ಪ್ರಾತಿನಿಧಿಕ ಚಿತ್ರ 
ರಾಜ್ಯ

ಬಳಸದ ಹಳೆಯ ಸರ್ಕಾರಿ ವಾಹನಗಳನ್ನು ಗುಜರಿಗೆ ಹಾಕಿ; ಬೆಂಗಳೂರು ಶಾಸಕರ ನಡುವೆ ಆಸಕ್ತಿಕರ ಚರ್ಚೆ

ರಾಜ್ಯದ ವಿವಿಧ ಕಚೇರಿಗಳ ಮುಂದೆ ನಿಲ್ಲಿಸಿರುವ ಹಳೆಯ ಸರ್ಕಾರಿ ವಾಹನಗಳನ್ನು ವಿಲೇವಾರಿ ಮಾಡುವ ಬಗ್ಗೆ ಬೆಳಗಾವಿ ಸುವರ್ಣಸೌಧದಲ್ಲಿ ಬೆಂಗಳೂರು ಶಾಸಕರ ನಡುವೆ ಆಸಕ್ತಿದಾಯದ ಚರ್ಚೆ ನಡೆಯಿತು.

ಬೆಳಗಾವಿ: ರಾಜ್ಯದ ವಿವಿಧ ಕಚೇರಿಗಳ ಮುಂದೆ ನಿಲ್ಲಿಸಿರುವ ಹಳೆಯ ಸರ್ಕಾರಿ ವಾಹನಗಳನ್ನು ವಿಲೇವಾರಿ ಮಾಡುವ ಬಗ್ಗೆ ಬೆಳಗಾವಿ ಸುವರ್ಣಸೌಧದಲ್ಲಿ ಬೆಂಗಳೂರು ಶಾಸಕರ ನಡುವೆ ಆಸಕ್ತಿಕರ ಚರ್ಚೆ ನಡೆಯಿತು. ಈ ಕುರಿತು ಶುಕ್ರವಾರ ಸದನದ ಗಮನ ಸೆಳೆದ ಶಾಸಕ ಬಿ. ಹರ್ಷವರ್ಧನ್, ಕಚೇರಿಗಳ ಮುಂದೆ ಮತ್ತು ರಸ್ತೆ ಬದಿಯಲ್ಲಿ ಬಳಸದ ಸರ್ಕಾರಿ ವಾಹನಗಳನ್ನು ನಿಲ್ಲಿಸುವುದರಿಂದ ವಿಶೇಷವಾಗಿ ನಗರಗಳಲ್ಲಿ ಸ್ಥಳಾವಕಾಶದ ಅಡಚಣೆ ಉಂಟಾಗುತ್ತಿದೆ ಎಂದರು.

ಬಳಸದೆ ನಿಂತಿರುವ ಸರ್ಕಾರಿ ವಾಹನಗಳನ್ನು ಗುಜರಿಗೆ ಹಾಕುವಂತವುಗಳು ಎಂದು ಘೋಷಿಸಿ, ಮಾರಾಟ ಮಾಡುವ ಮೂಲಕ ರಾಜ್ಯದ ಬೊಕ್ಕಸಕ್ಕೆ ಆದಾಯ ತರುವಂತೆ ಸರ್ಕಾರವನ್ನು ಒತ್ತಾಯಿಸಿದರು.

ಹಲವಾರು ಸದಸ್ಯರು ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದರು ಮತ್ತು ಅವರಲ್ಲಿ ಕೆಲವರು ಪೊಲೀಸ್ ಠಾಣೆಗಳಲ್ಲಿ ದಾಸ್ತಾನು ಮಾಡಲಾದ ವಾಹನಗಳು ಕೂಡ ದಟ್ಟಣೆಯನ್ನು ಉಂಟುಮಾಡುತ್ತವೆ ಮತ್ತು ಸುಗಮ ವಾಹನ ಸಂಚಾರದ ಮೇಲೆ ಪರಿಣಾಮ ಬೀರುತ್ತವೆ ಎಂದು ಹೇಳಿದರು.

ಅಂತಹ ವಾಹನಗಳನ್ನು ವಿಲೇವಾರಿ ಮಾಡಲು ನಗರದ ಹೊರವಲಯದಲ್ಲಿ 5-10 ಎಕರೆ ಜಾಗವನ್ನು ಸರ್ಕಾರ ಗುರುತಿಸಬೇಕು ಎಂದು ಒತ್ತಾಯಿಸಿದರು. ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಅಂತಹ ವಾಹನಗಳನ್ನು ಸ್ಕ್ರ್ಯಾಪ್ ಆಗುವ ಮುನ್ನ ಮಾರಾಟ ಮಾಡಬೇಕು ಎಂದರು.

ಇದಕ್ಕೆ ಉತ್ತರಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆಸಿ ಮಾಧುಸ್ವಾಮಿ, ಕೇಂದ್ರದ ನೀತಿಗೆ ಅನುಗುಣವಾಗಿ ಸರ್ಕಾರ ಸ್ಕ್ರ್ಯಾಪ್ ನೀತಿಯನ್ನು ರೂಪಿಸುತ್ತಿದೆ. ಆದರೆ, ಬಳಕೆಯಾಗದ ಸರ್ಕಾರಿ ವಾಹನಗಳನ್ನು ಮಾರಾಟ ಮಾಡಲು ನಿಗದಿತ ಕಾರ್ಯವಿಧಾನವಿದ್ದು, ಪೊಲೀಸ್ ಠಾಣೆಗಳ ಮುಂಭಾಗದಲ್ಲಿರುವ ವಾಹನಗಳ ಬಗ್ಗೆ ನ್ಯಾಯಾಲಯವು ನಿರ್ಧರಿಸುತ್ತದೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮುಂಬೈ: ಖ್ಯಾತ ಹಿರಿಯ ಗಾಯಕಿ ಆಶಾ ಭೋಸ್ಲೆ ನಿಧನ, ಗಣ್ಯರ ಕಂಬನಿ

US-Iran Peace Talks: ಇಸ್ಲಾಮಾಬಾದ್‌ನಲ್ಲಿ 21 ಗಂಟೆ ಮಾತುಕತೆಯಾದ್ರು, ಯುಎಸ್- ಇರಾನ್ ಶಾಂತಿ ಒಪ್ಪಂದ ವಿಫಲ! ಕಾರಣಗಳೇನು?

'ಇರಾನ್ ನಮಗೆ ಬೆದರಿಕೆಯೊಡ್ಡಿತ್ತು, ಆದರೆ ಈಗ ಬದುಕುಳಿಯಲು ಹೋರಾಡುತ್ತಿದೆ': ಶಾಂತಿ ಮಾತುಕತೆ ವಿಫಲದ ಬಳಿಕ ಇಸ್ರೇಲ್!

"Bad News": ಅಮೆರಿಕದ ಷರತ್ತುಗಳನ್ನು ಇರಾನ್ ಒಪ್ಪುತ್ತಿಲ್ಲ- ಜೆಡಿ ವ್ಯಾನ್ಸ್!

ಕೊಡಗು: 100 ಎಕರೆ ಅರಣ್ಯ ವಲಯದಲ್ಲಿ ಬೌದ್ಧಧರ್ಮ ಜೊತೆಗೆ ಪರಿಸರ ಸಂರಕ್ಷಣೆ ಮಾಡುತ್ತಿರುವ 'ಕರ್ಮ ಕರ್ಗ್ಯು ಮಠ!

SCROLL FOR NEXT