ರಾಜ್ಯ

ಬಿಬಿಎಂಪಿ ಚುನಾವಣೆ: ಇನ್ನೊಂದು ವಾರದಲ್ಲಿ ಮೀಸಲಾತಿ ಕೆಲಸ ಪೂರ್ಣ; ಅಧಿಕಾರಿಗಳ ವಿಶ್ವಾಸ

Srinivas Rao BV

ಬೆಂಗಳೂರು: ಪುರಸಭೆಯ ಕೌನ್ಸಿಲ್ ಚುನಾವಣೆಗೆ ಮೀಸಲಾತಿಗೆ ಸಂಬಂಧಿಸಿದ ಕೆಲಸಗಳನ್ನು ಒಂದು ವಾರದಲ್ಲಿ ಪೂರ್ಣಗೊಳಿಸಲು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದ ಬೆನ್ನಲ್ಲೇ ಕೆಲಸಗಳು ಚುರುಕುಗೊಂಡಿವೆ. 

ಈ ಬಗ್ಗೆ ಮಾತನಾಡಿರುವ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಮೀಸಲಾತಿ ಕೆಲಸಗಳು ಚುರುಕುಗೊಂಡಿದ್ದು, ಆಗಸ್ಟ್ ತಿಂಗಳಾಂತ್ಯ ಅಥವಾ ಸೆಪ್ಟೆಂಬರ್ ಮೊದಲ ವಾರದಲ್ಲಿ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
 
ಗುರುವಾರದಂದು ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಕ್ಕೆ ಒಂದು ವಾರದಲ್ಲಿ ಮೀಸಲಾತಿಗೆ ಸಂಬಂಧಿಸಿದ ಕೆಲಸಗಳನ್ನು ಪೂರ್ಣಗೊಳಿಸಬೇಕೆಂದು ಸೂಚನೆ ನೀಡಿತ್ತು. 

"ಒಮ್ಮೆ ಸುಪ್ರೀಂ ಕೋರ್ಟ್ ಆದೇಶ ಬಂದ ನಂತರ ಬೇರೆ ದಾರಿ ಇರುವುದಿಲ್ಲ. ದೀರ್ಘಾವಧಿಯಿಂದ ನಗರಪಾಲಿಕೆಯನ್ನು ಕಾರ್ಪೊರೇಟರ್ ಗಳು ಇಲ್ಲದೇ ನಡೆಸಲಾಗುತ್ತಿದೆ. ಸುಪ್ರೀಂ ಕೋರ್ಟ್ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವುದರಿಂದ ಏನೂ ಪ್ರಯೋಜನವಾಗುವುದಿಲ್ಲ. ನಮಗೆ ಕಾರ್ಪೊರೇಟರ್ ಗಳ ಅಗತ್ಯವಿದ್ದು, ನಾವು ಅದಕ್ಕಾಗಿ ಕಾಯುತ್ತಿದ್ದೇವೆ. ಡೀಲಿಮಿಟೇಷನ್ ಪ್ರಕ್ರಿಯೆ ವೇಳೆ ಆಕ್ಷೇಪಣೆಗಳನ್ನು ಸಲಿಸಿದ್ದ ಬಹುತೇಕ ಮಂದಿಯ ಸಲಹೆಯೂ ಇದೆ ಆಗಿತ್ತು" ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆ. 

ಪ್ರಜೆಗಳು ಹಾಗೂ ಎಲ್ಲಾ ಪಕ್ಷದ ಮಾಜಿ ಕಾರ್ಪೊರೇಟರ್ ಗಳನ್ನು ಗಮನದಲ್ಲಿಟ್ಟುಕೊಂಡು ಅಧಿಕಾರಿಗಳು ಮೀಸಲಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಅಧಿಕಾರಿಗಳು ತಮ್ಮ ಎಲ್ಲಾ ಪ್ರಯತ್ನ ಮಾಡುತ್ತಿದ್ದಾರೆ.

ಮೀಸಲಾತಿ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಅದನ್ನು ಸರ್ಕಾರದ ಅನುಮೋದನೆಗೆ ಕಳಿಸಲಾಗುತ್ತದೆ, ನಂತರ ಸಾರ್ವಜನಿಕರ ಆಕ್ಷೇಪಣೆಗಳನ್ನು ಸ್ವೀಕರಿಸಲಾಗುತ್ತದೆ. ಒಮ್ಮೆ ಅಂತಿಮಗೊಂಡ ಬಳಿಕ ಅದನ್ನು ಚುನಾವಣಾ ಆಯೋಗಕ್ಕೆ ಕಳಿಸಲಾಗುತ್ತದೆ.  ಚುನಾವಣಾ ಅಧಿಕಾರಿಗಳು ಚುನಾವಣೆಗೆ ಸಿದ್ಧ ಎಂದು ಹೇಳಿದ್ದು, ಸುಪ್ರೀಂ ನಿರ್ದೇಶನದ ಪ್ರಕಾರ, ಡೀಲಿಮಿಟೇಷನ್ ಪ್ರಕ್ರಿಯೆ ಪೂರ್ಣಗೊಂಡ 9 ನೇ ವಾರದೊಳಗೆ ಚುನಾವಣೆ ದಿನಾಂಕವನ್ನು ಘೋಷಣೆ ಮಾಡಬೇಕಿದೆ.

SCROLL FOR NEXT