ಸಂಗ್ರಹ ಚಿತ್ರ 
ರಾಜ್ಯ

3 ಸಾವಿರ ಕೋಟಿ ರೂ. ಹೂಡಿಕೆಯೊಂದಿಗೆ ಪೀಠೋಪಕರಣಗಳ ದೈತ್ಯ ‘ಐಕಿಯ’ ಬೆಂಗಳೂರಿನಲ್ಲಿಂದು ಕಾರ್ಯಾರಂಭ!

ಪೀಠೋಪಕರಣಗಳ ದೈತ್ಯ ಐಕಿಯಾ ತನ್ನ 4.60 ಲಕ್ಷ ಚದರ ಅಡಿ ವಿಸ್ತೀರ್ಣದ ಮಳಿಗೆಯನ್ನು ಬುಧವಾರ ಬೆಂಗಳೂರಿನ ನಾಗಸಂದ್ರದಲ್ಲಿ ಆರಂಭಿಸುತ್ತಿದೆ.

ಬೆಂಗಳೂರು: ಪೀಠೋಪಕರಣಗಳ ದೈತ್ಯ ಐಕಿಯಾ ತನ್ನ 4.60 ಲಕ್ಷ ಚದರ ಅಡಿ ವಿಸ್ತೀರ್ಣದ ಮಳಿಗೆಯನ್ನು ಬುಧವಾರ ಬೆಂಗಳೂರಿನ ನಾಗಸಂದ್ರದಲ್ಲಿ ಆರಂಭಿಸುತ್ತಿದೆ.

ಮಳಿಗೆಯು ನಾಗಸಂದ್ರ ಮೆಟ್ರೋ ನಿಲ್ದಾಣಕ್ಕೆ ಹೊಂದಿಕೊಂಡಿದ್ದು, ಮಳಿಗೆಯು 1,000 ಜನರನ್ನು ಕೆಲಸಕ್ಕೆ ನೇಮಿಸಿಕೊಳ್ಳಲಿದೆ. ಶೇ.72ರಷ್ಟು ಸ್ಥಳೀಯ ಹಾಗೂ ಶೇ.20ರಷ್ಟು ನೆರೆಹೊರೆಯವರನ್ನು ನೇಮಿಸಿಕೊಳ್ಳಲು ಚಿಂತನೆ ನಡೆಸಿದೆ. ಈಗಾಗಲೇ ಆನ್'ಲೈನ್ ಮೂಲಕ ನೇಮಕಾತಿಗಳು ನಡೆದಿದ್ದು, ಬ್ರ್ಯಾಂಡ್‌ನೊಂದಿಗೆ ಪರಿಚಿತರಾಗಲು ನೌಕರರನ್ನು ಮುಂಬೈ ಮತ್ತು ಹೈದರಾಬಾದ್ ನಲ್ಲಿ ಅಸ್ತಿತ್ವದಲ್ಲಿರುವ ಐಕಿಯಾ ಮಳಗಿಗೆಗಳಿಗೆ ಕಳುಹಿಸಲಾಗಿದೆ ಎಂದು ಐಕಿಯನ ಕಂಟ್ರಿ ಪೀಪಲ್ ಮತ್ತು ಕಲ್ಚರ್ ಮ್ಯಾನೇಜರ್ ಪರಿಣೀತಾ ಸೆಸಿಲ್ ಲಾಕ್ರಾ ಮಾಹಿತಿ ನೀಡಿದ್ದಾರೆ.

ಒಟ್ಟು ಉದ್ಯೋಗಿಗಳಲ್ಲಿ ಶೇಕಡಾ 48 ರಷ್ಟು ಮಹಿಳೆಯರನ್ನು ನೇಮಕ ಮಾಡಿಕೊಳ್ಳಲಾಗಿದೆ. ಫೋರ್ಕ್‌ಲಿಫ್ಟ್ ಡ್ರೈವಿಂಗ್, ಪವರ್ ಸ್ಟ್ಯಾಕಿಂಗ್, ಅಸೆಂಬ್ಲಿ ಮತ್ತು ಇನ್‌ಸ್ಟಾಲೇಶನ್ ಸೇವೆಗಳಲ್ಲಿ ಸಾಮಾನ್ಯವಾಗಿ ಪುರುಷರನ್ನು ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಇದೀಗ ಈ ವಿಭಾಗದಲ್ಲೂ ಮಹಿಳೆಯರಿಗೆ ಅವಕಾಶ ನೀಡಲಾಗಿದೆ.

7,000 ಕ್ಕೂ ಹೆಚ್ಚು ಉತ್ಪನ್ನಗಳನ್ನು ಒಳಗೊಂಡಿರುವ ಐಕಿಯ ಕರ್ನಾಟಕದಲ್ಲಿ 3,000 ಕೋಟಿ ರೂಪಾಯಿ ಹೂಡಿಕೆಯನ್ನು ಯೋಜಿಸಿದೆ ಮತ್ತು ಈ ವರ್ಷ 5 ಮಿಲಿಯನ್ ಪ್ರವಾಸಿಗರನ್ನು ನಿರೀಕ್ಷಿಸುತ್ತಿದೆ. ಗ್ರಾಹಕರು ಈಗ ಅದರ ಕೆಲವು ಸಾಂಪ್ರದಾಯಿಕ ಉತ್ಪನ್ನಗಳಾದ ಬಿಲ್ಲಿ ಬುಕ್ ಕೇಸ್, ಫ್ರಾಗ್ರಿಕ್ ಮಗ್ಸ್ ಮತ್ತು ಸೋಫಾಗಳನ್ನು ಮಳಿಗೆಯಲ್ಲಿ ಖರೀದಿ ಮಾಡಬಹುದಾಗಿದೆ.

