಂದಿರುವ ಕ್ರಿಕೆಟ್ ದಿಗ್ಗಜ ಮತ್ತು ಬಿಸಿಸಿಐ ಮುಖ್ಯಸ್ಥ ರೋಜರ್ ಬಿನ್ನಿ ಮತ್ತು ಪ್ರಧಾನಿ ಮೋದಿಯವರಿಗೆ ಪತ್ರ ಬರೆಯುತ್ತೇನೆಂದು ಹೇಳಿದ್ದಾರೆ.

ಭಾರತದಲ್ಲಿನ ಕ್ರಿಕೆಟ್ ತಂಡವು ಹೆಚ್ಚಾಗಿ ಮೇಲ್ಜಾತಿಗಳ ಪ್ರಾಬಲ್ಯವನ್ನು ಹೊಂದಿದೆ ಮತ್ತು ಎಸ್‌ಸಿ ಮತ್ತು ಎಸ್‌ಟಿಗಳು ಪ್ರತಿಭಾವಂತರಾಗಿದ್ದರೂ ಸಹ ರಾಷ್ಟ್ರೀಯ ತಂಡಕ್ಕೆ ಅಪರೂಪವಾಗಿ ಆಯ್ಕೆಯಾಗುತ್ತಾರೆ, ಹೀಗಾಗಿ ಆಯ್ಕೆ ಪ್ರಕ್ರಿಯೆಯು ಹೆಚ್ಚು ನ್ಯಾಯೋಚಿತ ಮತ್ತು ಒಳಗೊಳ್ಳುವ ಅಗತ್ಯವಿದೆ ಎಂದು ಹೇಳಿದ್ದಾರೆ.

SCROLL FOR NEXT