ರಾಜ್ಯ

3 ತಿಂಗಳಲ್ಲಿ ಎರಡು ಬಾರಿ ಒಂದೇ ಆನೆಯಿಂದ ರೈತನ ಮನೆ ಮೇಲೆ ದಾಳಿ!

Manjula VN

ಹಾಸನ: ಆನೆ ಮತ್ತು ಮಾನವ ಸಂಘರ್ಷ ದೂರಾಗಿಸಲು ರಾಜ್ಯ ಸರ್ಕಾರ ವಿಶೇಷ ಕಾರ್ಯಪಡೆ ರಚನೆ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಇದರ ನಡುವಲ್ಲೇ ಸಕಲೇಶಪುರದ ಕೆಸಗುಳಿ ಗ್ರಾಮದಲ್ಲಿ ರೈತನ ಮನೆಗೆ ಬುಧವಾರ ರಾತ್ರಿ ಆನೆಯೊಂದು ದಾಳಿ ನಡೆಸಿರುವುದು ವರದಿಯಾಗಿದೆ.

ರೈತರೊಬ್ಬರ ಮನೆಯನ್ನು ಗುರಿಯಾಗಿಸಿಕೊಂಡಿರುವ ಆನೆಯೊಂದು ಪದೇ ಪದೇ ದಾಳಿ ನಡೆಸುತ್ತಿದೆ. ರೈತನ ಮನೆ ಮೇಲೆ ಪ್ರತೀ 3 ತಿಂಗಳಿನಲ್ಲಿ ಎರಡು ಬಾರಿ ಒಂದೇ ಆನೆ ದಾಳಿ ನಡೆಸುತ್ತಿರುವುದು ಕಂಡು ಬರುತ್ತಿದೆ.

ಆನೆಯನ್ನು ಅರಣ್ಯ ಇಲಾಖೆ ಹಿಡಿದು ಮೂರು ತಿಂಗಳ ಹಿಂದೆ ಸಕಲೇಶಪುರ ಅರಣ್ಯದಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ಸಾಗಿಸಲಾಗಿತ್ತು. ನೂರಾರು ಕಿ.ಮೀನಿಂದ ಪ್ರಯಾಣಿಸಿರುವ ಆನೆ ಮತ್ತೆ ತನ್ನ ವಾಸಸ್ಥಾನಕ್ಕೆ ಮರಳಿದ್ದು, ರೈತನ ಮನೆಯನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸುತ್ತಿದೆ.

ಗಿರೀಶ್ ಎಂಬುವವರಿಗೆ ಸೇರಿದ ಮನೆಯ ಕಿಟಕಿಗಳಿಗೆ ಆನೆ ಹಾನಿ ಮಾಡಿದ್ದು, ನಿವಾಸದ ಮುಂಭಾಗದ ಕಬ್ಬಿಣದ ಬೇಲಿಗಳಿಗೂ ಹಾನಿ ಮಾಡಿದೆ.

ಸ್ಥಳೀಯರು ಸಹಾಯಕ್ಕಾಗಿ ಕೂಗಿಕೊಂಡಾಗ ಆನೆ ಸ್ಥಳದಿಂದ ಓಡಿ ಹೋಗಿದೆ. ಈ ಬಗ್ಗೆ ಮಾಹಿತಿ ತಿಳಿಸಿದ ಅರಣ್ಯ ಸಿಬ್ಬಂದಿ ಗ್ರಾಮಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದರು. ಸದ್ಯ ಅಧಿಕಾರಿಗಳು ಆನೆಯ ಚಲನವಲನದ ಮೇಲೆ ಕಣ್ಗಾವಲಿಟ್ಟಿದ್ದು, ಶೀಘ್ರದಲ್ಲೇ ಆನೆಯನ್ನು ಹಿಡಿದು ಶಿಬಿರಕ್ಕೆ ಸ್ಥಳಾಂತರಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

SCROLL FOR NEXT