ರಾಜ್ಯ

ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಡ್ರಗ್ಸ್ ಪೆಡ್ಲರ್‌ಗಳ ಬಂಧನ

Manjula VN

ಬೆಂಗಳೂರು: ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಡ್ರಗ್ ಪೆಡ್ಲರ್ ಗಳನ್ನು ಕೇಂದ್ರ ಅಪರಾಧ ವಿಭಾಗ (ಸಿಸಿಬಿ)ದ ಅಧಿಕಾರಿಗಳು ಶನಿವಾರ ಬಂಧನಕ್ಕೊಳಪಡಿಸಿದ್ದಾರೆ.

ಬಿಹಾರ ಮೂಲಕ ಅಭಿಜಿತ್ ಹಾಗೂ ಕೇರಳ ಮೂಲದ ಶಿಬು ಟಿ ಚಿಕೋ ಬಂಧಿತ ಆರೋಪಿಗಳಾಗಿದ್ದಾರೆ.

ಅಭಿಜಿತ್ ನಗರದಲ್ಲಿ ಸ್ವಿಗ್ಗಿ ಹಾಗೂ ಝೋಮ್ಯಾಟೋ ಫುಡ್ ಡೆಲಿವರಿ ಹುಡುಗರ ಸೋಗಿನಲ್ಲಿ ಗ್ರಾಹಕರಿಗೆ ಡ್ರಗ್ಸ್ ಪೂರೈಸುತ್ತಿದ್ದ ಎಂದು ತಿಳಿದುಬಂದಿದೆ. ಆರೋಪಿಯಿಂದ ಪೊಲೀಸರು ಮೊಬೈಲ್, ಬೈಕ್ ಗಳು ಹಾಗೂ ನಾಲ್ಕು ಲಕ್ಷ ರುಪಾಯಿ ಮೌಲ್ಯದ ಎಲ್ಎಸ್'ಡಿ ಹಾಗೂ ಗಾಂಜಾ ವಶಕ್ಕೆ ಪಡೆದುಕೊಂಡಿದ್ದಾರೆ. ಬಿಹಾರ ಮೂಲದ ಈತ ಮತ್ತೊಬ್ಬ ಪೆಡ್ಲರ್ ಬಳಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

ಮತ್ತೊಬ್ಬ ಪೆಡ್ಲರ್ ಶಿಬು ಟಿ ಚಾಕೊ ಎಂಬಾತನಿಂದ 5 ಲಕ್ಷ ಮೌಲ್ಯದ ಎಂಡಿಎಂಎ ಹರಳುಗಳು, ಎಲ್‌ಎಸ್‌ಡಿ ಸ್ಟ್ರಿಪ್‌ಗಳು ಮತ್ತು ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ. ಈತ ನೈಜೀರಿಯಾದ ಪೆಡ್ಲರ್ ಬಳಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

ಯಲಹಂಕ ಸಮೀಪ ಡ್ರಗ್ಸ್ ಮಾರಾಟಕ್ಕೆ ಆರೋಪಿ ಸಜ್ಜಾಗಿದ್ದಾಗ ಆತನನ್ನು ಬಂಧಿಸಲಾಗಿದೆ. ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೇರಳ ಮೂಲದ ಶಿಬು ನೌಕರಿಯಲ್ಲಿದ್ದ. ಸುಲಭವಾಗಿ ಹಣ ಸಂಪಾದನೆಗೆ ಡ್ರಗ್ಸ್ ದಂಧೆಗಿಳಿದಿದ್ದೆ ಎಂದು ಆರೋಪಿ ಹೇಳಿಕೊಂಡಿದ್ದಾನೆ.

SCROLL FOR NEXT