ರಾಜ್ಯ

ಬೆಂಗಳೂರು ಜೋಡಿ ಕೊಲೆ ಪ್ರಕರಣ: ಉದ್ಯಮಿ ಕಾರು ಚಾಲಕನ ವಿಚಾರಣೆ

Manjula VN

ಬೆಂಗಳೂರು: ಉದ್ಯಮಿಯೊಬ್ಬ ಮನೆಯಲ್ಲಿನ ಜೋಡಿ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಕೋರಮಂಗಲ ಪೊಲೀಸರು, ಈ ಹಿಂದೆ ಉದ್ಯಮಿಯ ಬಳಿ ಕೆಲಸ ಮಾಡುತ್ತಿದ್ದ ಚಾಲಕ ಸೇರಿದಂತೆ ಕೆಲವರ ಪಾತ್ರವಿರುವ ಶಂಕೆ ವ್ಯಕ್ತಪಡಿಸಿದ್ದಾರೆ.

ಕೋರಮಂಗಲ 6ನೇ ಬ್ಲಾಕ್‌ನಲ್ಲಿರುವ ರಾಜಗೋಪಾಲ್ ರೆಡ್ಡಿ ಅವರ ನಿವಾಸದಲ್ಲಿ ಕೆಲಸ ಮಾಡುತ್ತಿದ್ದ ಸೆಕ್ಯೂರಿಟಿ ಗಾರ್ಡ್ ದಿಲ್ ಬಹದ್ದೂರ್ (50) ಮತ್ತು ಕಾರ್ಮಿಕ ಕರಿಯಪ್ಪ (55) ಭಾನುವಾರ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.

ಹಂತಕರು ಮನೆಯಲ್ಲಿದ್ದ ರೂ. 5 ಲಕ್ಷ ನಗದು ಮತ್ತು 30 ಗ್ರಾಂ ಚಿನ್ನಾಭರಣಗಳನ್ನು ದೋಚಿ, ಸಿಸಿಟಿವಿ ಕ್ಯಾಮೆರಾದ ಡಿವಿಆರ್ ನ್ನೂ ಕೂಡ ತೆಗೆದುಕೊಂಡು ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಒಂದೇ ಕುಟುಂಬದ ಮೂವರ ಆತ್ಮಹತ್ಯೆ; ವಿಷ ಸೇವಿಸಿ ಮಕ್ಕಳ ಜೊತೆ ತಾಯಿ ಸಾವಿಗೆ ಶರಣು!
 
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಇದೀಗ ಸುಮಾರು 50 ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಉದ್ಯಮಿ ಅವರೊಂದಿಗೆ ಹಿಂದೆ ಕೆಲಸ ಮಾಡಿದ ವ್ಯಕ್ತಿಗಳು, ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿರ್ಮಾಣ ಕಾರ್ಯಗಳಲ್ಲಿ ತೊಡಗಿರುವವರು ಮತ್ತು ಹತ್ತಿರದ ಕಟ್ಟಡಗಳ ಭದ್ರತಾ ಸಿಬ್ಬಂದಿಗಳಿಂದ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುತ್ತಿದ್ದೇವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಉದ್ಯಮಿ ರೆಡ್ಡಿ ಕುಟುಂಬ ಆಂಧ್ರಪ್ರದೇಶದ ಅನಂತಪುರಕ್ಕೆ ಮದುವೆಗೆಂದು ತೆರಳಿದ್ದ ವೇಳೆ ಈ ಕೊಲೆ ನಡೆದಿದ್ದು, ಕುಟುಂಬದವರಿಗೆ ಗೊತ್ತಿರುವವರು ಇದರಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. “ಮನೆಯೊಳಗೆ ಬಲವಂತದ ಪ್ರವೇಶವಾಗಿರುವುದು ಕಂಡು ಬಂದಿಲ್ಲ. ಎರಡರಿಂದ ನಾಲ್ಕು ಜನರ ಗ್ಯಾಂಗ್ ಭಾಗಿಯಾಗಿರಬಹುದು ಎಂದು ತೋರುತ್ತಿದೆ. ಪ್ರಕರಣವನ್ನು ಭೇದಿಸಲು ನಾಲ್ಕು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಹೇಳಿದ್ದಾರೆ.

ದೂರವಾಣಿ ಕರೆ ವಿವರಗಳ ದಾಖಲೆ ಆಧರಿಸಿ ಪೊಲೀಸರು ರೆಡ್ಡಿಯವರ ಚಾಲಕನ ಮೇಲೆ ಶಂಕೆ ವ್ಯಕ್ತಪಡಿಸಿದ್ದಾರೆ.

“ಅಪಘಾತದಲ್ಲಿ ಹಾನಿಗೊಳಗಾದ ತನ್ನ ಐಷಾರಾಮಿ ಕಾರನ್ನು ತನ್ನ ಅನುಮತಿಯಿಲ್ಲದೆ ತೆಗೆದುಕೊಂಡ ನಂತರ ರೆಡ್ಡಿ ಚಾಕನನ್ನು ಕೆಲಸದಿದ ತೆಗೆದಿದ್ದರು. ಸದ್ಯದಲ್ಲೇ ಚಾಲಕನನ್ನು ಕರೆಸಿಕೊಂಡು ವಿಚಾರಣೆ ನಡೆಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

SCROLL FOR NEXT