ರಾಜ್ಯ

ಅಗ್ನಿಪಥ್ ಯೋಜನೆ ವಿರುದ್ಧ ಪ್ರತಿಭಟನೆ: ಎರಡು ಬಾರಿ ಮೊಹಮ್ಮದ್ ನಲಪಾಡ್ ಬಂಧನ

Nagaraja AB

ಬೆಂಗಳೂರು: ಕೇಂದ್ರ ಸರ್ಕಾರದ ಅಗ್ನಿಪಥ ಯೋಜನೆ ವಿರುದ್ದ ರೈಲು ನಿಲ್ದಾಣದ ಹೊರಗಡೆ ಸೋಮವಾರ ಪ್ರತಿಭಟನೆ ನಡೆಸಿದ ಯುವ ಕಾಂಗ್ರೆಸ್ ಅಧ್ಯಕ್ಷ ಹಾಗೂ ಶಾಂತಿನಗರ ಶಾಸಕ ಎನ್.ಎ. ಹ್ಯಾರಿಸ್ ಅವರ ಪುತ್ರ ಮೊಹಮ್ಮದ್ ನಲಪಾಡ್ ಎರಡು ಬಾರಿ ಬಂಧನಕ್ಕೊಳಗಾದರು. ನಲಪಾಡ್ ಅವರನ್ನು ಪೂರ್ವ ವಲಯದ ಡಿಸಿಪಿ ಬಂಧಿಸಿ, ತದನಂತರ ಬಿಡುಗಡೆ ಮಾಡಿದರು.

ಸೋಮವಾರ ಮಧ್ಯಾಹ್ನ 2 ಗಂಟೆ ಸುಮಾರಿನಲ್ಲಿ ಮೊಹಮ್ಮದ್ ನಲಪಾಡ್ ನೇತೃತ್ವದಲ್ಲಿನ 15 ಮಂದಿ ಪ್ರತಿಭಟನಾಕಾರರು ಕಂಟೋನ್ಮೆಂಟ್ ರೈಲು ನಿಲ್ದಾಣದ ಬಳಿ ಪ್ರತಿಭಟನೆ ನಡೆಸಿದ್ದಾರೆ. ಅಗ್ನಿಪಥ ಯೋಜನೆ ವಿರುದ್ಧ ಭಿತ್ತಿಪತ್ರ ಪ್ರದರ್ಶಿಸಿದ ಪ್ರತಿಭಟನಾಕಾರರು ಘೋಷಣೆ ಕೂಗಿದ್ದಾರೆ.

ಆದಾಗ್ಯೂ, ಭಾರತ್ ಬಂದ್ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಭದ್ರತೆ ಒದಗಿಸಿದ್ದರಿಂದ ಪ್ರತಿಭಟನಾಕಾರರು ರೈಲು ನಿಲ್ದಾಣ ಪ್ರವೇಶಿಸಲು ಸಾಧ್ಯವಾಗಲಿಲ್ಲ ಎಂದು ಮೂಲಗಳು ತಿಳಿಸಿವೆ.

ತದನಂತರ  ದೊಡ್ಡ ಗುಂಪಿನೊಂದಿಗೆ ಸಂಜೆ 7 ಗಂಟೆ ಸುಮಾರಿಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಬಳಿಗೆ ಆಗಮಿಸಿದ ನಲಪಾಡ್ ಮತ್ತೊಮ್ಮೆ ಅಗ್ನಿಪಥ್ ಯೋಜನೆ ವಿರೋಧಿಸಿ ಪ್ರತಿಭಟಿಸಿದ್ದಾರೆ. ಅಲ್ಲದೇ 'ಮೋದಿ ಗೋ ಬ್ಯಾಕ್' ಎಂಬ ಘೋಷಣೆ ಕೂಗಿದ್ದಾಗಿ ಮೂಲಗಳು ಹೇಳಿವೆ.

SCROLL FOR NEXT