ದಲೈ ಲಾಮಾ ಅವರು ಮತ್ತೊಬ್ಬ ಬೌದ್ಧ ಧಾರ್ಮಿಕ ನಾಯಕರೊಂದಿಗೆ ಬೌದ್ಧ ಧರ್ಮವನ್ನು ಬಿಂಬಿಸುವ ಮಂಡಲ ರಚಿಸುತ್ತಿರುವುದು 
ರಾಜ್ಯ

ಕರ್ನಾಟಕ ರಾಜ್ಯದಲ್ಲಿದ್ದ ಬೌದ್ಧರು ಎಲ್ಲಿಗೆ ಹೋದರು? ಜನಗಣತಿಯಿಂದ ಹೊರಬಂದ ಕಳವಳಕಾರಿ ಸಂಗತಿ

ಕಳೆದೊಂದು ದಶಕದಿಂದ ಕರ್ನಾಟಕದಲ್ಲಿ ಬೌದ್ಧರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. 2001ರಲ್ಲಿ 4 ಲಕ್ಷ ಮಂದಿ ಬೌದ್ಧರು ಇದ್ದರೆ 2011ರಲ್ಲಿ ಅದು 75 ಸಾವಿರಕ್ಕೆ ಇಳಿದಿತ್ತು. ಅಂದರೆ 10 ವರ್ಷಗಳಲ್ಲಿ 3.25 ಲಕ್ಷ ಜನ ಬೌದ್ಧರು ಕಣ್ಮರೆಯಾಗಿದ್ದಾರೆ.

ಬೆಂಗಳೂರು: ಕಳೆದೊಂದು ದಶಕದಿಂದ ಕರ್ನಾಟಕದಲ್ಲಿ ಬೌದ್ಧರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. 2001ರಲ್ಲಿ 4 ಲಕ್ಷ ಮಂದಿ ಬೌದ್ಧರು ಇದ್ದರೆ 2011ರಲ್ಲಿ ಅದು 75 ಸಾವಿರಕ್ಕೆ ಇಳಿದಿತ್ತು. ಅಂದರೆ 10 ವರ್ಷಗಳಲ್ಲಿ 3.25 ಲಕ್ಷ ಜನ ಬೌದ್ಧರು ಕಣ್ಮರೆಯಾಗಿದ್ದಾರೆ. ಅಲ್ಪಸಂಖ್ಯಾತರಾಗಿರುವ ಬೌದ್ಧರು ರಾಜ್ಯದ ಹಲವು ಭಾಗಗಳಲ್ಲಿ ನೆಲೆಸಿದ್ದು ಈ ಎಲ್ಲಾ ಕಡೆಗಳಲ್ಲಿ ಅವರ ಸಂಖ್ಯೆ ಇಳಿಮುಖವಾಗಿದೆ.

ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಆಯೋಗಕ್ಕೆ ಈ ಅಂಶ ಗಮನಕ್ಕೆ ಬಂದಿದ್ದು ಜನಗಣತಿ ನಿರ್ದೇಶನಾಲಯಕ್ಕೆ ಬೌದ್ಧರ ಬಗ್ಗೆ ಸರಿಯಾದ ಜನಗಣತಿ ನಡೆಸುವಂತೆ ಸೂಚಿಸಿದೆ. ಮಾಜಿ ಎಂಎಲ್ ಸಿ ಹಾಗೂ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಮ್, ಈ ಬಗ್ಗೆ ಸೂಕ್ಷ್ಮವಾಗಿ ಗಮನಹರಿಸಬೇಕು ಎಂದಿದ್ದಾರೆ.

ಸುಪ್ರೀಂ ಕೋರ್ಟ್ ನಲ್ಲಿ ಸೇವೆ ಸಲ್ಲಿಸಿರುವ ಅಡ್ವೊಕೇಟ್ ಕೆ ವಿ ಧನಂಜಯ, ಇದು ಕಳವಳಕಾರಿ ಸಂಗತಿ. ಜನಗಣತಿ ಇಲಾಖೆಗೆ ಅವರ ವಿಧಾನದಲ್ಲಿ ಏನಾದರೂ ಗಂಭೀರವಾಗಿ ತಪ್ಪಾಗಿದೆ ಎಂದು ಹೇಳುವ ಅಗತ್ಯವಿಲ್ಲ; ಇದು ತುಂಬಾ ಸ್ಪಷ್ಟವಾಗಿದೆ. ಎರಡು ಜನಗಣತಿ ವರ್ಷಗಳ ನಡುವೆ ಬೌದ್ಧ ಅಲ್ಪಸಂಖ್ಯಾತರ ಇಷ್ಟೊಂದು ದೊಡ್ಡ ಭಾಗವು ಹೇಗೆ ಕಣ್ಮರೆಯಾಯಿತು ಎಂಬುದರ ಬಗ್ಗೆ ಜನಗಣತಿ ಇಲಾಖೆಯು ಸಂವೇದನಾಶೀಲವಾಗಿಲ್ಲ ಅಥವಾ ಉದಾಸೀನತೆ ತೋರುತ್ತಿದೆ ಎಂದರ್ಥ ಎಂದಿದ್ದಾರೆ.

