ಚಾಮರಾಜಪೇಟೆ ಈದ್ಗಾ ಮೈದಾನ 
ರಾಜ್ಯ

ಮುಸ್ಲಿಂ ಸಂಸ್ಥೆಗೂ ಈದ್ಗಾ ಮೈದಾನಕ್ಕೂ ಸಂಬಂಧವಿಲ್ಲ, ಮೂಲ ಮಾಲೀಕರು ದಾಖಲೆಗಳಿಗಾಗಿ ಅರ್ಜಿ ಸಲ್ಲಿಸಬಹುದು: ಬಿಬಿಎಂಪಿ

ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ ಇದೀಗ ಬಹುದೊಡ್ಡ ತಿರುವು ಪಡೆದಿದ್ದು, ಮಾಲೀಕತ್ವ ತನ್ನದೇ ಎಂದು ಹೇಳಿಕೊಂಡಿದ್ದ ಸೆಂಟ್ರಲ್ ಮುಸ್ಲಿಂ ಅಸೋಸಿಯೇಷನ್ ಗೂ ವಿವಾದಿತ ಜಾಗಕ್ಕೂ ಯಾವುದೇ ಸಂಬಂಧವಿಲ್ಲ.. ಮೂಲ ದಾಖಲೆಗಳಿಗಾಗಿ ಮಾಲೀಕರು ಅರ್ಜಿ ಸಲ್ಲಿಸಬಹುದು ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸ್ಪಷ್ಟನೆ ನೀಡಿದೆ.

ಬೆಂಗಳೂರು: ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ ಇದೀಗ ಬಹುದೊಡ್ಡ ತಿರುವು ಪಡೆದಿದ್ದು, ಮಾಲೀಕತ್ವ ತನ್ನದೇ ಎಂದು ಹೇಳಿಕೊಂಡಿದ್ದ ಸೆಂಟ್ರಲ್ ಮುಸ್ಲಿಂ ಅಸೋಸಿಯೇಷನ್ ಗೂ ವಿವಾದಿತ ಜಾಗಕ್ಕೂ ಯಾವುದೇ ಸಂಬಂಧವಿಲ್ಲ.. ಮೂಲ ದಾಖಲೆಗಳಿಗಾಗಿ ಮಾಲೀಕರು ಅರ್ಜಿ ಸಲ್ಲಿಸಬಹುದು ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸ್ಪಷ್ಟನೆ ನೀಡಿದೆ.

ಈ ಕುರಿತು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾಹಿತಿ ನೀಡಿದ್ದು, ಈದ್ಗಾ ಮೈದಾನದ ಕುರಿತು ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಸೆಂಟ್ರಲ್ ಮುಸ್ಲಿಂ ಅಸೋಸಿಯೇಷನ್ ​​(ಸಿಎಂಎ) ಭೂಮಿಗೆ ಯಾವುದೇ ರೀತಿಯಲ್ಲಿ ಸಂಬಂಧ ಹೊಂದಿಲ್ಲ.. ದಾಖಲೆಗಳು ಇದ್ದರೆ ಮೂಲ ಮಾಲೀಕರು ಅರ್ಜಿ ಸಲ್ಲಿಸಬಹುದು ಎಂದು ಹೇಳಿದರು. 

ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಗಿರಿನಾಥ್, ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಮೈದಾನದಲ್ಲಿ ನಮಾಜ್ ಮತ್ತು ಮಕ್ಕಳಿಗೆ ಆಟವಾಡಲು ಮಾತ್ರ ಅನುಮತಿ ನೀಡಲಾಗಿದೆ ಎಂದರು. ಈ ಮೈದಾನ ಬಿಬಿಎಂಪಿ ಆಸ್ತಿಗೆ ಸೇರಿದ್ದಲ್ಲ ಎಂಬ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ ಅವರು, ‘ಖಾತಾ’ ಮಾಡಿಕೊಡಲು ದಾಖಲೆಗಳನ್ನು ನೀಡುವಂತೆ ವಕ್ಫ್ ಮಂಡಳಿಗೆ ಸೂಚಿಸಿದ್ದನ್ನು ಮಾತ್ರ ಒತ್ತಿ ಹೇಳಿದರು.

1965 ರಲ್ಲಿ, ವಕ್ಫ್ ಬೋರ್ಡ್ ಗೆಜೆಟ್ ನೋಟಿಫಿಕೇಶನ್ 2.5 ಎಕರೆ ಭೂಮಿ ಸುನ್ನಿ ಬೋರ್ಡ್‌ಗೆ ಸೇರಿದೆ ಎಂದು ಹೇಳಿತ್ತು, ಆದರೆ 1965 ರಿಂದ 2022 ರವರೆಗೆ ಮಂಡಳಿಯು ಭೂಮಿಯ ಮೇಲಿನ ಹಕ್ಕು ಪಡೆಯಲು ಮುಂದೆ ಬಂದಿಲ್ಲ. 1974ರಲ್ಲಿಯೂ ಕಂದಾಯ ಇಲಾಖೆ ಸಮೀಕ್ಷೆ ವೇಳೆ ಬೋರ್ಡ್ ಉಪಸ್ಥಿತಿ ಕಾಣಿಸಿರಲಿಲ್ಲ. ಈಗ ಸಂಪೂರ್ಣ ಮಾಲೀಕತ್ವವನ್ನು ನಿರ್ಧರಿಸುವುದು ಸರ್ಕಾರಕ್ಕೆ ಬಿಟ್ಟದ್ದು, ಬಿಬಿಎಂಪಿಗೆ ಖಾತಾ ನೀಡುವ ಅಧಿಕಾರ ಮಾತ್ರ ಇದೆ ಎಂದು ಅವರು ಗಿರಿನಾಥ್ ಹೇಳಿದರು.

ಈ ಹಿಂದೆ ಸೆಂಟ್ರಲ್ ಮುಸ್ಲಿಂ ಅಸೋಸಿಯೇಷನ್ ​​ವಕ್ಫ್ ಮಂಡಳಿಯನ್ನು ಪ್ರತಿನಿಧಿಸುವ ದಾಖಲೆಗಳನ್ನು ಕಳುಹಿಸಿತ್ತು ಮತ್ತು ಭೂಮಿ ವಕ್ಫ್ ಮಂಡಳಿಯ ಸಂಪೂರ್ಣ ಆಸ್ತಿ ಎಂದು ಹೇಳಿತ್ತು. ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್ ಮತ್ತು ಬಿಬಿಎಂಪಿ ಮುಖ್ಯ ಆಯುಕ್ತರು ಪರಸ್ಪರ ಒಪ್ಪಂದ ಹೊಂದಿದ್ದಾರೆ ಎಂಬ ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಆರೋಪಕ್ಕೆ ಸಂಬಂಧಿಸಿದಂತೆ, ನಾವು ಯಾರೊಂದಿಗೂ ಯಾವುದೇ ಒಪ್ಪಂದ ಮಾಡಿಕೊಂಡಿಲ್ಲ ಮತ್ತು ಯಾರೂ ಆಧಾರರಹಿತ ಆರೋಪ ಮಾಡಬಾರದು ಎಂದು ತುಷಾರ್ ಗಿರಿನಾಥ್ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT