ಡಾ ಸಿ ಎನ್ ಮಂಜುನಾಥ್ 
ರಾಜ್ಯ

ಡಾ. ಸಿಎನ್ ಮಂಜುನಾಥ್ ಸೇವಾವಧಿ ಒಂದು ವರ್ಷ ವಿಸ್ತರಣೆ: ರಾಜ್ಯ ಸರ್ಕಾರ ಆದೇಶ

ಜಯದೇವ ಹೃದ್ರೋಗ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರಾಗಿರುವ ಡಾ.ಸಿ.ಎನ್. ಮಂಜುನಾಥ್ ಅವರ ಸೇವಾವಧಿಯನ್ನು ಮತ್ತೊಂದು ವರ್ಷ ವಿಸ್ತರಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. 

ಬೆಂಗಳೂರು: ಜಯದೇವ ಹೃದ್ರೋಗ ಮತ್ತು ಸಂಶೋಧನಾ ಸಂಸ್ಥೆಯ (Jayadeva hospital) ನಿರ್ದೇಶಕರಾಗಿರುವ ಡಾ.ಸಿ.ಎನ್. ಮಂಜುನಾಥ್ (Dr C N Manjunath) ಅವರ ಸೇವಾವಧಿಯನ್ನು ಮತ್ತೊಂದು ವರ್ಷ ವಿಸ್ತರಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. 

ಅವರು 2023ರರ ಜುಲೈ 19ರವರೆಗೆ ನಿರ್ದೇಶಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ಮುಖ್ಯಮಂತ್ರಿ ಬೊಮ್ಮಾಯಿಯವರು ಡಾ. ಸಿ ಎನ್ ಮಂಜುನಾಥ್ ಅವರ ಸಾಧನೆ ಮತ್ತು ಆಡಳಿತ ವೈಖರಿ ಪರಿಗಣಿಸಿ ಅವರ ಸೇವಾವಧಿಯನ್ನು ಮುಂದಿನ ಒಂದು ವರ್ಷಕ್ಕೆ ವಿಸ್ತರಿಸಿದ್ದಾರೆ.

ತಮ್ಮ ಸೇವಾವಧಿ ವಿಸ್ತರಣೆ ಮಾಡಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಅವರಿಗೆ ಡಾ‌. ಸಿ ಎನ್ ಮಂಜುನಾಥ್ ಅಭಿನಂದನೆ ತಿಳಿಸಿದ್ದಾರೆ.

ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರಾಗಿರುವ  ಡಾ.ಸಿ.ಎನ್. ಮಂಜುನಾಥ್ ಅವರು ನಿವೃತ್ತಿಯಾಗುತ್ತಿರುವುದು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಸಿಬ್ಬಂದಿಗೆ ಅಪಾರವಾದ ನೋವನ್ನುಂಟು ಮಾಡಿದೆ.

ಅದಕ್ಕೆ ಸಿಬ್ಬಂದಿ ವರ್ಗವು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದು ಮಂಜುನಾಥ್ ಅವರನ್ನೇ ನಿರ್ದೇಶಕರನ್ನಾಗಿ ಮುಂದುವರಿಸುವಂತೆ ಮನವಿ ಮಾಡಿದ್ದರು. ನ್ಯಾಷನಲ್ ಮೆಡಿಕಲ್ ಕೌನ್ಸಿಲ್ ಪ್ರಕಾರ 70 ವರ್ಷದವರೆಗೆ ಸೇವೆ ಸಲ್ಲಿಸಲು ಅವಕಾಶ ಕೊಡಿ ಎಂದು ಕೇಳಿಕೊಂಡಿದ್ದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅನಿವಾರ್ಯ ಪರಿಸ್ಥಿತಿ, ವಾಣಿಜ್ಯ ಸಿಲಿಂಡರ್ ಸ್ಟಾಕ್ ಇಲ್ಲ, ಹೋಟೆಲ್‌ನವರು 1 ವಾರ ಸಹಿಸಿಕೊಳ್ಳಬೇಕು: ಸಚಿವ ಕೆಎಚ್ ಮುನಿಯಪ್ಪ!

IPLಗೂ ತಟ್ಟಲಿದೆ ಯುದ್ಧದ ಬಿಸಿ: ಐಪಿಎಲ್ ಪಂದ್ಯ ಒಂದಕ್ಕೆ ಬೇಕು 3 ಸಾವಿರ ಲೀಟರ್ ಡೀಸೆಲ್, ಪಂದ್ಯಾವಳಿಗೆ ಬ್ರೇಕ್?

ಕಡ್ಡಾಯ ಮುಟ್ಟಿನ ರಜೆ: 'ಹೀಗಾದ್ರೆ.. ಯಾವುದೇ ಕಂಪನಿಗಳೂ ಮಹಿಳೆಯರ ಕೆಲಸಕ್ಕೆ ಸೇರಿಸಿಕೊಳ್ಳಲ್ಲ..': ಬೇಡಿಕೆ ತಿರಸ್ಕರಿಸಿದ Supreme Court

ಮಗಳನ್ನು ವಾಪಸ್ ಮನೆಗೆ ಕರೆತರಲು ಸಹಾಯ ಮಾಡಿ: ಮಧ್ಯ ಪ್ರದೇಶ CMಗೆ ಮೊನಾಲಿಸಾ ತಂದೆ ಮನವಿ

West Asia conflict: ಇರಾಕ್‌ನಲ್ಲಿ ಅಮೆರಿಕಾದ KC-135 ಸೇನಾ ವಿಮಾನ ಪತನ; ನಾಲ್ವರು ಸಿಬ್ಬಂದಿ ಸಾವು

SCROLL FOR NEXT