ರಾಜ್ಯ

ಎಂ.ಜಿ ರಸ್ತೆಯಲ್ಲಿ ಮಾಂಸ ಮಾರಾಟ ಹಾಗೂ ಜಾಹೀರಾತು ನಿಷೇಧಿಸಲು ಪೇಟಾ ಒತ್ತಾಯ

Shilpa D

ಬೆಂಗಳೂರು: ಬೆಂಗಳೂರು ಸೇರಿದಂತೆ ಭಾರತದ ಎಲ್ಲಾ ನಗರಗಳ ಮುನ್ಸಿಪಲ್ ಮುಖ್ಯಸ್ಥರಿಗೆ ಪೆಟಾ ಸಂಸ್ಥೆ ಪತ್ರ ಬರೆದಿದ್ದು, ಎಂಜಿ ರಸ್ತೆಯಲ್ಲಿ ಮಾಂಸದ ಮಾರಾಟ ಮತ್ತು ಜಾಹೀರಾತನ್ನು ನಿಷೇಧಿಸುವಂತೆ ಮನವಿ ಮಾಡಿದೆ.

ಮಹಾನ್ ನಾಯಕನ ಆಧ್ಯಾತ್ಮಿಕ ಮತ್ತು ರಾಜಕೀಯ ನಂಬಿಕೆಗಳನ್ನು ಕಾಪಾಡಬೇಕು ಎಂದಿದೆ. ಮಹಾತ್ಮಾ ಗಾಂಧೀಜಿ  ಹೆಸರನ್ನು ಹೊಂದಿರುವ ರಸ್ತೆಯಲ್ಲಿ ಮಾಂಸ ಮಾರಾಟ ಮಾಡುವುದು ಮತ್ತು ಜಾಹೀರಾತು ಹಾಕುವುದು ಅವರ ಅಹಿಂಸೆಯ ಬೋಧನೆಗಳಿಗೆ ತೋರುವ ಅಗೌರವವಾಗಿದೆ, ಅಹಿಂಸೆಯು ನಾವು ನಮ್ಮ ತಟ್ಟೆಯಲ್ಲಿ ಇಡುವುದರೊಂದಿಗೆ ಪ್ರಾರಂಭವಾಗುತ್ತದೆ ಎಂದು ವೆಗಾನ್ ಪ್ರಾಜೆಕ್ಟ್‌ಗಳ ಪೆಟಾ ಇಂಡಿಯಾದ ವ್ಯವಸ್ಥಾಪಕ ಡಾ ಕಿರಣ್ ಅಹುಜಾ ಹೇಳಿದ್ದಾರೆ.

ಈ ರಸ್ತೆಗಳಲ್ಲಿ ಶಾಂತಿಯುತ ಮತ್ತು ಮಾಂಸ-ಮುಕ್ತ ಊಟಕ್ಕೆ ಸ್ವರ್ಗವನ್ನಾಗಿ ಮಾಡಲು ಅವರು ಭಾರತದಾದ್ಯಂತ ನಗರಗಳನ್ನು ಪ್ರೋತ್ಸಾಹಿಸಿದರು.

ಗಾಂಧಿ ಜಯಂತಿ ಪ್ರಯುಕ್ತ ಅ.2ರಂದು ಭಾನುವಾರ ಬಿಬಿಎಂಪಿ ವ್ಯಾಪ್ತಿಯ ಕಸಾಯಿಖಾನೆ ಯಲ್ಲಿ ಪ್ರಾಣಿವಧೆ ಹಾಗೂ ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಪಶುಪಾಲನೆ ವಿಭಾಗದ ಜಂಟಿ ನಿರ್ದೇಶಕರು ತಿಳಿಸಿದ್ದಾರೆ. ಹಾಗೂ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ.

SCROLL FOR NEXT