ರಾಜ್ಯ

ದೇಶದಲ್ಲಿ ಹೆಚ್ಚಿದ ಕೋವಿಡ್ ಭೀತಿ: ಬೆಂಗಳೂರಿನಲ್ಲಿ 10 ದಿನಗಳಲ್ಲಿ 97 ಸಾವಿರ ಬೂಸ್ಟರ್ ಡೋಸ್‍‌ಗಳನ್ನು ಪಡೆದ ಜನರು

Ramyashree GN

ಬೆಂಗಳೂರು: ಓಮಿಕ್ರಾನ್‌ನ ರೂಂಪಾತರದಿಂದಾಗಿ ಜಾಗತಿಕ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ, ರಾಜ್ಯದಲ್ಲಿ ಕಳೆದ 10 ದಿನಗಳಲ್ಲಿ 97,036 ಬೂಸ್ಟರ್ ಡೋಸ್‌ಗಳನ್ನು ನೀಡಲಾಗಿದ್ದು, ಶುಕ್ರವಾರ 14,300 ಜನರು ತಮ್ಮ ಬೂಸ್ಟರ್ ಡೋಸ್‌ಗಳನ್ನು ತೆಗೆದುಕೊಂಡಿದ್ದಾರೆ.

ಕಳೆದ ಎರಡು ವಾರಗಳಲ್ಲಿ, ಎಲ್ಲಾ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆಸ್ಪತ್ರೆಗಳಲ್ಲಿ 25,000 ಲಸಿಕಾ ಡೋಸ್‌ಗಳನ್ನು ನೀಡಲಾಗಿದೆ.

ಬಿಬಿಎಂಪಿಯ ಆರೋಗ್ಯ ವಿಶೇಷ ಆಯುಕ್ತರಾದ ಡಾ.ಕೆ.ವಿ. ತ್ರಿಲೋಕ್ ಚಂದ್ರ ಮಾತನಾಡಿ, ಕೋವಿಡ್-ಸೂಕ್ತ ನಡವಳಿಕೆಯ ಬಗ್ಗೆ ಜನರಿಗೆ ಅರಿವು ಮೂಡಿಸಲಾಗುತ್ತಿದೆ ಮತ್ತು ಅವರು ಬೂಸ್ಟರ್ ಡೋಸ್ ತೆಗೆದುಕೊಳ್ಳುವ ಬಗ್ಗೆ ಒತ್ತು ನೀಡುತ್ತಿದ್ದಾರೆ ಎಂದು ಹೇಳಿದರು.

ಲಸಿಕೆಗಳ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ರಾಜ್ಯ ಆರೋಗ್ಯ ಇಲಾಖೆಯು ಕೇಂದ್ರದಿಂದ ಕೋವಿಶೀಲ್ಡ್ ಅನ್ನು ಕೋರಿದೆ. ಸದ್ಯ, ರಾಜ್ಯದಲ್ಲಿ ಸುಮಾರು 7.2 ಲಕ್ಷ ಡೋಸ್ ಕೋವ್ಯಾಕ್ಸಿನ್ ಇದ್ದು, ಸುಮಾರು 25-30 ಲಕ್ಷ ಡೋಸ್ ಕೋವಿಶೀಲ್ಡ್ ಅನ್ನು ಸಂಗ್ರಹಿಸಲು ಯೋಜಿಸುತ್ತಿದೆ.

ಬಿಬಿಎಂಪಿ ಮಟ್ಟದಲ್ಲಿ 1,500 ಮತ್ತು ರಾಜ್ಯ ಮಟ್ಟದಲ್ಲಿ 15,000 ಪರೀಕ್ಷೆಗಳ ಬದಲಿಗೆ ಪ್ರತಿದಿನ 5,000 ಪರೀಕ್ಷೆ ನಡೆಸುವುದರೊಂದಿಗೆ ಹೆಚ್ಚಿನ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯಲ್ಲಿ, ಕೋವಿಡ್ -19 ವಾರ್ಡ್‌ನಲ್ಲಿ ಇಬ್ಬರು ಸ್ಥಳೀಯ ರೋಗಿಗಳನ್ನು ಮಾತ್ರ ದಾಖಲಿಸಲಾಗಿದೆ. ಈಗ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಎಂದು ವೈದ್ಯಕೀಯ ಅಧೀಕ್ಷಕ ಡಾ ಕೆಂಪರಾಜ್ ಟಿ ತಿಳಿಸಿದ್ದಾರೆ.

SCROLL FOR NEXT