ರಾಜ್ಯ

ರಾಜ್ಯದಲ್ಲಿ ಇದೇ ಮೊದಲು; ಹೊಸ ಕಾನೂನಿನ ಅಡಿ ಅಕ್ರಮ ಕಸಾಯಿಖಾನೆಗೆ ಬೀಗ

Srinivas Rao BV

ಮಂಗಳೂರು: ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಹೊಸ ಕಾನೂನಿನ ಅಡಿಯಲ್ಲಿ ಅಕ್ರಮ ಕಸಾಯಿಖಾನೆಗಳನ್ನು ಕಂದಾಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಗೋಹತ್ಯೆ ನಿಷೇಧ ಕಾಯ್ದೆ-2020 ರ ಅಡಿಯಲ್ಲಿ ಈ ಅಕ್ರಮ ಕಸಾಯಿಖಾನೆ ಇದ್ದ ಮೂರು ಪ್ರದೇಶಗಳನ್ನು ವಶಕ್ಕೆ ಪಡೆದಿದ್ದಾರೆ.  ಕಳೆದ ವರ್ಷ ಕಾಯ್ದೆ ಜಾರಿಗೆ ಬಂದ ನಂತರ ಇದೇ ಮೊದಲ ಬಾರಿಗೆ ಇಂತಹ ಕ್ರಮ ಜರುಗಿಸಲಾಗಿದೆ. 

ಕಾಟಿಪಳ್ಳದಲ್ಲಿ ಅಕ್ರಮ ಕಸಾಯಿಖಾನೆಗಳನ್ನು ಹಕೀಮ್ ಹಾಗೂ ಮೊಹಮ್ಮದ್ ಪರ್ವೇಜ್ ನಡೆಸುತ್ತಿದ್ದರು ಹಾಗೂ ಗಂಜಿಮಠದಲ್ಲಿ ಮನೆಯೊಂದಕ್ಕೆ ಹೊಂದಿಕೊಂಡಂತೆ ಇದ್ದ ಪ್ರದೇಶದಲ್ಲಿ ಯೂಸೂಫ್, ಹಕೀಮ್ ಹಾಗೂ ಸಿರಾಜ್ ಅಕ್ರಮ ಕಸಾಯಿಖಾನೆ ನಡೆಸುತ್ತಿದ್ದರು. ಅರ್ಕುಳದಲ್ಲಿ ಬತೀಷ್ ಎಂಬಾತ ಕಸಾಯಿಖಾನೆ ನಡೆಸುತ್ತಿದ್ದ. ಈ ಕಸಾಯಿಖಾನೆ ಹಾಗೂ ಅದಕ್ಕೆ ಸಂಬಂಧಿಸಿದ ಆಸ್ತಿಗಳನ್ನು ವಶಕ್ಕೆ ಪಡೆಯಲಾಗಿದೆ. 

ಕೋರ್ಟ್ ಈ ಪ್ರಕರಣವನ್ನು ಇತ್ಯರ್ಥಪಡಿಸುವವರೆಗೂ ಕಸಾಯಿಖಾನೆಗಳಿದ್ದ ಕಟ್ಟಡದ ಮಾಲಿಕರು ಅದನ್ನು ಮಾರಾಟ ಮಾಡುವಂತಿಲ್ಲ ಎಂದು ಮಂಗಳೂರು ತಹಶಿಲ್ದಾರ್ ಹೇಳಿದ್ದಾರೆ.

SCROLL FOR NEXT