ಬೃಹತ್ ಸಮಾವೇಶದಲ್ಲಿ ಮಾತನಾಡುತ್ತಿರುವ ಲಕ್ಷ್ಮೀ ಹೆಬ್ಬಾಳ್ಕರ್. 
ರಾಜ್ಯ

2ಎ ಮೀಸಲಾತಿಗೆ ಆಗ್ರಹ: 'ಚಲೋ ಬೆಂಗಳೂರು'ಗೆ ಸಿದ್ಧರಾಗುವಂತೆ ಜಯ ಮೃತ್ಯುಂಜಯ ಶ್ರೀಗಳು ಕರೆ

ಪಂಚಮಸಾಲಿ ಸಮಾಜಕ್ಕೆ 2ಎ ಪ್ರವರ್ಗದಡಿ ಮೀಸಲಾತಿ ನೀಡುವಂತೆ ಆಗ್ರಹಿಸಿ ಡಿ.12ರಂದು ನಡೆಯಲಿರುವ ‘ಚಲೋ ಬೆಂಗಳೂರು’ ರ್ಯಾಲಿಯಲ್ಲಿ ಎಲ್ಲರೂ ಪೂರ್ಣ ಪ್ರಮಾಣದಲ್ಲಿ ಭಾಗವಹಿಸಲು ಸಜ್ಜಾಗಬೇಕಾದ ಸಮಯ ಬಂದಿದೆ ಎಂದು ಕೂಡಲಸಂಗಮದ ಬಸವ ಜಯ ಮೃತ್ಯುಂಜಯ ಸ್ವಾಮಿ ಹೇಳಿದ್ದಾರೆ.

ಗೋಕಾಕ: ಪಂಚಮಸಾಲಿ ಸಮಾಜಕ್ಕೆ 2ಎ ಪ್ರವರ್ಗದಡಿ ಮೀಸಲಾತಿ ನೀಡುವಂತೆ ಆಗ್ರಹಿಸಿ ಡಿ.12ರಂದು ನಡೆಯಲಿರುವ ‘ಚಲೋ ಬೆಂಗಳೂರು’ ರ್ಯಾಲಿಯಲ್ಲಿ ಎಲ್ಲರೂ ಪೂರ್ಣ ಪ್ರಮಾಣದಲ್ಲಿ ಭಾಗವಹಿಸಲು ಸಜ್ಜಾಗಬೇಕಾದ ಸಮಯ ಬಂದಿದೆ ಎಂದು ಕೂಡಲಸಂಗಮದ ಬಸವ ಜಯ ಮೃತ್ಯುಂಜಯ ಸ್ವಾಮಿ ಹೇಳಿದ್ದಾರೆ.

ಭಾನುವಾರ ಸಂಜೆ ಗೋಕಾಕ ಪೇಟೆಯಲ್ಲಿ 10 ಸಾವಿರಕ್ಕೂ ಹೆಚ್ಚು ಜನ ಸೇರಿದ್ದ ಬೃಹತ್ ಸಮಾವೇಶದಲ್ಲಿ ಶ್ರೀಗಳು ಮಾತನಾಡಿದರು. ''ಸಮುದಾಯದ ಬೇಡಿಕೆಯ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ಸರಕಾರ ಈ ಹಿಂದೆ ಭರವಸೆ ನೀಡಿತ್ತು, ಅದು ಈಡೇರಲಿಲ್ಲ. ಈಗ ಬೆಂಗಳೂರಿನಲ್ಲಿ 25 ಲಕ್ಷಕ್ಕೂ ಹೆಚ್ಚು ಜನ ನಮ್ಮ ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ಹೇಳಿದರು.

ಇದೇ ವೇಳೆ ಇತ್ತೀಚೆಗೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರ ವಾಹನದ ಮೇಲೆ ನಡೆದ ದಾಳಿಯನ್ನು ಖಂಡಿಸಿದರು.

ಬೆಳಗಾವಿ ಗ್ರಾಮಾಂತರ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ, ನಾವು ಯಾರನ್ನೂ ವಿರೋಧಿಸಲು ಬಂದಿಲ್ಲ. 2ಎ ಪ್ರವರ್ಗದಡಿ ಮೀಸಲಾತಿ ಕಲ್ಪಿಸುವ ಮೂಲಕ ನಮ್ಮ ಬೇಡಿಕೆಯನ್ನು ಈಡೇರಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡುತ್ತಿದ್ದೇವೆ. ಹಾಗೆ ಮಾಡಿದರೆ ಪಂಚಮಸಾಲಿಗಳ ಪ್ರತಿಯೊಂದು ಮನೆಯಲ್ಲೂ ಬೊಮ್ಮಾಯಿಯವರ ಫೋಟೋ ಇರಲಿದೆ ಎಂದು ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಆಂಧ್ರ ಪ್ರದೇಶ: ONGC ತೈಲ ಬಾವಿಯಲ್ಲಿ ಅನಿಲ ಸೋರಿಕೆ; ಮುಗಿಲೆತ್ತರಕ್ಕೆ ಚಿಮ್ಮಿದ ಬೆಂಕಿ, ಗ್ರಾಮಸ್ಥರ ಸ್ಥಳಾಂತರ!

ನಾಳೆ ವಿಶಿಷ್ಠ ದಾಖಲೆ ಬರೆಯಲಿದ್ದಾರೆ ಸಿದ್ದರಾಮಯ್ಯ; ಈ ಬಗ್ಗೆ ಸ್ವತಃ ಸಿಎಂ ಹೇಳಿದ್ದೇನು?

Video: ಚಿತ್ರಮಂದಿರದ ಮಹಿಳಾ ಟಾಯ್ಲೆಟ್ ನಲ್ಲಿ ಸೀಕ್ರೆಟ್ ಕ್ಯಾಮೆರಾ, ವಿಡಿಯೋ ಚಿತ್ರೀಕರಿಸುತ್ತಿದ್ದ ಕಿರಾತಕನಿಗೆ ಬಿತ್ತು ಗೂಸಾ! FIR ದಾಖಲು

ಜುನಾಗಢ: ಬಾಲಕನನ್ನು ಕೊಂದ ನರ ಭಕ್ಷಕ ಸಿಂಹ! ಕಾರ್ಯಾಚರಣೆ ವೇಳೆ ಆಕಸ್ಮಿಕವಾಗಿ ಹಾರಿದ ಗುಂಡು, ಅರಣ್ಯಾಧಿಕಾರಿ ಸಾವು!

'ನನ್ ಗಾಡಿ ನಂಗ್ ಬೇಕು.. ಕೊಡ್ತೀರೋ ಇಲ್ವೋ..': ಹಾವು ತೋರಿಸಿ ಟ್ರಾಫಿಕ್ ಪೊಲೀಸರಿಗೆ ಆಟೋ ಚಾಲಕ ಬೆದರಿಕೆ, Video Viral

SCROLL FOR NEXT