ರಾಜ್ಯ

'ಮುಖ್ಯ ಆಯುಕ್ತರ ನಡೆ, ವಲಯದ ಕಡೆ': ಬೊಮ್ಮನಹಳ್ಳಿ ವಲಯಕ್ಕೆ ಬಿಬಿಎಂಪಿ ಆಯುಕ್ತ ಭೇಟಿ; ಪ್ರವಾಹ, ಗುಂಡಿ ರಸ್ತೆಗಳ ಬಗ್ಗೆ ಹರಿದುಬಂದ ದೂರು!

Sumana Upadhyaya

ಬೆಂಗಳೂರು: ಬೊಮ್ಮನಹಳ್ಳಿಯಲ್ಲಿ ‘ಮುಖ್ಯ ಆಯುಕ್ತರ ನಡೆ ವಲಯದ ಕಡೆ’ ಕಾರ್ಯಕ್ರಮ ಸಂದರ್ಭದಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ನಾಗರಿಕ ಸಮಸ್ಯೆಗಳ ಕುರಿತು ದೂರುಗಳು ಮತ್ತು ಸಲಹೆಗಳ ಮಹಾಪೂರವೇ ಹರಿದುಬಂತು. ಹತ್ತಾರು ರೆಸಿಡೆಂಟ್ ವೆಲ್ ಫೇರ್ ಅಸೋಸಿಯೇಷನ್ ಗಳು ಮತ್ತು ಜನರು ಅಹವಾಲು ಸಲ್ಲಿಸಿದರು.

ಸಭೆಯ ನಂತರ, ಗಿರಿನಾಥ್ ಅವರು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿ, ಕೆಸರು ರಾಶಿಯಿಂದ ಮನೆಗಳಿಗೆ ನೀರು ನುಗ್ಗುವುದು, ಚರಂಡಿಗಳು ತುಂಬಿ ಹರಿಯುವುದು, ಅಕ್ರಮ ನಿರ್ಮಾಣ ಮತ್ತು ಇತರವುಗಳ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ.

''ಶೀಘ್ರದಲ್ಲಿ ಹೂಳು ತೆಗೆಯಲಾಗುವುದು, ಕಟ್ಟಡ ಮಾಲೀಕರಿಗೆ ನೋಟಿಸ್‌ ಕಳುಹಿಸಲಾಗುವುದು. ಮರದ ಕೊಂಬೆಗಳು ಮತ್ತು ಎಲೆಗಳು ತ್ಯಾಜ್ಯ ನಿವೇಶನಗಳ ಕಡೆ ಹೋಗುವುದರಿಂದ ನಿವಾಸಿಗಳು ತಮ್ಮ ವಲಯಗಳಲ್ಲಿ ಸ್ವಚ್ಛಗೊಳಿಸುವಂತೆ ಕೇಳಿಕೊಂಡಿದ್ದಾರೆ. ಸೆಕ್ಟರ್ 6 ಮತ್ತು 7ರಲ್ಲಿ ಫುಟ್ ಪಾತ್ ಅತಿಕ್ರಮಣ, ಗುಂಡಿ, ಚರಂಡಿ ಸಮಸ್ಯೆಗಳ ಬಗ್ಗೆ ದೂರುಗಳಿದ್ದು, ಈ ಬಗ್ಗೆ ಪರಿಶೀಲಿಸಲಾಗುವುದು ಎಂದರು.

ಪಾಲಿಕೆ ಆದಾಯ ಗಳಿಕೆ ಎಚ್‌ಎಸ್‌ಆರ್‌ ಲೇಔಟ್‌ನ ಸಂಕಷ್ಟವನ್ನು ಹೆಚ್ಚಿಸಿದೆ. ಎಚ್‌ಎಸ್‌ಆರ್‌ ಲೇಔಟ್‌ನ ಎಲ್ಲಾ ವಲಯಗಳ ಸಂಘಗಳ ಅಧ್ಯಕ್ಷ ಬಿಎನ್‌ಆರ್‌ ರೆಡ್ಡಿ, ಮಳೆಗಾಲದಲ್ಲಿ ಮಳೆ ನೀರು ಹರಿದರೆ ಮನೆಗಳಿಗೆ ನೀರು ನುಗ್ಗುವ ಭೀತಿ ಕೆಲ ಬಡಾವಣೆಗಳ ನಿವಾಸಿಗಳಿಗೆ ಇದೆ. 'ಚರಂಡಿಗಳನ್ನು ಸ್ವಚ್ಛಗೊಳಿಸಿ ಬಹಳ ದಿನಗಳಾಗಿವೆ. ಬಿಬಿಎಂಪಿಯು ಯೋಜನೆ ಇಲ್ಲದೆ ಹಲವು ಆದಾಯದ ಹಣಗಳನ್ನು ಪಡೆದುಕೊಂಡಿದೆ. ಕಂದಾಯ ವ್ಯಾಪ್ತಿಯ ನಿವಾಸಿಗಳು ತ್ಯಾಜ್ಯ ನೀರು, ಕಸವನ್ನು ಚರಂಡಿಗೆ ಬಿಡುತ್ತಾರೆ ಎಂದರು.

SCROLL FOR NEXT