ರಾಜ್ಯ

ಬೆಂಗಳೂರು: 112 ಪೊಲೀಸ್ ಸಹಾಯವಾಣಿಗೆ ಚಾಲನೆ 

Nagaraja AB

ಬೆಂಗಳೂರು: ಯಾವುದೇ ರೀತಿಯ ಅಪರಾಧ ಕೃತ್ಯಗಳು, ಕಾನೂನು ಬಾಹಿರ ಚಟುವಟಿಕೆಗಳು ನಡೆದರೆ ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ಪೊಲೀಸರು ಧಾವಿಸಿ ಕ್ರಮ ಕೈಗೊಳ್ಳುವ 112 ಪೊಲೀಸ್ ಸಹಾಯವಾಣಿಗೆ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಇಂದು ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಸಹಾಯವಾಣಿಗೆ ಕರೆ ಮಾಡಿ ಸಮಸ್ಯೆ ವಿವರಿಸಿದರೆ, ನಗರದ ಯಾವುದೇ ಭಾಗಕ್ಕೆ 15 ನಿಮಿಷದಲ್ಲಿ ಸಿಬ್ಬಂದಿ ಭೇಟಿ ನೀಡಿ, ಸಮಸ್ಯೆ ಬಗೆಹರಿಸುತ್ತಾರೆ. ತುರ್ತು ಸಮಯದಲ್ಲಿ 112ಕ್ಕೆ ಕರೆ ಮಾಡಿ ಎಂದು ಮನವಿ ಮಾಡಿದರು.

ಸಹಾಯವಾಣಿ 112 ಜನಪ್ರಿಯವಾಗುವಂತೆ ಮಾಡಲು ಹಲವು ರೀತಿಯ ಪ್ರಚಾರ ಚಟುವಟಿಕೆ ನಡೆಸಲಾಗುವುದು, ನಗರದಲ್ಲಿ ಸಂಚರಿಸುವ ಎಲ್ಲ ಬಿಎಂಟಿಸಿ  ಬಸ್ ಗಳಲ್ಲಿ 112 ಪೊಲೀಸ್ ಸಹಾಯವಾಣಿ ಬಗ್ಗೆ ಸ್ಟೀಕರ್ ಹಾಕಿ ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು.

ಡಿಜಿ ಐಜಿಪಿ ಪ್ರವೀಣ್ ಸೂದ್ ಮಾತನಾಡಿ, ನಗರ ಕಮಿಷನರ್ ಆಗಿದ್ದಾಗ ಸಹಾಯವಾಣಿ ಕಾರ್ಯಕ್ಷಮತೆ ಹೆಚ್ಚಿಸಲು ಹಲವು ಕ್ರಮ ತೆಗೆದುಕೊಂಡಿದ್ದಾಗಿ ತಿಳಿಸಿದರು. 
 

SCROLL FOR NEXT