ರಾಜ್ಯ

ಟ್ರಾಫಿಕ್ ಸಂಕಷ್ಟ: ವರ್ತೂರು-ಬಳಗೆರೆ ರಸ್ತೆ ಅಗಲೀಕರಣಕ್ಕೆ ಪಾಲಿಕೆ ಅಸ್ತು, 12 ಮೀಟರ್‌ನಿಂದ 18 ಮೀಟರ್‌ ಗೆ ವಿಸ್ತರಣೆ

Ramyashree GN

ಬೆಂಗಳೂರು: ವರ್ತೂರು-ಬಳಗೆರೆ ಮುಖ್ಯರಸ್ತೆಯಲ್ಲಿ ಸಂಚಾರ ದಟ್ಟಣೆಯಿಂದಾಗಿ ಎರಡು ಗಂಟೆಗೂ ಹೆಚ್ಚು ಕಾಲ ಶಾಲಾ ಮಕ್ಕಳು ಸಿಲುಕಿಕೊಂಡಿದ್ದ ಬಗ್ಗೆ ವರದಿಗಳು ಮತ್ತು ವಿಡಿಯೋಗಳು ವೈರಸ್ ಆದ ಕೆಲವೇ ದಿನಗಳಲ್ಲಿ, ಈಗಿರುವ 12 ಮೀಟರ್‌ನಿಂದ 18 ಮೀಟರ್‌ಗೆ ರಸ್ತೆ ವಿಸ್ತರಿಸುವುದಾಗಿ ಪಾಲಿಕೆ ಹೇಳಿದೆ.

ಈ ರಸ್ತೆಯಲ್ಲಿನ ಟ್ರಾಫಿಕ್ ಸರಾಗಗೊಳಿಸುವಂತೆ ಪೋಷಕರು ಮತ್ತು ಮಕ್ಕಳು ಬಳಗೆರೆ-ವರ್ತೂರು ರಸ್ತೆಯಲ್ಲಿ ವಾಹನ ಸಂಚಾರ ತಡೆದು ಮೇಣದಬತ್ತಿ ಬೆಳಗಿಸಿ ಪ್ರತಿಭಟನೆ ನಡೆಸಿದ್ದರು. ಬಯೋಕಾನ್ ಸಂಸ್ಥೆಯ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಕೂಡ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ.

ಬಿಬಿಎಂಪಿ ರಸ್ತೆ ಮೂಲಸೌಕರ್ಯ ವಿಭಾಗದ ಕಾರ್ಯಕಾರಿ ಎಂಜಿನಿಯರ್ ಜಯಶಂಕರ್ ರೆಡ್ಡಿ ಮಾತನಾಡಿ, ಸದ್ಯ ಈ ರಸ್ತೆಯು 9 ಮೀನಿಂದ 12 ಮೀ ಅಗಲವಿದ್ದು, ವರ್ತೂರು ಗ್ರಾಮದ ವ್ಯಾಪ್ತಿಯಲ್ಲಿ ಈ ರಸ್ತೆಯು 6 ಮೀಗೆ ಕುಗ್ಗಿದೆ. ಈ ಮಾರ್ಗದುದ್ದಕ್ಕೂ ರಸ್ತೆಯನ್ನು 'ಸಮಗ್ರ ಅಭಿವೃದ್ಧಿ ಯೋಜನೆ' ಅಡಿಯಲ್ಲಿ ವಿಸ್ತರಿಸಲಾಗುವುದು. ಇದರ ಮೌಲ್ಯ 18 ಕೋಟಿ ರೂಪಾಯಿ ಆಗಿದೆ ಮತ್ತು 2019ರ ಕೊನೆಯಲ್ಲಿ ಈ ಯೋಜನೆಯನ್ನು ಪ್ರಾರಂಭಿಸಲಾಯಿತು. ಈವರೆಗೆ ಬಿಬಿಎಂಪಿ ರಸ್ತೆ ಮೂಲಸೌಕರ್ಯ ವಿಭಾಗವು ಶೇ 60ರಷ್ಟು ಕಾಮಗಾರಿ ಪೂರ್ಣಗೊಳಿಸಿದ್ದು, ಯೋಜನೆ ಪೂರ್ಣಗೊಳ್ಳಲು ಇನ್ನೂ ಆರು ತಿಂಗಳು ಬೇಕಾಗಬಹುದು’ ಎಂದು ಹೇಳುತ್ತಾರೆ.

