ಕರ್ನಾಟಕ ಮಾಧ್ಯಮ ಅಕಾಡೆಮಿಯು ‘ರಾಷ್ಟ್ರ ನಿರ್ಮಾಣದಲ್ಲಿ ಮಾಧ್ಯಮದ ಪಾತ್ರ’ ಎಂಬ ವಿಷಯದೊಂದಿಗೆ ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಪತ್ರಿಕಾ ದಿನಾಚರಣೆಯಲ್ಲಿ ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ ಮತ್ತು ಖ್ಯಾತ ನಟ ಅನಂತನಾಗ್ ಪಾಲ್ಗೊಂಡಿದ್ದರು. 
ರಾಜ್ಯ

ನಾನು ಮೋದಿ ಭಕ್ತ, ಬಹಿರಂಗವಾಗಿ ಹೇಳಿಕೊಳ್ಳಲು ನನಗೆ ಯಾವುದೇ ಸಂಕೋಚವಿಲ್ಲ: ಅನಂತ್ ನಾಗ್

ಪ್ರಧಾನಿ ನರೇಂದ್ರ ಮೋದಿ ಎಂಟೂವರೆ ವರ್ಷಗಳಲ್ಲಿ ಒಂದು ದಿನವೂ ರಜೆ ತಗೆದುಕೊಳ್ಳದೇ ಕೆಲಸ ಮಾಡುತ್ತಿದ್ದಾರೆ. ಅವರ ಕೆಲಸಗಳಿಗೆ ನಾನು ಮನಸೋತಿದ್ದೇನೆ. ಹಾಗಾಗಿ ನಾನು ಮೋದಿ ಭಕ್ತ ಎಂದು ಹೇಳಿಕೊಳ್ಳಲು ಯಾವುದೇ ಸಂಕೋಚವಿಲ್ಲ’

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಎಂಟೂವರೆ ವರ್ಷಗಳಲ್ಲಿ ಒಂದು ದಿನವೂ ರಜೆ ತಗೆದುಕೊಳ್ಳದೇ ಕೆಲಸ ಮಾಡುತ್ತಿದ್ದಾರೆ. ಅವರ ಕೆಲಸಗಳಿಗೆ ನಾನು ಮನಸೋತಿದ್ದೇನೆ. ಹಾಗಾಗಿ ನಾನು ಮೋದಿ ಭಕ್ತ ಎಂದು ಹೇಳಿಕೊಳ್ಳಲು ಯಾವುದೇ ಸಂಕೋಚವಿಲ್ಲ’ ಎಂದು ನಟ ಅನಂತ್ ನಾಗ್ ಬಹಿರಂಗವಾಗಿ ಘೋಷಿಸಿದ್ದಾರೆ.

ಕರ್ನಾಟಕ ಮಾಧ್ಯಮ ಅಕಾಡೆಮಿ ಬೆಂಗಳೂರು ಇವರ ಆಶ್ರಯದಲ್ಲಿ ‘ರಾಷ್ಟ್ರೀಯ ಪತ್ರಿಕಾ ದಿನಾಚರಣೆ’ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪ್ರಧಾನಿ ಮೋದಿ ಅವರನ್ನು ಹಾಡಿ ಹೊಗಳಿದ್ದಾರೆ.

ಹದಿನಾಲ್ಕು ವರ್ಷ ಮುಖ್ಯಮಂತ್ರಿಯಾಗಿ, ಎಂಟೂವರೆ ವರ್ಷಗಳಿಂದ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಮಾಡಿರುವ ಕೆಲಸ ಕಾರ್ಯಗಳು ನನಗೆ ಇಷ್ಟ. ಪ್ರತಿನಿತ್ಯ ವೇಳಾಪಟ್ಟಿಯಂತೆ ಅವರು ಬದ್ಧತೆಯಿಂದ ಕೆಲಸ ಮಾಡುತ್ತಾರೆ. ಹೀಗಾಗಿ ಪ್ರಧಾನಿ ಮೋದಿ ಅವರ ಭಕ್ತ ಎಂದು ಹಿರಿಯ ನಟ ಅನಂತ್‌ ನಾಗ್‌ ಹೇಳಿದ್ದಾರೆ.

ರಾಷ್ಟ್ರದ ನಿರ್ಮಾಣದಲ್ಲಿ ಮಾಧ್ಯಮಗಳ ಪಾತ್ರ ಎಂಬ ವಿಚಾರ ಸಂಕಿರಣಕ್ಕೆ ಆಹ್ವಾನ ನೀಡಿದಾಗ ನಾನು ಯೋಚಿಸಿದೆ. ಇದು ಮೋದಿ ಸರ್ಕಾರ ಆರಂಭ ಮಾಡಿತೇ ಎಂಬ ಪ್ರಶ್ನೆ ಮೂಡಿತು. ನಂತರ ಈ ಪತ್ರಿಕಾ ದಿನಾಚರಣೆ ಮೊದಲಿನಿಂದಲೇ ಇತ್ತು ಎಂಬುದಾಗಿ ತಿಳಿದುಬಂತು ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮೋದಿ ರ‍್ಯಾಲಿಗೆ ಮುನ್ನ ಕೋಲ್ಕತ್ತಾದಲ್ಲಿ TMC, BJP ಕಾರ್ಯಕರ್ತರ ನಡುವೆ ಮಾರಾಮಾರಿ; ಪರಸ್ಪರ ಕಲ್ಲು ತೂರಾಟ

4,824 ಕೋಟಿ ಮೊತ್ತದ ಬಂಡವಾಳ ಹೂಡಿಕೆಗೆ ಸರ್ಕಾರ ಸಮ್ಮತಿ: ರಾಜ್ಯದಲ್ಲಿ 14,525 ಉದ್ಯೋಗ ಅವಕಾಶ ಸೃಷ್ಟಿ!

ಮಂಡ್ಯ: ವಿಸಿ ಫಾರಂನಲ್ಲಿ 14 ಕೋಟಿ ರೂ ವೆಚ್ಚದ ಒಳಾಂಗಣ ಕ್ರೀಡಾಂಗಣಕ್ಕೆ ಕೇಂದ್ರ ಸಚಿವ ಭೂಮಿಪೂಜೆ!

ಮಂಡಿಯೂರಿದ ಕೇಂದ್ರ: ಜೋಧಪುರ ಜೈಲಿನಿಂದ ಸೋನಮ್ ವಾಂಗ್ಚುಕ್ ಬಿಡುಗಡೆ

ಹೊಸ ನಟಿಯರನ್ನು ಆಮಿಷಕ್ಕೆ ಒಳಪಡಿಸಿ ವೇಶ್ಯಾವಾಟಿಕೆಗೆ ತಳ್ಳುತ್ತಾರೆ: ನಟಿ ತನುಶ್ರೀ ದತ್ತಾ

SCROLL FOR NEXT