ರಾಜ್ಯ

ಫೆಮಾ ಪ್ರಕರಣ: ಮಂಗಳೂರಿನ ಕೆ ಮೊಹಮ್ಮದ್ ಹಾರಿಸ್ ಆಸ್ತಿ ವಶಪಡಿಸಿಕೊಂಡ ಇಡಿ

Srinivasamurthy VN

ಬೆಂಗಳೂರು: ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) 1999 ರ ಅಡಿಯಲ್ಲಿ ಮಂಗಳೂರಿನ ಕೆ ಮೊಹಮ್ಮದ್ ಹ್ಯಾರಿಸ್ ಹೆಸರಿನಲ್ಲಿದ್ದ 17.34 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿಗಳನ್ನು ಜಾರಿ ನಿರ್ದೇಶನಾಲಯ (ಇಡಿ) ವಶಪಡಿಸಿಕೊಂಡಿದೆ ಎಂದು ಕೇಂದ್ರ ಸಂಸ್ಥೆ ಮಂಗಳವಾರ ತಿಳಿಸಿದೆ. 

ವಶಪಡಿಸಿಕೊಂಡ ಆಸ್ತಿಗಳಲ್ಲಿ ಮಂಗಳೂರಿನಲ್ಲಿರುವ ಎರಡು ವಸತಿ ಮನೆಗಳು ಮತ್ತು ಒಂದು ಕೈಗಾರಿಕಾ ಪ್ಲಾಟ್ ಸೇರಿದೆ ಎನ್ನಲಾಗಿದೆ. ಮೂಲಗಳ ಪ್ರಕಾರ, ಅಧಿಕಾರಿಗಳು ಫೆಮಾ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿ ಪ್ರಕರಣವನ್ನು ತನಿಖೆ ಮಾಡಿದ್ದಾರೆ. “ಮಂಗಳೂರಿನ ನಿವಾಸಿ ಮುಕ್ಕಾ ಗ್ರೂಪ್ ಆಫ್ ಕಂಪನೀಸ್‌ನ ಹ್ಯಾರಿಸ್ ಅವರು ನಿಬಂಧನೆಗಳನ್ನು ಉಲ್ಲಂಘಿಸಿ ಸ್ಥಿರ ಆಸ್ತಿ, ವ್ಯಾಪಾರ ಘಟಕಗಳನ್ನು ಸಂಪಾದಿಸಿದ್ದಾರೆ ಮತ್ತು ಭಾರತದ ಹೊರಗೆ ವಿದೇಶೀ ವಿನಿಮಯ ವಹಿವಾಟು ನಡೆಸಿದ್ದಾರೆ ಎಂಬ FEMA ಮಾಹಿತಿಯ ಆಧಾರದ ಮೇಲೆ ಇದೀಗ ಅವರ ಆಸ್ತಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು  ಸಂಸ್ಥೆ ಹೇಳಿದೆ. 

ತನಿಖೆಯ ಸಂದರ್ಭದಲ್ಲಿ, ಹ್ಯಾರಿಸ್ ಅಜ್ಮಾನ್ ಯುಎಇಯಲ್ಲಿ ಫ್ಲಾಟ್ ಅನ್ನು ಖರೀದಿಸಿದ್ದು, ವಿದೇಶಿ ಬ್ಯಾಂಕ್ ಖಾತೆಗಳನ್ನು ಹೊಂದಿದ್ದಾರೆ ಮತ್ತು ಯುಎಇಯಲ್ಲಿ ವಿದೇಶಿ ವ್ಯಾಪಾರ ಘಟಕದಲ್ಲಿ ಹೂಡಿಕೆಗಳು/ಷೇರುಗಳನ್ನು ಹೊಂದಿದ್ದಾರೆ, ಇದರ ಸಂಪೂರ್ಣ ಮೌಲ್ಯ 17,34,80,746 ರೂ ಆಗಿದೆ. ಇದು FEMA ನ ವಿಭಾಗ 4 ರ ಉಲ್ಲಂಘನೆಯಾಗಿದೆ. 

FEMA ದ ಸೆಕ್ಷನ್ 37A ಅಡಿಯಲ್ಲಿ ನಿಬಂಧನೆಗಳ ಪ್ರಕಾರ, ಭಾರತದ ಹೊರಗೆ ಇರುವ ಯಾವುದೇ ವಿದೇಶಿ ವಿನಿಮಯ, ವಿದೇಶಿ ಭದ್ರತೆ ಅಥವಾ ಸ್ಥಿರ ಆಸ್ತಿಯನ್ನು FEMA ದ ಸೆಕ್ಷನ್ 4 ರ ವಿರುದ್ಧ ಎಂದು ಹೇಳಲಾಗಿದೆ. ಅಲ್ಲದೆ ED ಗೆ ಭಾರತದೊಳಗೆ ಅಂತಹ ವಿದೇಶಿ ವಿನಿಮಯ, ವಿದೇಶಿ ಭದ್ರತೆ ಅಥವಾ ಸ್ಥಿರ ಆಸ್ತಿ ಗೆ ಸಮಾನ ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಳ್ಳಲು ಅಧಿಕಾರವಿದೆ ಎಂದು ಇಡಿ ಹೇಳಿದೆ.
 

SCROLL FOR NEXT