ರಾಜ್ಯ

ಬೆಂಗಳೂರು: ಪೊಲೀಸರ ಮೇಲೆ ರೌಡಿಗಳಿಂದ ಹಲ್ಲೆ, ಗುಂಡು ಹಾರಿಸಿ ಇಬ್ಬರ ಬಂಧನ

Shilpa D

ಬೆಂಗಳೂರು: ಅಪಹರಣ, ದರೋಡೆ ಮತ್ತು ಕಿಡ್ನಾಪ್  ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿಗಳನ್ನು ಬಂಧಿಸಲು ಹೋಗಿದ್ದ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದ ಇಬ್ಬರ ಕಾಲಿಗೆ ಗುಂಡು ಹಾರಿಸಿ ಪೊಲೀಸರು ಬಂಧಿಸಿದ್ದಾರೆ.

ಅಜಯ್ ಇತ್ತೀಚೆಗೆ ಅಪಹರಣ ಮತ್ತು ಸುಲಿಗೆ ಪ್ರಕರಣದಲ್ಲಿ ಭಾಗಿಯಾಗಿದ್ದು, ತಲೆಮರೆಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ಇಬ್ಬರು ಆರೋಪಿಗಳು ಹೊಸೂರು ರಸ್ತೆಯ ಸಿಂಗಸಂದ್ರ ಬಳಿ ಇದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ.

ಶುಕ್ರವಾರ ಆನೇಕಲ್‌ನಲ್ಲಿ ಪೊಲೀಸ್‌ ಪೇದೆ ರಂಗನಾಥ್‌ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ತಪ್ಪಿಸಿಕೊಂಡಿದ್ದ ವರುಣ್‌ ಅಲಿಯಾಸ್‌ ಕೆಂಚ, ಸರಣಿ ಅಪಹರಣ, ಡಕಾಯಿತಿ ನಡೆಸಿ ಸಾರ್ವಜನಿಕರಿಗೆ ತಲೆನೋವಾಗಿದ್ದ ಅಜಲ್‌ ಉರುಫ್‌ ಮೆಂಟಲ್‌ನನ್ನು ಬಂಧಿಸಲಾಗಿದೆ. ಈ ಇಬ್ಬರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ವರುಣ್‌ ಜಿಗಣಿ ಸಮೀಪದ ಕಲ್ಲುಬಾಳುನ ಮನೆಯೊಂದರಲ್ಲಿ ಆಶ್ರಯ ಪಡೆದಿರುವ ಬಗ್ಗೆ ಖಚಿತಪಡಿಸಿಕೊಂಡ ಆನೇಕಲ್‌ ಇನ್‌ಸ್ಪೆಕ್ಟರ್‌ ಚಂದ್ರಪ್ಪ ಹಾಗೂ ಸಿಬ್ಬಂದಿ ಮನೆಯನ್ನು ಸುತ್ತುವರಿದು ಶರಣಾಗಲು ತಿಳಿಸಿದರು. ಆಗ ಮನೆಯಿಂದ ಹೊರಬಂದ ಕೆಂಚ ಏಕಾಏಕಿ ಇನ್‌ಸ್ಪೆಕ್ಟರ್‌ ಮೇಲೆ ಹಲ್ಲೆಗೆ ಮುಂದಾದ. ಆಗ ಅಡ್ಡ ಬಂದ ಪೇದೆ ಶಂಕರ್‌ ಮೇಲೆ ಹಲ್ಲೆ ಮಾಡಿದ್ದಾನೆ. ಇನ್‌ಸ್ಪೆಕ್ಟರ್‌ ಸಿಬ್ಬಂದಿಯ ರಕ್ಷಣೆಗಾಗಿ ವರುಣ್‌ ಎಡ ಮೊಣಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಆರೋಪಿಗಳಲ್ಲಿ ಒಬ್ಬನಾದ ಕೃಷ್ಣ ಅಲಿಯಾಸ್ ಹಾವಳಿ ಕೃಷ್ಣನನ್ನು ಬಂಧಿಸಲಾಗಿದ್ದು, ಅಜಯ್ ಸ್ಕೂಟರ್‌ನಲ್ಲಿ ವೇಗವಾಗಿ ಹೋಗಿದ್ದಾನೆ. ಆತನನ್ನು ಹಿಂಬಾಲಿಸಿ ಹಾರಗದ್ದೆ ಗ್ರಾಮದಲ್ಲಿ ನಿಲ್ಲಿಸಿ ಅಲ್ಲಿ ಹೆಡ್ ಕಾನ್ಸ್‌ಟೇಬಲ್ ಮಹೇಶ್ ಮೇಲೆ ಕಠಾರಿಯಿಂದ ಹಲ್ಲೆ ನಡೆಸಿದ್ದಾನೆ

. ಇನ್ಸ್ ಪೆಕ್ಟರ್ ಸುದರ್ಶನ್ ಎಚ್ ವಿ ಆತನನ್ನು ಹಿಡಿಯಲು ಯತ್ನಿಸಿದಾಗ ಅಜಯ್ ಕಠಾರಿಯಿಂದ ಇರಿಯಲು ಯತ್ನಿಸಿದ್ದಾರೆ. ಇನ್ಸ್‌ಪೆಕ್ಟರ್ ಮೊದಲು ಗಾಳಿಯಲ್ಲಿ  ಗುಂಡು ಹಾರಿಸಿದ್ದಾರೆ ನಂತರ ಆತನ ಕಾಲಿಗೆ ಗುಂಡು ಹಾರಿಸಿದರು, ”ಅಜಯ್‌ಗ ವಿರುದ್ಧ ಜಿಗಣಿ ಠಾಣೆಯೊಂದರಲ್ಲೇ ಏಳು ಪ್ರಕರಣಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.

SCROLL FOR NEXT