ಪ್ರಾತಿನಿಧಿಕ ಚಿತ್ರ 
ರಾಜ್ಯ

ಕರ್ನಾಟಕದ ಎರಡು ಪ್ರಮುಖ ಹೆದ್ದಾರಿಗಳಲ್ಲಿ 2 ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಕಾರಿಡಾರ್ ಸ್ಥಾಪನೆ

ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ರಾಜ್ಯದ ಎರಡು ಪ್ರಮುಖ ಹೆದ್ದಾರಿಗಳಲ್ಲಿ ಎರಡು ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಹೇಳಿದೆ.

ಬೆಂಗಳೂರು: ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ರಾಜ್ಯದ ಎರಡು ಪ್ರಮುಖ ಹೆದ್ದಾರಿಗಳಲ್ಲಿ ಎರಡು ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಹೇಳಿದೆ.

ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಕಾರಿಡಾರ್‌ಗಳನ್ನು ಬೆಂಗಳೂರು-ಚೆನ್ನೈ ಹೆದ್ದಾರಿ ಮತ್ತು ಬೆಂಗಳೂರು-ಮೈಸೂರು-ಕೊಡಗು ಹೆದ್ದಾರಿಯಲ್ಲಿ ಸ್ಥಾಪಿಸಲಾಗಿದೆ. ಎರಡನೇ ಹಂತದ ಯೋಜನೆ ಇದಾಗಿದ್ದು, ಮೊದಲ ಹಂತದಲ್ಲಿ ಚೆನ್ನೈ–ತಿರುಚ್ಚಿ–ಮಧುರೆ ಹೆದ್ದಾರಿಯಲ್ಲಿ ಜಾರಿಯಾಗಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕ ಪಿ.ಎಸ್‌. ರವಿ, ದೂರದ ಪ್ರಯಾಣದ ಸಮಯದಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾಲೀಕರು ತಮ್ಮ ವಾಹನಗಳನ್ನು ಚಾರ್ಜ್ ಮಾಡಲು ಈ ಕಾರಿಡಾರ್‌ಗಳು ಸಹಾಯ ಮಾಡುತ್ತವೆ ಮತ್ತು ಚಾರ್ಜಿಂಗ್‌ಗೆ ತಗಲುವ ಸಮಯವನ್ನು ಕಡಿತಗೊಳಿಸುತ್ತದೆ ಎಂದರು.

ಮುಂದುವರಿದು, ಇವಿ ಫಾಸ್ಟ್ ಚಾರ್ಜಿಂಗ್ ಕಾರಿಡಾರ್ ಕಲ್ಪನೆಯಲ್ಲಿ ಪ್ರಯಾಣಿಕರು ತಮ್ಮ ಪ್ರಯಾಣದ ಸಮಯದಲ್ಲಿ ಯಾವುದೇ ತೊಂದರೆಯಿಲ್ಲದೆ ತಮ್ಮ ವಾಹನಗಳನ್ನು ಚಾರ್ಜ್ ಮಾಡಬಹುದು. ಹೆದ್ದಾರಿಯ ಎರಡೂ ಕಡೆಗಳಲ್ಲಿ, 100 ಕಿಲೋ ಮೀಟರ್ ಅಂತರದಲ್ಲಿ ಬಿಪಿಸಿಎಲ್ ನಡೆಸುತ್ತಿರುವ ಒಟ್ಟು 9 ಪೆಟ್ರೋಲ್‌ ಪಂಪ್‌ಗಳಲ್ಲಿ 25 ಕಿಲೋವಾಟ್‌ನ ವೇಗದ ಚಾರ್ಜಿಂಗ್‌ ವ್ಯವಸ್ಥೆ ಕಲ್ಪಿಸಲಾಗಿದೆ’ ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನನಗೇನೂ ಬೇಡ, ಯಾವುದಕ್ಕೂ ಆತುರ ಪಡಲ್ಲ' ಎಲ್ಲವನ್ನೂ ಹೈಕಮಾಂಡ್ ನಿರ್ಧರಿಸುತ್ತದೆ: ಡಿಕೆ ಶಿವಕುಮಾರ್

ನನ್ನಿಂದ ತಪ್ಪಾಗಿದೆ... ವಿಷಾದಿಸುತ್ತೇನೆ: ಮಾಜಿ ನ್ಯಾ. ಸಂತೋಷ್ ಹೆಗ್ಡೆ

ಭಾರತದ GDP ಅಚ್ಚರಿಯ ಜಿಗಿತ: ಎರಡನೇ ತ್ರೈಮಾಸಿಕದಲ್ಲಿ ಶೇ. 8.2 ರಷ್ಟು ಬೆಳವಣಿಗೆ

ಗೋವಾದಲ್ಲಿ ವಿಶ್ವದ ಅತಿ ಎತ್ತರದ ಶ್ರೀರಾಮನ ಪ್ರತಿಮೆ ಅನಾವರಣಗೊಳಿಸಿದ ಪ್ರಧಾನಿ ಮೋದಿ

ಪ್ರೆಸ್ಟೀಜ್ ಫಾಲ್ಕನ್ ಸಿಟಿ: ಕಲುಷಿತ ನೀರಿನಿಂದ ಮಗು ಸಾವು, ಸೋಶಿಯಲ್ ಮೀಡಿಯಾದಲ್ಲಿ ವದಂತಿ, ಅಧಿಕಾರಿಗಳು ಹೇಳಿದ್ದೇನು?

SCROLL FOR NEXT