ರಾಜ್ಯ

ಸಚಿವ ಶ್ರೀರಾಮುಲು ಸ್ಥಳದಲ್ಲೇ ಪ್ರತಿಭಟನೆ ಪರಿಣಾಮ 3 ದಿನದಲ್ಲೇ ಕಾಲುವೆ ದುರಸ್ತಿ ಕಾಮಗಾರಿ ಪೂರ್ಣ!

Manjula VN

ಬಳ್ಳಾರಿ: ಸಚಿವ ಶ್ರೀರಾಮುಲು ಪ್ರತಿಭಟನೆ ಬೆನ್ನಲ್ಲೇ ಬಳ್ಳಾರಿ ಸಮೀಪದ ವೇದಾವತಿ ನದಿಯಲ್ಲಿ ಕಳೆದ ಕೆಲವು ತಿಂಗಳಿಂದ ಬಾಕಿ ಉಳಿದಿದ್ದ ಕಾಲುವೆ ದುರಸ್ತಿ ಕಾಮಗಾರಿ ಮೂರು ದಿನದಲ್ಲಿ ಪೂರ್ಣಗೊಂಡಿದೆ.

ಕಳೆದ ಕೆಲ ತಿಂಗಳಿಂದ ವೇದಾವತಿ ಅಣೆಕಟ್ಟೆಯಿಂದ ನೀರು ಬಿಡುವಂತೆ ಒತ್ತಾಯಿಸುತ್ತಿದ್ದ ರೈತರ ರಕ್ಷಣೆಗೆ ಸಾರಿಗೆ ಸಚಿವ ಶ್ರೀರಾಮುಲು ಮುಂದಾಗಿದ್ದರು. ದುರಸ್ಥಿ ಕಾಮಗಾರಿ ಪೂರ್ಣಗೊಳ್ಳದ ಹೊರತು ಸ್ಥಳದಿಂದ ಹೋಗುವುದಿಲ್ಲ ಎಂದು ಹೇಳಿ ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದರು.

ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ನಾಗೇಂದ್ರ ಕೂಡ ಸಚಿವರ ಜತೆಗೂಡಿದ್ದರು. ರಾಜಕೀಯ ಪ್ರಭಾವ ಹಿನ್ನೆಲೆಯಲ್ಲಿ ಕಾಮಗಾರಿ ವೇಗ ಪಡೆದುಕೊಂಡಿತ್ತು. ಶ್ರೀರಾಮುಲು ಅವರು ಎರಡು ರಾತ್ರಿ ಕಟ್ಟಡ ನಿರ್ಮಾಣ ಸ್ಥಳದಲ್ಲಿಯೇ ಮಲಗಿದ್ದರು. ಹಗಲಿನಲ್ಲಿ ಕಾರ್ಮಿಕರೊಂದಿಗೆ ಮಾತುಕತೆ ನಡೆಸಿದ್ದರು.

ಇದೀಗ ರೈತರ ಭೂಮಿಗೆ ನೀರು ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಇಬ್ಬರೂ ನಾಯಕರು ಪ್ರತಿಭಟನೆ ಕೈಬಿಟ್ಟಿದ್ದಾರೆ.

"ನಾನು ಕಂಪನಿಯ ಮೇಲೆ ಒತ್ತಡ ಹೇರಲಿಲ್ಲ, ಆದರೆ ಕಾರ್ಮಿಕರನ್ನು ಪ್ರೇರೇಪಿಸಿದೆ" ಎಂದು ಶ್ರೀರಾಮುಲು ಹೇಳಿದ್ದಾರೆ.

SCROLL FOR NEXT