ಸಂಗ್ರಹ ಚಿತ್ರ 
ರಾಜ್ಯ

ಕೋವಿಡ್ ಸೋಂಕು ಇಳಿಕೆಯಾದರೂ ಮುಂದುವರೆದ ಆನ್‌ಲೈನ್ ವೈದ್ಯಕೀಯ ಸಮಾಲೋಚನೆ: ವಿಶ್ವಾಸಾರ್ಹವಲ್ಲ ಎಂದ ವೈದ್ಯರು

ಕೋವಿಡ್ ಸಾಂಕ್ರಾಮಿಕ ರೋಗ ಉತ್ತುಂಗಕ್ಕೇರಿದ್ದ ಸಂದರ್ಭದಲ್ಲಿ ಆನ್‌ಲೈನ್ ವೈದ್ಯಕೀಯ ಸಮಾಲೋಚನೆ ಸಾಕಷ್ಟು ಜನಪ್ರಿಯತೆ ಗಳಿಸಿತ್ತು. ಸೋಂಕು ಇಳಿಕೆಯಾದರೂ ಕೂಡ ಜನರು ಡಿಜಿಟಲ್ ಪ್ಲಾಟ್ ಫಾರ್ಮ್ ಗಳನ್ನೇ ಬಳಕೆ ಮಾಡುತ್ತಿದ್ದು, ಸಾಕಷ್ಟು ವೈದ್ಯರು ಇದು ವಿಶ್ವಾಸಾರ್ಹವಲ್ಲ ಎಂದು ಹೇಳಿದ್ದಾರೆ.

ಬೆಂಗಳೂರು: ಕೋವಿಡ್ ಸಾಂಕ್ರಾಮಿಕ ರೋಗ ಉತ್ತುಂಗಕ್ಕೇರಿದ್ದ ಸಂದರ್ಭದಲ್ಲಿ ಆನ್‌ಲೈನ್ ವೈದ್ಯಕೀಯ ಸಮಾಲೋಚನೆ ಸಾಕಷ್ಟು ಜನಪ್ರಿಯತೆ ಗಳಿಸಿತ್ತು. ಸೋಂಕು ಇಳಿಕೆಯಾದರೂ ಕೂಡ ಜನರು ಡಿಜಿಟಲ್ ಪ್ಲಾಟ್ ಫಾರ್ಮ್ ಗಳನ್ನೇ ಬಳಕೆ ಮಾಡುತ್ತಿದ್ದು, ಸಾಕಷ್ಟು ವೈದ್ಯರು ಇದು ವಿಶ್ವಾಸಾರ್ಹವಲ್ಲ ಎಂದು ಹೇಳಿದ್ದಾರೆ.

ಬೆಂಗಳೂರಿನ ವೈದ್ಯ ಮತ್ತು ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಮಾಜಿ ಸದಸ್ಯ ಡಾ.ಕಲ್ಪಜಿತ್ ಬಾನಿಕ್ ಮಾತನಾಡಿ, ಟೆಲಿಮೆಡಿಸಿನ್ ಪರಿಕಲ್ಪನೆಯು ಬೆಂಗಳೂರಿನಲ್ಲಿ ಸಾಂಕ್ರಾಮಿಕ ರೋಗಕ್ಕೂ ಮುಂಚೆಯೇ ಇತ್ತು. ಈ ವ್ಯವಸ್ಥೆಯು ಈಗ ತಂತ್ರಜ್ಞಾನದೊಂದಿಗೆ ಹೆಚ್ಚು ಸಂಘಟಿತವಾಗಿದೆ. ಕಳೆದ 2-3 ವರ್ಷಗಳಲ್ಲಿ ಹಲವಾರು ಡಿಜಿಟಲ್ ಸಲಹಾ ವೇದಿಕೆಗಳು ಆರಂಭವಾಗಿವೆ ಎಂದು ಹೇಳಿದ್ದಾರೆ.

ರೋಗಿಗಳು ಡಿಜಿಟಲ್ ಸಮಾಲೋಚನೆಗಳನ್ನು ಬಯಸುತ್ತಾರೆ, ಏಕೆಂದರೆ ಇದು ವೈಯಕ್ತಿಕ ಸಮಾಲೋಚನೆಗಳಿಗಿಂತ ಅಗ್ಗವಾಗಿದೆ, ವಿಶೇಷವಾಗಿ ಗಂಭೀರವಲ್ಲದ ಕಾಯಿಲೆಗಳಿಗೆ ಎಂದು ತಿಳಿಸಿದ್ದಾರೆ.

ಫೆಡರೇಶನ್ ಆಫ್ ಆಲ್ ಇಂಡಿಯಾ ಮೆಡಿಕಲ್ ಅಸೋಸಿಯೇಷನ್ ​​(ಎಫ್‌ಎಐಎಂಎ) ಅಧ್ಯಕ್ಷ ಡಾ ರೋಹನ್ ಕೃಷ್ಣನ್ ಮಾತನಾಡಿ, ನಾನು ಡಿಜಿಟಲ್ ಸಮಾಲೋಚನೆಗಳನ್ನು ಬೆಂಬಲಿಸುವುದಿಲ್ಲ ಎಂದಿದ್ದಾರೆ.

