ರಾಜ್ಯ

ಜಿಎಸ್‌ಟಿ ಕೌನ್ಸಿಲ್ ರಾಜ್ಯಗಳಿಗೆ ತೆರಿಗೆ ಪರಿಹಾರ ವಿಸ್ತರಿಸುವ ವಿಶ್ವಾಸವಿದೆ: ಸಿಎಂ ಬೊಮ್ಮಾಯಿ

Lingaraj Badiger

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ  ಅವರು ಸೋಮವಾರ ಸಂಜೆ ಚಂಡೀಗಢಕ್ಕೆ ತೆರಳಿದರು. ಅವರು ಜೂನ್ 28 ಹಾಗೂ 29 ರಂದು ನಡೆಯಲಿರುವ 47ನೇ ಜಿ.ಎಸ್. ಟಿ. ಕೌನ್ಸಿಲ್ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಸಭೆಯಲ್ಲಿ ಜಿಎಸ್ ಟಿ ಕುರಿತು ಸಮಗ್ರ ಚರ್ಚೆ ನಡೆಯಲಿದೆ.

ಚಂಡೀಗಢಕ್ಕೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ,  ಜಿ.ಎಸ್. ಟಿ. ಕೌನ್ಸಿಲ್ ರಾಜ್ಯಗಳಿಗೆ ನೀಡುವ ಜಿಎಸ್ ಟಿ ಪರಿಹಾರವನ್ನು ವಿಸ್ತರಿಸಲಿದೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದರು.

ಕೋವಿಡ್ -19 ಸಾಂಕ್ರಾಮಿಕದ ನಂತರ ರಾಜ್ಯದ ತೆರಿಗೆ ಆದಾಯ ಚೇತರಿಸಿಕೊಂಡಿಲ್ಲ ಮತ್ತು ಬೆಳವಣಿಗೆಯೂ ಕುಂಠಿತವಾಗಿದೆ. ಈ ಆಧಾರದ ಮೇಲೆ ಜಿಎಸ್‌ಟಿ ಪರಿಹಾರ ವಿಸ್ತರಣೆಯನ್ನು ಕೋರಿದ ರಾಜ್ಯಗಳಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.

ಜಿ ಎಸ್ ಟಿ ತೆರಿಗೆ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಗ್ರೂಪ್ ಆಫ್ ಮಿನಿಸ್ಟರ್ ಸಭೆ ಈಗಾಗಲೇ ೩ ಬಾರಿ ನಡೆದಿದೆ. ಈ ಕುರಿತು ಮಧ್ಯಂತರ ವರದಿಯನ್ನು ಸಲ್ಲಿಸುವ ನಿರೀಕ್ಷೆ ಇದೆ. ಎರಡು ದಿನಗಳ ಸಭೆಯ ನಂತರ ಜೂನ್ 30 ರಂದು ಸಿಎಂ ಬೊಮ್ಮಾಯಿ ಅವರು ನಗರಕ್ಕೆ ಹಿಂತಿರುಗಲಿದ್ದಾರೆ.

SCROLL FOR NEXT