ಅಡ್ಡಂಡ ಸಿ ಕಾರ್ಯಪ್ಪ 
ರಾಜ್ಯ

ಅಡ್ಡಂಡ ಕಾರ್ಯಪ್ಪ ಬರೆದ 'ಟಿಪ್ಪು ನಿಜ ಕನಸುಗಳು' ಪುಸ್ತಕ ಮಾರಾಟ ಮೇಲಿದ್ದ ತಡೆಯಾಜ್ಞೆ ತೆರವು!

ಮೈಸೂರು ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಬರೆದಿರುವ ಟಿಪ್ಪು ನಿಜ ಕನಸುಗಳು ಪುಸ್ತಕ ಮಾರಾಟ ಹಾಗೂ ಹಂಚಿಕೆಗೆ ನೀಡಿದ್ದ ತಡೆಯಾಜ್ಞೆಯನ್ನು ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯ ತೆರವುಗೊಳಿಸಿದೆ.

ಬೆಂಗಳೂರು: ಮೈಸೂರು ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಬರೆದಿರುವ ಟಿಪ್ಪು ನಿಜ ಕನಸುಗಳು ಪುಸ್ತಕ ಮಾರಾಟ ಹಾಗೂ ಹಂಚಿಕೆಗೆ ನೀಡಿದ್ದ ತಡೆಯಾಜ್ಞೆಯನ್ನು ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯ ತೆರವುಗೊಳಿಸಿದೆ. 

ಈ ಹಿಂದೆ ಪುಸ್ತಕ ಮಾರಾಟಕ್ಕೆ ಇದೇ ಸಿಟಿ ಸಿವಿಲ್ ಕೋರ್ಟ್ ತಾತ್ಕಾಲಿಕ ತಡೆಯಾಜ್ಞೆ ವಿಧಿಸಿತ್ತು. ಆದರೆ ಇಂದು ತಡೆಯಾಜ್ಞೆ ತೆರವುಗೊಳಿಸುವ ಮೂಲಕ ಪುಸ್ತಕ ಮಾರಾಟದ ಹಾದಿಯನ್ನು ಸುಗಮಗೊಳಿಸಿದೆ. 

ವಕ್ಫ್ ಬೋರ್ಡ್‌ ಸಮಿತಿ ಮಾಜಿ ಅಧ್ಯಕ್ಷ ಬಿ.ಎಸ್‌. ರಫೀವುಲ್ಲಾ ಟಿಪ್ಪು ನಿಜ ಕನಸುಗಳು ಪುಸ್ತಕ ಮಾರಾಟಕ್ಕೆ ಅವಕಾಶ ನೀಡಬಾರದು ಎಂದು ಕೋರ್ಟ್ ಮೆಟ್ಟಿಲೇರಿದ್ದರು. ಹೀಗಾಗಿ ನವೆಂಬರ್ 21ರಂದು ಕೋರ್ಟ್ ಪುಸ್ತಕ ಮಾರಾಟ. ಹಂಚಿಕೆಗೆ ಮಧ್ಯಂತರ ತಡೆ ನೀಡಿತ್ತು. 

ರಫೀವುಲ್ಲಾ ಅವರು ತಮ್ಮ ಅರ್ಜಿಯಲ್ಲಿ ಟಿಪ್ಪು ನಿಜ ಕನಸುಗಳು ಪುಸ್ತಕದಲ್ಲಿ ಟಿಪ್ಪು ಕ್ರೂರಿ ಎಂದು ಬಿಂಬಿಸಲಾಗಿದೆ. ಆದರೆ ಟಿಪ್ಪು ಸ್ವಾತಂತ್ರ್ಯ ಹೋರಾಟಗಾರ ಎಂದು ಉಲ್ಲೇಖಿಸಿದ್ದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮೇ ತಿಂಗಳಲ್ಲಿ ನಿರುದ್ಯೋಗ ದರ 5.5%ಕ್ಕೆ ಏರಿಕೆ; 11 ತಿಂಗಳಲ್ಲೇ ಗರಿಷ್ಠ ಮಟ್ಟ

ಏನೇ ಶಾಂತಿ ಒಪ್ಪಂದವಾದ್ರೂ ನಾವು ಅಮೆರಿಕವನ್ನ ನಂಬಲ್ಲ: ಡೊನಾಲ್ಡ್ ಟ್ರಂಪ್ ಗೆ ಶಾಕ್ ಕೊಟ್ಟ Iran

ಮಜಾ ಭಾರತ-ಕಾಮಿಡಿ ಕಿಲಾಡಿಗಳು ಖ್ಯಾತಿಯ ಹಾಸ್ಯ ಕಲಾವಿದ ನಟ ಸಿದ್ದಾರ್ಥ ಪರಸನೂರು ಅನುಮಾನಾಸ್ಪದ ಸಾವು!

'14 ತಿಂಗಳ ಕಾಲ ಕ್ರಿಕೆಟ್‌ನಿಂದ ದೂರ, ಖಿನ್ನತೆಗೆ ಒಳಗಾಗಿದ್ದೆ.. Cricket ಅನ್ನೇ ತೊರೆಯಬೇಕೆಂದಿದ್ದೆ': ಕನ್ನಡತಿ Shreyanka Patil ಆಘಾತಕಾರಿ ಹೇಳಿಕೆ

'ಗುರು ದ್ರೋಹಿ'; ಪಂಜಾಬ್ ಚುನಾವಣೆಗೂ ಮುನ್ನ ಸಿಎಂ Bhagwant Mannಗೆ ಆಘಾತ, ಧಾರ್ಮಿಕ ಗುರುಗಳ ಆಕ್ರೋಶ

SCROLL FOR NEXT