ಸಂಗ್ರಹ ಚಿತ್ರ 
ರಾಜ್ಯ

ರಾತ್ರೋರಾತ್ರಿ ರಸ್ತೆಗಳ ಅಗೆತ, ಸಂಚಾರ ದಟ್ಟಣೆ ಸಮಸ್ಯೆ: ಸುಳಿವಿಲ್ಲದ ಅಧಿಕಾರಿಗಳು ಟೀಕೆಗೆ ಗುರಿ!

ಕೆಆರ್ ಪುರಂನ ಅಯ್ಯಪ್ಪನಗರದ ಮುಖ್ಯರಸ್ತೆಯಲ್ಲಿ ಅಧಿಕಾರಿಗಳಿಗೆ ಯಾವುದೇ ಮುನ್ಸೂಚನೆ ನೀಡದೆ ಬುಧವಾರ ರಾತ್ರಿ ರಸ್ತೆಯನ್ನು ಅಗೆಯಲಾಗಿದ್ದು, ಇದರಿಂದಾಗಿ ಗುರುವಾರ ಬೆಳಿಗ್ಗೆ ಭಾರೀ ಸಂಚಾರ ದಟ್ಟಣೆ ಕಂಡುಬಂದಿತ್ತು.

ಬೆಂಗಳೂರು: ಕೆಆರ್ ಪುರಂನ ಅಯ್ಯಪ್ಪನಗರದ ಮುಖ್ಯರಸ್ತೆಯಲ್ಲಿ ಅಧಿಕಾರಿಗಳಿಗೆ ಯಾವುದೇ ಮುನ್ಸೂಚನೆ ನೀಡದೆ ಬುಧವಾರ ರಾತ್ರಿ ರಸ್ತೆಯನ್ನು ಅಗೆಯಲಾಗಿದ್ದು, ಇದರಿಂದಾಗಿ ಗುರುವಾರ ಬೆಳಿಗ್ಗೆ ಭಾರೀ ಸಂಚಾರ ದಟ್ಟಣೆ ಕಂಡುಬಂದಿತ್ತು.

ಸಂಚಾರ ದಟ್ಟಣೆ ಎದುರಾದ ಹಿನ್ನೆಲೆಯಲ್ಲಿ ಹಲವು ಪ್ರಶ್ನೆಗಳು ಎದುರಾಗಿತ್ತು. ರಾತ್ರಿ ವೇಳೆ ರಸ್ತೆಯನ್ನು ಅಗೆದಿದ್ದು ಯಾರು ಎಂಬುದರ ಬಗ್ಗೆ ಸಂಚಾರ ಪೊಲೀಸರು ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳ ಬಳಿ ಉತ್ತರವಿರಲಿಲ್ಲದ. ಇದರಿಂದ ಗೊಂದಲಕ್ಕೆ ಸಿಲುಕಿದ್ದರು.

ಕೆಆರ್ ಪುರಂ ಸಂಚಾರ ವಿಭಾಗದ ಸಬ್ ಇನ್ಸ್‌ಪೆಕ್ಟರ್ ಸೈಯದ್ ನಿಜಾಮುದ್ದೀನ್ ಮಾತನಾಡಿ, ಬುಧವಾರ ರಾತ್ರಿ ಎಸಿಪಿ ಆ ರಸ್ತೆಯಲ್ಲಿ ಸಂಚರಿಸಿದಾಗ ರಸ್ತೆಯ ಸ್ಥಿತಿ ಸಹಜವಾಗಿತ್ತು. ಬೆಳಿಗ್ಗೆ 7:30 ರ ಸುಮಾರಿಗೆ, ಮಳೆಯಿಂದಾಗಿ ರಸ್ತೆಯು ಕೆಸರುಮಯವಾಗಿದ್ದು, ಇದರಿಂದ ಸಂಚಾರ ದಟ್ಟಣೆ ಎದುರಾಗಿತ್ತು. ಈ ವೇಳೆ ಸಾರ್ವಜನಿಕರಿಂದ ಹಲವು ಕರೆಗಳು ಬಂದವು ಎಂದು ಹೇಳಿದರು.