'ಕಾಡುಬೀಸನಹಳ್ಳಿಯಿಂದ ಪಣತ್ತೂರುವರೆಗಿನ ರಸ್ತೆ ವಿಸ್ತರಣೆ ಕಾರ್ಯ ಪೂರ್ಣಗೊಂಡಿದ್ದು, ಮಾಲೀಕರು ವರ್ಗಾವಣೆ ಮಾಡಬಹುದಾದ ಅಭಿವೃದ್ಧಿ ಹಕ್ಕುಗಳ (ಟಿಡಿಆರ್) ಬದಲಿಗೆ ಆರ್ಥಿಕ ಪರಿಹಾರವನ್ನು ಕೇಳಿರುವುದರಿಂದ ಮುನ್ಸಿಪಲ್ ಈಗ ಸಮಸ್ಯೆಗಳನ್ನು ಎದುರಿಸುತ್ತಿದೆ' ಎಂದು ರೆಡ್ಡಿ ಹೇಳಿದರು.

ಕೆಲವು ಮಾಲೀಕರು ಟಿಡಿಆರ್‌ಗೆ ಒಪ್ಪಿಗೆ ನೀಡಿದ್ದಾರೆ. ಆದರೆ, ಅದರ ಬಗ್ಗೆ ಹೊಸ ನೀತಿಯನ್ನು ಜಾರಿಗೆ ತರಲು ಸರ್ಕಾರ ವಿಫಲವಾಗಿದೆ. ಅಲ್ಲದೆ, ಟಿಡಿಆರ್ ಪ್ರಮಾಣಪತ್ರಗಳನ್ನು ವಿತರಿಸಲು ಸಮಯ ತೆಗೆದುಕೊಳ್ಳುತ್ತದೆ ಎಂದು ಪಾಲಿಕೆ ಅಧಿಕಾರಿಗಳು ಹೇಳುತ್ತಾರೆ. ವರ್ತೂರಿನ ಕ್ವಾರ್ಟರ್ಸ್‌ನ ಆರ್ಥಿಕವಾಗಿ ದುರ್ಬಲ ವರ್ಗದ (ಇಡಬ್ಲ್ಯುಎಸ್) ನಿವಾಸಿಗಳಿಂದ ಪಾಲಿಕೆಯು ಸಮಸ್ಯೆ ಎದುರಿಸುತ್ತಿದೆ.

'ಅಲ್ಲಿನ ನಿವಾಸಿಗಳನ್ನು ಸ್ಥಳಾಂತರಿಸುವ ಪ್ರಕ್ರಿಯೆ ನಡೆಯುತ್ತಿದೆ. ಕಾಮಗಾರಿ ಪೂರ್ಣಗೊಂಡರೆ ಸಂಚಾರ ವ್ಯವಸ್ಥೆ ಸುಧಾರಿಸಲಿದೆ' ಎನ್ನುತ್ತಾರೆ ಅಧಿಕಾರಿಗಳು.

ಬಿಬಿಎಂಪಿ ದಾಖಲೆ ಪ್ರಕಾರ, 5.9 ಕಿಮೀ ರಸ್ತೆ ವಿಸ್ತರಣೆಯು ಎರಡು ಮುಖ್ಯ ಕ್ಯಾರೇಜ್‌ವೇಗಳು, ಎರಡೂ ಬದಿಗಳಲ್ಲಿ ಚರಂಡಿಗಳು ಮತ್ತು ಫುಟ್‌ಪಾತ್‌ಗಳು, ಬೀದಿದೀಪಗಳು ಮತ್ತು ಪಣತ್ತೂರು ಬಳಿ ಒಂದು ರೈಲ್ವೆ ಕೆಳಸೇತುವೆಯನ್ನು ಹೊಂದಿರುತ್ತದೆ. ಒಟ್ಟಾರೆಯಾಗಿ 143 ಖಾಸಿಗಿ ಆಸ್ತಿಗಳು, 11 ಸರ್ಕಾರಿ ಆಸ್ತಿಗಳು ಮತ್ತು ಮೂರು ಕಂದಾಯ ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಬೇಕಿದೆ.

ಖಾಸಗಿ ಆಸ್ತಿ ಮಾಲೀಕರಿಗೆ ವಿತ್ತೀಯ ಪರಿಹಾರದ ಮೂಲಕ ಇತ್ಯರ್ಥಪಡಿಸಿದ್ದೇ ಆದರೆ, ಪಣತ್ತೂರು ಆರ್‌ಯುಬಿ ನಿಂದ ಈಸ್ಟ್ ಎಂಡ್ ಪಾಯಿಂಟ್ ಮತ್ತು ವರ್ತೂರು-ಗುಂಜೂರು ರಸ್ತೆ ಮೂಲಕ ಪ್ರಾರಂಭವಾಗಲಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸುತ್ತಾರೆ.

SCROLL FOR NEXT