ರಾಜ್ಯ

ಸಂಚಾರ ದಟ್ಟಣೆ ಸಮಸ್ಯೆ: ಹೆಬ್ಬಾಳ-ಕೆಂಪಾಪುರ ಜಂಕ್ಷನ್'ಗೆ ವಿಶೇಷ ಆಯುಕ್ತ ಭೇಟಿ, ಪರಿಶೀಲನೆ

Manjula VN

ಬೆಂಗಳೂರು: ಮಂಗಳವಾರ ಅಧಿಕಾರ ಸ್ವೀಕರಿಸಿದ ವಿಶೇಷ ಆಯುಕ್ತ (ಸಂಚಾರ) ಎಂ.ಎ.ಸಲೀಂ ಅವರು ಬುಧವಾರ ಜನನಿಬಿಡ ಪ್ರದೇಶವಾಗಿರುವ ಹೆಬ್ಬಾಳ ಮೇಲ್ಸೇತುವೆ ಮತ್ತು ಕೆಂಪಾಪುರ ಜಂಕ್ಷನ್‌ಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ಎಡಿಜಿಪಿ ಸಲೀಂ, ಡಿಸಿಪಿ (ಸಂಚಾರ-ಉತ್ತರ) ಸವಿತಾ ಎಸ್ ಮತ್ತು ಇತರ ಹಿರಿಯ ಅಧಿಕಾರಿಗಳೊಂದಿಗೆ ರಸ್ತೆಯಲ್ಲಿ ಸಂಚಾರ ದಟ್ಟಣೆಯನ್ನು ವೀಕ್ಷಿಸಿದರು. ಈ ವೇಳೆ ವಾಹನಗಳ ಸಾಂದ್ರತೆ ಮತ್ತು ಸಂಚಾರ ದಟ್ಟಣೆಯ ಕುರಿತು ಅಧಿಕಾರಿಗಳಿಂದ ವಿವರಗಳನ್ನು ಪಡೆದುಕೊಂಡರು.

ಜಂಕ್ಷನ್‌ಗಳಲ್ಲಿ ಕಾಯುವ ಸಮಯವನ್ನು ಕಡಿಮೆ ಮಾಡುವ ಅಗತ್ಯವಿದೆ ಎಂದು ಹೇಳಿದ ವಿಶೇಷ ಆಯುಕ್ತರು ಸಂಚಾರ ದಟ್ಟಣೆ ಕಡಿಮೆ ಮಾಡಲು ಪರಿಹಾರಗಳನ್ನು ಸೂಚಿಸುವಂತೆ ರಸ್ತೆ ಬಳಕೆದಾರರಿಗೆ ಮನವಿ ಮಾಡಿದರು. addlcptrafficbcp@gmail.comಗೆ ಪರಿಹಾರಗಳ ಕುರಿತು ತಿಳಿಸುವಂತೆ ಮನವಿ ಮಾಡಿಕೊಂಡರು.

ವಿಶೇಷ ಆಯುಕ್ತರು ಇನ್ನೂ ಒಂದೆರಡು ದಿನ ಜನನಿಬಿಡ ರಸ್ತೆಗಳು ಮತ್ತು ಜಂಕ್ಷನ್‌ಗಳಿಗೆ ಭೇಟಿ ನೀಡಲಿದ್ದು, ಸಂಚಾರ ದಟ್ಟಣೆಯನ್ನು ಪರಿಶೀಲನೆ ನಡೆಸಲಿದ್ದಾರೆಂದು ತಿಳಿದುಬಂದಿದೆ.

‘ಸಿಲಿಕಾನ್‌ ಸಿಟಿ’ಯಲ್ಲಿ ವಾಹನಗಳ ಸುಗಮ ಸಂಚಾರ ಹಾಗೂ ಸಂಚಾರ ನಿಯಮಗಳ ಜಾರಿಗೆ ಹೊಸ ಪ್ರಯೋಗಕ್ಕೆ ಮುಂದಾಗಿದ್ದ ಸರ್ಕಾರ, ವಿಶೇಷ ಕಮಿಷನರ್‌ ಹುದ್ದೆ ಸೃಷ್ಟಿಸಿತ್ತು. ಇದರಂತೆ ಹುದ್ದೆಗೆ ಎಡಿಜಿಪಿ ದರ್ಜೆಯ ಎಂ. ಅಬ್ದುಲ್‌ ಸಲೀಂ ಅವರನ್ನು ನೇಮಿಸಿದೆ.

SCROLL FOR NEXT