“ನಾವು ಅನುಮತಿ ನೀಡಿಲ್ಲ. ಇದು ಅಕ್ರಮ. ಬೆಳಗ್ಗೆ 11 ಗಂಟೆವರೆಗೂ ಸಂಚಾರ ಅಸ್ತವ್ಯಸ್ತವಾಗಿತ್ತು. ಬಳಿಕ ನಾನು, ನನ್ನ ಸಿಬ್ಬಂದಿ ಮತ್ತು ಸ್ವಯಂಸೇವಕರು ಸೇರಿ ಅಗೆದ ರಸ್ತೆಯನ್ನು ಮುಚ್ಚಿದೆವು. ಈ ಸಂಬಂಧ ಯಾರಾದರೂ ಬಂದು ದೂರು ನೀಡಿದರೆ ಕ್ರಮ ಕೈಗೊಳ್ಳುತ್ತೇವೆ’ ತಿಳಿಸಿದರು.

ಇನ್ನು ಅನುಮತಿ ನೀಡದಿರುವ ಬಗ್ಗೆ ಪೊಲೀಸರು ನೀಡಿದ ಹೇಳಿಕೆಯನ್ನೇ ಬಿಬಿಎಂಪಿ ವಲಯದ ಮುಖ್ಯ ಎಂಜಿನಿಯರ್ ಎನ್.ಲೋಕೇಶ್ ಅವರೂ ಕೂಡ ನೀಡಿದ್ದಾರೆ.

ಕೆಲವೊಮ್ಮೆ, ನೇರವಾಗಿ ಪಾಲಿಕೆ ಕೇಂದ್ರ ಕಚೇರಿಯಿಂದ ಅನುಮತಿಗಳನ್ನು ಕೇಳಲಾಗುತ್ತದೆ. ನಮಗೆ ಈ ಬಗ್ಗೆ ಮಾಹಿತಿ ನೀಡುವುದು ಕಡ್ಡಾಯವೂ ಆಗಿದೆ. ಮಾಹಿತಿ ನೀಡಿದರೆ ನಾವು ಸ್ಥಳದಲ್ಲಿ ಎಚ್ಚರಿಕೆಯ ಬೋರ್ಡ್ ಗಳನ್ನು ಹಾಕುತ್ತೇವೆ. ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಮಾತನಾಡಿ, ಪೊಲೀಸರು ಸ್ಥಳದ ಫೋಟೋ ತೆಗೆದು ದೂರು ದಾಖಲಿಸಬಹುದು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ.ಕೆ ಶಿವಕುಮಾರ್ ಸ್ಫೋಟಕ ಆರೋಪ; Video

ಶಾಸಕರ ಲೆಟರ್‌ಹೆಡ್'ನಲ್ಲೇ 'ಸತ್ತಿದ್ದಾರೆ' ಎಂದು ಅರ್ಜಿ: ಯತ್ನಾಳ್ ಸೇರಿ ಮೂವರ ವಿರುದ್ಧ FIR ದಾಖಲು

ಹೆದ್ದಾರಿ ದಾಟುತ್ತಿದ್ದ ಕುರಿ-ಮೇಕೆಗಳ ಮೇಲೆ ಹರಿದ ಟ್ರಕ್; 23 ಕುರಿ, 2 ಮೇಕೆ ಸಾವು, ಭೀಕರ ವಿಡಿಯೋ ಸಿಸಿಟಿವಿಯಲ್ಲಿ ಸೆರೆ!

ಚಿಂತಾಮಣಿಯ Dictator, ನಿನ್ನ ವಿರುದ್ಧ ಸಮರ ನಿರಂತರ: ಎಂಸಿ ಸುಧಾಕರ್ ವಿರುದ್ಧ ಪ್ರದೀಪ್ ಈಶ್ವರ್ ಮತ್ತೆ ಕಿಡಿ

'Evil Dead': ನಟ ನಾನಾ ಪಾಟೇಕರ್ ಸಾವು, #MeToo ಆರೋಪ ಮಾಡಿದ್ದ ನಟಿ ತನುಶ್ರೀ ದತ್ತಾ ಹೇಳಿದ್ದೇನು? ವಿಚಿತ್ರ ಪೋಸ್ಟ್!