ತನ್ನ ಕರ್ತವ್ಯವನ್ನು ಎಚ್ಚರಿಕೆಯಿಂದ ನಿರ್ವಹಿಸುವ ಭಾಗವಾಗಿ, ಈ ಅಸಂಗತತೆಯನ್ನು ಈ ರೀತಿ ಏಕೆ ನೋಂದಾಯಿಸಲಾಗಿದೆ ಎಂಬುದರ ಕುರಿತು ಇಲಾಖೆಯು ಸಾರ್ವಜನಿಕ ವಿವರಣೆಯನ್ನು ನೀಡಬೇಕು. ಸಂದೇಹವಿದ್ದಲ್ಲಿ ಇಲಾಖೆಯು ಇತ್ತೀಚಿನ ಗಣತಿಯನ್ನು ಸ್ಥಗಿತಗೊಳಿಸಿ ಪುನರ್ ಕೆಲಸ ಮಾಡುವುದು ಉತ್ತಮ. ಅಲ್ಪಸಂಖ್ಯಾತರ ರಕ್ಷಣೆಗೆ ಸಂಬಂಧಿಸಿದಂತೆ ಭಾರತ ಈಗಾಗಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿರುಗಾಳಿಯಲ್ಲಿದೆ. ಏಷ್ಯಾದ ಬೌದ್ಧ-ಒಲವುಳ್ಳ ಕೇವಲ ಒಂದು ರಾಜ್ಯದಲ್ಲಿ ಕೆಲವು ಲಕ್ಷ ಬೌದ್ಧರು ಈ ರೀತಿಯಲ್ಲಿ ಸರ್ಕಾರಿ ಜನಗಣತಿಯಲ್ಲಿ ಕಣ್ಮರೆಯಾದಾಗ ಆತಂಕ ಉಂಟಾಗಿರುವುದು ಸಹಜ ಎಂದು ಅಡ್ವೊಕೇಟ್ ಧನಂಜಯ ಹೇಳುತ್ತಾರೆ.

ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಮಾಹಿತಿ ನೀಡಿದ ಸಚಿವ ಗೋವಿಂದ ಕಾರಜೋಳ, ಈ ಬಗ್ಗೆ ಗಮನ ಹರಿಸಬೇಕಾಗಿದೆ. ಕಾಣೆಯಾದವರು ಎಲ್ಲಿಗೆ ಹೋಗಿದ್ದಾರೆ ಎಂದು ನೋಡಬೇಕಿದೆ. ಸಮೀಕ್ಷೆ ನಡೆಸಿದರೆ ಸತ್ಯ ಹೊರಗೆ ಬರುತ್ತದೆ ಎಂದರು.

ಇತಿಹಾಸತಜ್ಞ ಡಾ ಕೆ ಮೋಹನ್ ಕುಮಾರ್, ಭಾರತದಲ್ಲಿ ಬೌದ್ಧ ಧರ್ಮ ಮೊದಲ ಜಗತ್ತಿನ ಧರ್ಮವಾಗಿದೆ. ಇಲ್ಲಿಂದ ಚೀನಾ, ಜಪಾನ್, ಶ್ರೀಲಂಕಾ ಮೊದಲಾದ ದೇಶಗಳಿಗೆ ಬೌದ್ಧ ಧರ್ಮ ಹರಡಿತು. ಆದರೆ ಇಂದು ಇಲ್ಲಿ ಇಳಿಕೆಯಾಗುತ್ತಿದೆ ಎಂದರು.ಬೈಲಕುಪ್ಪೆ ಮತ್ತು ಮುಂಡಗೋಡದಲ್ಲಿ ಬೃಹತ್ ಸಂಖ್ಯೆಯಲ್ಲಿ ಟಿಬೆಟಿಯನ್ನರು ಇನ್ನೂ ನಿರಾಶ್ರಿತರೆಂದು ಪರಿಗಣಿಸಲ್ಪಟ್ಟಿದ್ದು ರಾಷ್ಟ್ರಗಣತಿಯಲ್ಲಿ ಅವರನ್ನು ಸೇರ್ಪಡೆ ಮಾಡಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT