ರಾಜ್ಯ

ಉತ್ತರ ಕನ್ನಡದ ಅಂಶಿ ಘಾಟ್ ಸಂಚಾರ ಸಂಪೂರ್ಣ ಸ್ಥಗಿತ ಇಲ್ಲ: ಅಧಿಕಾರಿಗಳು

Srinivasamurthy VN

ಕಾರವಾರ: ಉತ್ತರ ಕನ್ನಡದ ಅಂಶಿ ಘಾಟ್ ನಲ್ಲಿ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತ ಮಾಡುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಅಂಶಿ ಘಾಟ್ ನಲ್ಲಿ ವಾಹನಗಳ ಸಂಚಾರ ನಿರ್ಬಂಧಿಸುವ ಕುರಿತ ಜಿಲ್ಲಾಡಳಿತದ ನಿರ್ಧಾರಕ್ಕೆ ಸ್ಥಳೀಯ ನಿವಾಸಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಅಧಿಕಾರಿಗಳು ಈ ಕುರಿತು ಸ್ಪಷ್ಟನೆ ನೀಡಿದ್ದು, ಅಂಶಿ ಘಾಟ್ ನಲ್ಲಿ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಈ ಹಿನ್ನಲೆಯಲ್ಲಿ ಜೊಯಿಡಾ, ಅಂಶಿ ಮತ್ತು ಕುಂಬಾರವಾಡದ ನಿವಾಸಿಗಳು ನಿರಾಳರಾಗಿದ್ದಾರೆ ಎನ್ನಲಾಗಿದೆ.

ಭಾನುವಾರದಂದು ಅಂಶಿ ಘಾಟ್ ಅನ್ನು ಸಂಪೂರ್ಣವಾಗಿ ಸಂಚಾರಕ್ಕೆ ಮುಚ್ಚುವ ನಿರ್ಧಾರವನ್ನು ಪರಿಶೀಲಿಸಲು ಜಿಲ್ಲಾಡಳಿತದ ನಿರ್ಧಾರಿಸಿತ್ತು. ಜೋಯಿಡಾ ನಿವಾಸಿಗಳ ವಿರೋಧದ ನಂತರ, ಉತ್ತರ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮಿಹಿಲನ್ ಅವರು ಘಾಟ್‌ಗಳನ್ನು ಪುನಃ ತೆರೆಯುವ ಸಾಧ್ಯತೆಗಳನ್ನು ಪರಿಶೀಲಿಸುವುದಾಗಿ ಹೇಳಿದ್ದರು.

"ನಾವು ಪರಿಸ್ಥಿತಿಯನ್ನು ಪರಿಶೀಲಿಸುತ್ತಿದ್ದೇವೆ ಮತ್ತು ಘಾಟ್‌ಗಳನ್ನು ಸಂಚಾರಕ್ಕೆ ತೆರೆಯಲು ಸಾಧ್ಯವೇ ಎಂದು ನೋಡುತ್ತೇವೆ. ಪರಿಸ್ಥಿತಿಯನ್ನು ಅಧ್ಯಯನ ಮಾಡಿ ವರದಿ ನೀಡಲು ಎರಡು ವಿಶೇಷ ಕಾರ್ಯಪಡೆಗಳನ್ನು ನೇಮಿಸಲಾಗಿದೆ. ಸಂಚಾರಕ್ಕೆ ಅನುವು ಮಾಡಿಕೊಟ್ಟರೂ ರಾತ್ರಿ ನಿಷೇಧಾಜ್ಞೆ ಮುಂದುವರಿಯಲಿದೆ ಎಂದು ಅವರು ಹೇಳಿದರು. 

ಇನ್ನು ಕಳೆದ ಶನಿವಾರದಂದು ಮುಚ್ಚಲಾದ NH-69 ಅನ್ನು ಮುಂದಿನ 15 ದಿನಗಳವರೆಗೆ ಮುಚ್ಚಿರುತ್ತದೆ. ಹಾಳಾದ ಹೊನ್ನಾವರ-ಮುಳಬಾಗಲು ರಸ್ತೆಯನ್ನು ಸರಿಪಡಿಸುವ ಎನ್‌ಎಚ್‌ಎಐ ಅಧಿಕಾರಿಗಳು, ಕನಿಷ್ಠ ಎರಡು ವಾರಗಳವರೆಗೆ ಭಾರೀ ವಾಹನಗಳಿಗೆ ಈ ಮಾರ್ಗವನ್ನು ಮುಚ್ಚಲಾಗುವುದು ಎಂದು ಹೇಳಿದರು. ರಸ್ತೆಗಳಲ್ಲಿ ಹೆಚ್ಚಿನ ಪ್ರಮಾಣದ ನೀರು ಸಂಗ್ರಹವಾಗಿರುವುದರಿಂದ ಭೂಕುಸಿತಕ್ಕೆ ಕಾರಣವಾಯಿತು, ಆದರೆ ಕೆಲವು ತಿಂಗಳ ಹಿಂದೆ ನಿರ್ಮಿಸಲಾದ ತಡೆಗೋಡೆ ಈ ಹಾನಿಯನ್ನು ಕಡಿಮೆ ಮಾಡಿದೆ ಎಂದು ಅವರು ಹೇಳಿದರು.
 

SCROLL FOR NEXT