ವಿದ್ಯಾರ್ಥಿನಿಯರಿಂದ ಪೆಟ್ಟು ತಿಂದು ಪೊಲೀಸರ ಅತಿಥಿಯಾದ ಶಿಕ್ಷಕ 
ರಾಜ್ಯ

ಕಾಮುಕ ಶಿಕ್ಷಕನಿಗೆ ವಿದ್ಯಾರ್ಥಿನಿಯರ ಗೂಸ: ಶ್ರೀರಂಗಪಟ್ಟಣದ ವಸತಿ ನಿಲಯದಲ್ಲಿ ತಕ್ಕ ಪಾಠ ಕಲಿಸಿದ ಮಕ್ಕಳು!

ವಿದ್ಯೆ, ಸನ್ನಡತೆ, ಸನ್ಮಾರ್ಗವನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಡಬೇಕಾದ ಶಿಕ್ಷಕನೇ ಕಾಮುಕನ ರೀತಿ ವರ್ತಿಸಿದರೆ ಬೇಲಿಯೇ ಎದ್ದು ಹೊಲ ಮೇಯ್ದ ಪರಿಸ್ಥಿತಿ. ಶಿಕ್ಷಕನ ವರ್ತನೆಗೆ ರೊಚ್ಚಿಗೆದ್ದ ವಿದ್ಯಾರ್ಥಿನಿಯರು ಕೋಲು, ದೊಣ್ಣೆ ಹಿಡಿದುಕೊಂಡು ಮನಸಾರೆ ಥಳಿಸಿದ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಕಟ್ಟೇರಿ ಗ್ರಾಮದಲ್ಲಿನ ವಸತಿ ನಿಲಯದಲ್ಲಿ ನಡೆದಿದೆ.

ಶ್ರೀರಂಗಪಟ್ಟಣ: ವಿದ್ಯೆ, ಸನ್ನಡತೆ, ಸನ್ಮಾರ್ಗವನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಡಬೇಕಾದ ಶಿಕ್ಷಕನೇ ಕಾಮುಕನ ರೀತಿ ವರ್ತಿಸಿದರೆ ಬೇಲಿಯೇ ಎದ್ದು ಹೊಲ ಮೇಯ್ದ ಪರಿಸ್ಥಿತಿ. ಶಿಕ್ಷಕನ ವರ್ತನೆಗೆ ರೊಚ್ಚಿಗೆದ್ದ ವಿದ್ಯಾರ್ಥಿನಿಯರು ಕೋಲು, ದೊಣ್ಣೆ ಹಿಡಿದುಕೊಂಡು ಮನಸಾರೆ ಥಳಿಸಿದ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಕಟ್ಟೇರಿ ಗ್ರಾಮದಲ್ಲಿನ ವಸತಿ ನಿಲಯದಲ್ಲಿ ನಡೆದಿದೆ. ಮುಖ್ಯ ಶಿಕ್ಷಕನಿಗೆ ವಿದ್ಯಾರ್ಥಿನಿಯರು ಕೈಯಲ್ಲಿ ದೊಣ್ಣೆ ಹಿಡಿದು ಮನಸೋ ಇಚ್ಛೆ ಥಳಿಸಿದ ವಿಡಿಯೊ ವೈರಲ್ ಆಗಿದೆ. 

ಚಿನ್ಮಯಾನಂದ ಮೂರ್ತಿ ಥಳಿತಕ್ಕೊಳಾದ ಮುಖ್ಯ ಶಿಕ್ಷಕ. ನಿನ್ನೆ ತಡರಾತ್ರಿ ಹಾಸ್ಟೆಲ್ ನಲ್ಲಿ ವಿದ್ಯಾರ್ಥಿನಿ ಜೊತೆ ಅಸಭ್ಯ ವರ್ತಸಿದ್ದರಿಂದ ತಕ್ಷಣವೇ ಎಚ್ಚೆತ್ತ ವಿದ್ಯಾರ್ಥಿನಿಯರು ಸಹಪಾಠಿಗಳಿಗೆ ಮಾಹಿತಿ ನೀಡಿ ನಂತರ ಕೈಯಲ್ಲಿ ಕೋಲು ದೊಣ್ಣೆ ಹಿಡಿದು ಕಾಮುಕ ಶಿಕ್ಷನ ಮೇಲೆ ದಾಳಿ ನಡೆಸಿದ್ದಾರೆ. ಕೆ.ಆರ್.ಎಸ್ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಪೊಲೀಸರು ಶಿಕ್ಷಕನನ್ನು ಬಂಧಿಸಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ತಮಿಳುನಾಡು ರಾಜಕೀಯದಲ್ಲಿ ಬಿಗ್ ಟ್ವಿಸ್ಟ್: ನಾಳೆ ವಿಜಯ್ ಪ್ರಮಾಣವಚನ ಡೌಟ್; ಮತ್ತೆ ಸಂಖ್ಯಾಬಲ ಇಲ್ಲ ಎಂದ ಗವರ್ನರ್!

Google Trends ನಲ್ಲಿಯೂ ವಿಜಯ್- TVK ಅರ್ಭಟ! ಮತಗಳು, ಗೆಲುವಿನ ಬಗ್ಗೆ ಹೆಚ್ಚಿನ ಹುಡುಕಾಟ

IPL 2026: ಫಿನ್ ಅಲೆನ್ ಶತಕದ ಅಬ್ಬರ, ಡೆಲ್ಲಿ ವಿರುದ್ಧ KKR ಗೆ 8 ವಿಕೆಟ್ ಗಳ ಭರ್ಜರಿ ಜಯ!

ಹೌದು 2025 ರ ಯುದ್ಧದಲ್ಲಿ ಪಾಕಿಸ್ತಾನಕ್ಕೆ ಸಹಾಯ ಮಾಡಿದ್ವಿ: ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ 1 ವರ್ಷದ ಬಳಿಕ ಚೀನಾ ಒಪ್ಪಿಗೆ!

ಕಾಂಗ್ರೆಸ್‌ನ್ನು ಕಿತ್ತು ಹಾಕದೇ ಯುವಕರಿಗೆ ಉದ್ಯೋಗವಿಲ್ಲ! ನಿಖಿಲ್ ಕುಮಾರಸ್ವಾಮಿ ಕಿಡಿ

SCROLL FOR NEXT