ಅಕ್ಷಯ್ ಕುಮಾರ್ 
ರಾಜ್ಯ

ಹುಬ್ಬಳ್ಳಿ ಧಾರವಾಡದಲ್ಲಿ ರಾಷ್ಟ್ರೀಯ ಯುವ ಜನೋತ್ಸವ: ನಟ ಅಕ್ಷಯ್ ಕುಮಾರ್ ಗೆ ಆಹ್ವಾನ

ಅವಳಿ ನಗರ ಹುಬ್ಬಳ್ಳಿ- ಧಾರವಾಡದಲ್ಲಿ ಜನವರಿ 12ರಿಂದ 16ರವರೆಗೆ ನಡೆಯಲಿರುವ  ರಾಷ್ಟ್ರೀಯ ಯುವ ಜನೋತ್ಸವಕ್ಕೆ ಬಾಲಿವುಡ್ ಖ್ಯಾತ ನಟ ಅಕ್ಷಯ್ ಕುಮಾರ್ ಅವರನ್ನು ಆಹ್ವಾನಿಸಲಾಗಿದೆ.

ಧಾರವಾಡ: ಅವಳಿ ನಗರ ಹುಬ್ಬಳ್ಳಿ- ಧಾರವಾಡದಲ್ಲಿ ಜನವರಿ 12ರಿಂದ 16ರವರೆಗೆ ನಡೆಯಲಿರುವ  ರಾಷ್ಟ್ರೀಯ ಯುವ ಜನೋತ್ಸವಕ್ಕೆ ಬಾಲಿವುಡ್ ಖ್ಯಾತ ನಟ ಅಕ್ಷಯ್ ಕುಮಾರ್ ಅವರನ್ನು ಆಹ್ವಾನಿಸಲಾಗಿದೆ.

ಧಾರವಾಡದ ವಿವಿಧ ಕಡೆಗಳಲ್ಲಿ ಯುವ ಜನೋತ್ಸವ ಆಯೋಜನೆ ಮಾಡಲು ಸೂಕ್ತ ಸ್ಥಳ ವೀಕ್ಷಣೆ ನಂತರ  ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸುದ್ದಿಗೋಷ್ಠಿ ನಡೆಸುವಾಗಲೇ  ಅಕ್ಷಯ್ ಕುಮಾರ್ ಅವರಿಗೆ ಕರೆ ಮಾಡಿ, ಯುವಜನೋತ್ಸವಕ್ಕೆ ಆಹ್ವಾನಿಸಿದರು. ಜ. 16ರಂದು ನಡೆಯುವ ಸಮಾರೋಪಕ್ಕೆ ಆಗಮಿಸುವಂತೆ ಜೋಶಿ, ಅಕ್ಷಯ ಕುಮಾರ್​ಗೆ ಹೇಳಿದರು. ಆದರೆ  ಜ. 12ರಂದೇ ಬರುತ್ತೇನೆ ಎಂದು ಅಕ್ಷಯ್ ಕುಮಾರ್ ಹೇಳಿದರು. ಆದರೆ ಪ್ರಧಾನಿ ಕಾರ್ಯಕ್ರಮ ಭದ್ರತೆ ವಿಷಯ ಇರುತ್ತೆ ಎಂದು ಜೋಶಿ ಹೇಳಿದರು.

ಐದು ದಿನಗಳ ಕಾರ್ಯಕ್ರಮಕ್ಕೆ ಜನವರಿ 12 ರಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದು, ವಿವಿಧ ರಾಜ್ಯಗಳಿಂದ ಸುಮಾರು 7,500 ಪ್ರತಿನಿಧಿಗಳು ಇದರಲ್ಲಿ ಭಾಗಿಯಾಗುತ್ತಾರೆ. ಅಂದು ನಾಡು ನುಡಿ ನಮ್ಮ ಸಾಂಸ್ಕೃತಿಕ ಬಿಂಬಿಸುವ ಅನೇಕ ಜಾನಪದ, ಸಾಂಸ್ಕೃತಿಕ ಕಾರ್ಯಕ್ರಮಗಳು, ಆಹಾರ ಮೇಳಗಳು ಸಹ ಇರುತ್ತವೆ ಎಂದು ಪ್ರಹ್ಲಾದ್ ಜೋಶಿ ತಿಳಿಸಿದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್