ಬೆಂಗಳೂರಿನಲ್ಲಿ ಈಗಾಗಲೇ 1.8 ಲಕ್ಷ ಗ್ರಾಹಕರನ್ನು ಹೊಂದಿರುವ ಈ ಬ್ರ್ಯಾಂಡ್, ಮುಂದಿನ ವರ್ಷ ನಗರದಲ್ಲಿ ತನ್ನ ಮೊದಲ ಸಿಟಿ ಸೆಂಟರ್ ಸ್ಟೋರ್ ಅನ್ನು ಪ್ರಾರಂಭಿಸಲು ಯೋಜಿಸಿದೆ. ಪ್ರಸ್ತುತ, ಗುರುಗ್ರಾಮ್ ಮತ್ತು ನೋಯ್ಡಾದಲ್ಲಿ ಮಳಿಗೆಗಳನ್ನು ಹೊಂದಲು ಯೋಜಿಸಿದೆ. ಐಕಿಯ ಭಾರತದಾದ್ಯಂತ 3,000 ಕ್ಕೂ ಹೆಚ್ಚು ಜನರನ್ನು ನೌಕರಿಗೆ ನೇಮಿಸಿಕೊಂಡಿದೆ ಮತ್ತು ಭವಿಷ್ಯದಲ್ಲಿ ಇದನ್ನು 10,000 ಕ್ಕೆ ಹೆಚ್ಚಿಸಲು ಬಯಸಿದೆ ಎಂದು ತಿಳಿಸಿದ್ದಾರೆ.

ಬಳಿಕ ಬೆಂಗಳೂರಿನ ಗ್ರಾಹಕರ ಬಗ್ಗೆ ಮಾತನಾಡಿದ ಪರಿಣಿತಾ, ಮುಂಬೈಗಿಂತ ಭಿನ್ನವಾಗಿ ಬಾಲ್ಕನಿಗಳನ್ನು ಬಳಸುವುದು ಬೆಂಗಳೂರಿನ ವಿಶಿಷ್ಟ ಲಕ್ಷಣಗಳಲ್ಲಿ ಒಂದಾಗಿದೆ ಎಂದರು.

ವಾರದ ದಿನಗಳಲ್ಲಿ, ಅಂಗಡಿಯು 10,000 ಕ್ಕಿಂತ ಹೆಚ್ಚು ಜನಸಂದಣಿಯನ್ನು ನಿರೀಕ್ಷಿಸುತ್ತದೆ ಮತ್ತು ವಾರಾಂತ್ಯದಲ್ಲಿ ಈ ಸಂಖ್ಯೆ ದ್ವಿಗುಣಗೊಳ್ಳಲಲಿದೆ. ಪ್ರಸ್ತುತ, ಶೇಕಡಾ 30 ರಷ್ಟು ಗ್ರಾಹಕರು ಆನ್‌ಲೈನ್‌ನಲ್ಲಿ ಉತ್ಪನ್ನಗಳನ್ನು ಖರೀದಿಸುತ್ತಿದ್ದಾರೆ. ಮುಂಬರುವ ವರ್ಷಗಳಲ್ಲಿ ಸ್ಥಳೀಯ ಮೂಲಗಳನ್ನು ಹೆಚ್ಚಿಸಲು ಚಿಂತನೆ ನಡೆಸಲಾಗಿದೆ. ಪ್ರಸ್ತುತ ಇದರ ಪ್ರಮಾಣ ಶೇ.27ರಷ್ಟಿದೆ. ಕರ್ನಾಟದ 5 ಪೂರೈಕೆದಾರರೊಂದಿಗೆ ಪ್ರಸ್ತು ಐಕಿಯ ಕೆಲಸ ಮಾಡುತ್ತಿದೆ ಎಂದು ಮಾಹಿತಿ ನೀಡಿದರು.

2018 ರಲ್ಲಿ ಭಾರತಕ್ಕೆ ಕಾಲಿಟ್ಟ ಸ್ವೀಡಿಷ್ ಪೀಠೋಪಕರಣಗಳ ದೈತ್ಯ ಐಕಿಯ, ವಿಶ್ವದಾದ್ಯಂತ 400 ಮಳಿಗೆಗಳನ್ನ ಹೊಂದಿದೆ. ಭಾರತದಲ್ಲಿ ಅಹಮದಾಬಾದ್ ಸೇರಿ 7 ನಗರಗಳಲ್ಲಿ ಆನ್‌ಲೈನ್ ಶಾಪಿಂಗ್ ವ್ಯವಸ್ಥೆಯನ್ನ ಹೊಂದಿದೆ. ಲಕ್ಷಾಂತರ ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಗೃಹೋಪಯೋಗಿ ವಸ್ತುಗಳನ್ನು ಮಾರಾಟ ಮಾಡುತ್ತದೆ. ಇಲ್ಲಿ 7000 ಕ್ಕೂ ಅಧಿಕ ವಿವಿಧ ಮಾದರಿಯ ಫರ್ನೀಚರ್‌ಗಳು ಸಿಗಲಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

SCROLL FOR NEXT