ಸಾಂಕ್ರಾಮಿಕ ಸಮಯದಲ್ಲಿ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಟೆಲಿಕನ್ಸಲ್ಟೇಶನ್‌ಗಳನ್ನು ಉತ್ತೇಜಿಸಿಲಾಗಿತ್ತು. ಆದರೆ, ಇದು ಸಂಪೂರ್ಣವಾಗಿ ವಿಶ್ವಾಸಾರ್ಹವಲ್ಲ ಮತ್ತು ರೋಗಿಯ ವೈಯಕ್ತಿಕ ಪರೀಕ್ಷೆಯ ನಿಖರತೆಯೊಂದಿಗೆ ಹೋಲಿಸಲಾಗುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಆನ್‌ಲೈನ್ ಸಮಾಲೋಚನೆಗಳು ವೈದ್ಯರಿಗೆ ಹೆಚ್ಚುವರಿ ಆದಾಯದ ಮೂಲವಾಗಿದೆ. ಇದರಿಂದ ವೈದ್ಯರು ತಮ್ಮ ಮನೆಯಲ್ಲಿಯೇ ಇದ್ದುಕೊಂಡು ರೋಗಿಗಳಿಗೆ ಸಲಹೆ ನೀಡಬಹುದಾಗಿದೆ. ಟೆಲಿ ಸಮಾಲೋಚನೆಗಳನ್ನು ತುರ್ತು ಸಂದರ್ಭಗಳಲ್ಲಿ ಮಾತ್ರ ಸೀಮಿತಗೊಳಿಸಬೇಕು ಎಂದು ತಿಳಿಸಿದ್ದಾರೆ.

ಸಾಂಕ್ರಾಮಿಕ ಸಮಯದಲ್ಲಿ ಟೆಲಿಕನ್ಸಲ್ಟೇಶನ್ ಸೇವೆಗಳು ಪ್ರಾರಂಭವಾದವು. ಇದೀಗ ಜನರು ಪ್ರಯಾಣ ಅಥವಾ ಕಾಯುವ ಸಮಯವನ್ನು ಉಳಿಸಲು ಇದಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ ಎಂದು ಚರ್ಮರೋಗ ತಜ್ಞರು ಹೇಳಿದ್ದಾರೆ.

ಬೇಡಿಕೆಗಳ ಆಧಾರದ ಮೇಲೆ ದೂರವಾಣಿ ಕರೆ ಅಥವಾ ವಿಡಿಯೋ ಕರೆ ಮೂಲಕ ಸಮಾಲೋಚನೆಗಳನ್ನು ನೀಡುತ್ತಿದ್ದೇನೆ. ಮೆಡಿಕಲ್ ಹಿಸ್ಟರಿ, ರೋಗ ಇರುವ ಅವಧಿ, ರೋಗ ಲಕ್ಷಣಗಳ ಗಮನಿಸಿ ಚಿಕಿತ್ಸೆ ನೀಡುತ್ತಿದ್ದೇನೆ. ಆದರೆ, ಬಹುತೇಕ ಜನರು ಇನ್ನೂ ವೈಯಕ್ತಿಕ ಸಮಾಲೋಚನೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆಂದು ಹೇಳಿದ್ದಾರೆ.

ಐಎಂಎ ಜೂನಿಯರ್ ಡಾಕ್ಟರ್ ನೆಟ್‌ವರ್ಕ್‌ನ ಸದಸ್ಯರೊಬ್ಬರು ಮಾತನಾಡಿ, ಟೆಲಿ-ಸಮಾಲೋಚನೆಗಳು ಧನಾತ್ಮಕ ಮತ್ತು ಋಣಾತ್ಮಕ ಅಂಶಗಳನ್ನು ಹೊಂದಿವೆ ಎಂದು ವಿವರಿಸಿದರು.

ದೂರದ ಪ್ರದೇಶಗಳಲ್ಲಿರುವ ಜನರಿಗೆ ಟೆಲಿಮೆಡಿಸಿನ್ ಸಾಕಷ್ಟು ಸಹಾಯ ಮಾಡಿದೆ. ಇದರಿಂದ ಪ್ರಯಾಣದ ವೆಚ್ಚ ಮತ್ತು ಸಮಯವನ್ನು ಉಳಿಸಬಹುದು. ಆದರೆ, ರೋಗಿಗಳನ್ನು ಸರಿಯಾಗಿ ಸಮಾಲೋಚಿಸದಿದ್ದರೆ ವೈದ್ಯಕೀಯ ನಿರ್ಲಕ್ಷ್ಯದ ಸಾಧ್ಯತೆಗಳೂ ಆಗಲಿವೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT