ರಾಜ್ಯ

ಬೆಂಗಳೂರು: ಪೋಷಕರ ನಿರ್ಲಕ್ಷ್ಯ, ಹಾಸ್ಟೆಲ್ ಶೌಚಾಲಯದಲ್ಲಿ ಕತ್ತು ಕೊಯ್ದುಕೊಂಡು ಎಂಜಿನೀಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ

Shilpa D

ಬೆಂಗಳೂರು: ಬೆಂಗಳೂರಿನ ಆನೇಕಲ್ ಪಟ್ಟಣದ ಕಾಲೇಜೊಂದರಲ್ಲಿ ಓದುತ್ತಿದ್ದ ಕೇರಳ ಮೂಲದ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ. ಈ ಘಟನೆ ಗುರುವಾರ ಬೆಳಕಿಗೆ ಬಂದಿದೆ.

ಮೃತನನ್ನು ಬೆಂಗಳೂರಿನ ಬನ್ನೇರುಘಟ್ಟ ಪ್ರದೇಶದ ಎಎಂಸಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. 19 ವರ್ಷದ ಈತನ ಹೆಸರು ನಿತಿನ್ . ಈತ ಕೇರಳದ ಕೋಯಿಕ್ಕೋಡ್ ಜಿಲ್ಲೆಯ ಪದಿನಿ ಜರಿಯಾ ಪ್ರದೇಶದ ಬಳಿಯ ಕೊಯಲಾಂಡಿ ಗ್ರಾಮದವನು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮೂಲತಃ ಕೇರಳದ ಕೋಯಿಕ್ಕೋಡ್‌ ಜಿಲ್ಲೆಯವರಾಗಿದ್ದ ನಿತಿನ್ ಡಿಸೆಂಬರ್ 1 ರಂದು ಎಎಂಸಿ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗಕ್ಕೆ ಪ್ರವೇಶ ಪಡೆದಿದ್ದರು. ಗುರುವಾರ ಶೌಚಾಲಯಕ್ಕೆ ತೆರಳಿದ್ದ ನಿತಿನ್ ಚಾಕುವಿನಿಂದ ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ನಿತಿನ್ ತಂದೆ  ದುಬೈನಲ್ಲಿ ನೆಲೆಸಿದ್ದರು, ಆತನ ತಾಯಿ ಮತ್ತು ಅಜ್ಜಿ ಕೇರಳದಲ್ಲಿದ್ದಾರೆ. ಅವರ ಸಹೋದರನ ಮೂಲಕ ಕಾಲೇಜು ಪ್ರವೇಶಾತಿ ಪಡೆದುಕೊಂಡಿದ್ದರು. ತಂದೆ–ತಾಯಿ ದೂರ ಇದ್ದಿದ್ದರಿಂದ ಬೇಸರಗೊಂಡು ನಿತಿನ್ ಆತ್ಮಹತ್ಯೆ ಮಾಡಿಕೊಂಡಿರಬಹುದು.

ಪೊಲೀಸರ ಪ್ರಕಾರ, ನಿತಿನ್ ಡಿಸೆಂಬರ್ 1 ರಂದು ಕಾಲೇಜಿಗೆ ಸೇರಿಕೊಂಡರು. ಮೊದಲ ವರ್ಷ ಸಿಇಎಸ್ ಕೋರ್ಸ್ ತೆಗೆದುಕೊಂಡರು. ಕಾಲೇಜಿನ ಶೌಚಾಲಯದ ಕೊಠಡಿಯಲ್ಲಿಯೇ ನಿತಿನ್ ಚಾಕುವಿನಿಂದ ಕತ್ತು ಸೀಳಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಬುಧವಾರ ಮಧ್ಯಾಹ್ನ ರೂಮ್‌ಮೇಟ್ ಗೌರವ್ ಗಣಪತಿ ತರಗತಿಯಿಂದ ಹಿಂತಿರುಗಿದಾಗ ಒಳಗಿನಿಂದ ಬಾಗಿಲು ಹಾಕಿರುವುದು ಕಂಡುಬಂತು. ಯಾವುದೇ ಪ್ರತಿಕ್ರಿಯೆ ಬಾರದ ಕಾರಣ ರೂಂ ಮೇಟ್ ಹಾಸ್ಟೆಲ್ ವಾರ್ಡನ್ ಗೆ ಮಾಹಿತಿ ನೀಡಿದ್ದಾರೆ. ಇತರರೊಂದಿಗೆ ವಾರ್ಡನ್ ಬಾಗಿಲು ಒಡೆದು ನೋಡಿದಾಗ ನಿತಿನ್ ಕತ್ತು ಸೀಳಿ ರಕ್ತದ ಮಡುವಿನಲ್ಲಿ ಬಿದ್ದಿದ್ದ. ರಾತ್ರಿ 8.30ರ ಸುಮಾರಿಗೆ ವಾರ್ಡನ್ ಪೊಲೀಸರಿಗೆ ದೂರು ನೀಡಿದ್ದಾರೆ’’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಡಿಸೆಂಬರ್ 1 ರಂದು ಅಡ್ಮಿಷನ್ ಆಗಿತ್ತು, ತರಗತಿಗಳು ಬುಧವಾರದಿಂದ ಪ್ರಾರಂಭವಾಯಿತು, ಆದರೆ ಮೊದಲ ದಿನವೇ ಅವರು ಗೈರುಹಾಜರಾಗಿದ್ದರು. ಕೆಲವು ಕೌಟುಂಬಿಕ ಸಮಸ್ಯೆಯಿಂದ ನಿತಿನ್ ಅಸಮಾಧಾನಗೊಂಡಿದ್ದ ಎನ್ನಲಾಗಿದೆ.

ಆತ ಹಾಸ್ಟೆಲ್‌ನಲ್ಲಿದ್ದಾಗ, ಅವರು ಯಾರಿಗಾದರೂ ಅನೇಕ ಕರೆಗಳನ್ನು ಮಾಡುತ್ತಿರುವುದು ಕಂಡುಬಂದಿದೆ . ಆತನಿಗೆ ಸರಿಯಾದ ಪ್ರತಿಕ್ರಿಯೆ ಸಿಗದೆ ಅಸಮಾಧಾನಗೊಂಡಿದ್ದ. ಫೋನ್‌ನಲ್ಲಿ ಅವರು ಯಾರೊಂದಿಗಾದರೂ ಜಗಳವಾಡುತ್ತಿದ್ದ ಎಂದು ಕೂಡ ಅಧಿಕಾರಿಗಳು ಹೇಳಿದ್ದಾರೆ.

SCROLL FOR NEXT