ರಾಜ್ಯ

ಅಪ್ರಾಪ್ತೆಯರಿಗೆ ಲೈಂಗಿಕ ಕಿರುಕುಳ: ಇಂದು ಮುರುಘಾಶ್ರೀ ಜಾಮೀನು ಅರ್ಜಿ ವಿಚಾರಣೆ, ಮಠಕ್ಕೆ ಬಿಗಿ ಭದ್ರತೆ

Shilpa D

ಚಿತ್ರದುರ್ಗ: ಮುರುಘಾ ಮಠದ ಶರಣರು ಹಾಗೂ ಅವರ ಉತ್ತರಾಧಿಕಾರಿ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಇಂದು ನಡೆಯಲಿದೆ.

ನಿರೀಕ್ಷಣಾ ಜಾಮೀನು ಕೋರಿ ಆ.30ರಂದು ಶರಣರು ಅರ್ಜಿ ಸಲ್ಲಿಸಿದ್ದರು. ಮುರುಘಾ ಶರಣರ ಉತ್ತರಾಧಿಕಾರಿ ಬಸವಾದಿತ್ಯ ಅವರೂ ಫೋಕ್ಸೊ ಪ್ರಕರಣದಲ್ಲಿ A-3 ಆರೋಪಿಯಾಗಿದ್ದು, ಅವರೂ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯೂ ಇಂದು ವಿಚಾರಣೆಗೆ ಬರಲಿದೆ.

ನ್ಯಾಯಾಲಯದಲ್ಲಿ ಇಂದು ಅರ್ಜಿ ವಿಚಾರಣೆಗೆ ಬರಲಿದೆ. 939/22 ಅರ್ಜಿ ಸಂಖ್ಯೆಯ ಜಾಮೀನು ಅರ್ಜಿಯನ್ನು ಜಿಲ್ಲಾ ನ್ಯಾಯಾಲಯದಲ್ಲಿ ಸಲ್ಲಿಸಲಾಗಿದ್ದು, ಇಲ್ಲಿ ರದ್ದಾದರೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆ ಸಾಧ್ಯವಿದೆ. ಇಂದು ಮಧ್ಯಾಹ್ನದ ಒಳಗೆ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ ಎಂದು ತಿಳಿದುಬಂದಿದೆ. NCPCR ನೋಟೀಸ್ ಜಾರಿಯಾಗಿದ್ದು ಮುರುಘಾ ಮಠದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ನ್ಯಾಯಾಧೀಶರಾದ ಬಿ.ಕೆ. ಕೋಮಲಾ ಅವರು ರಜೆ ಮೇಲೆ ತೆರಳಿದ್ದ ಕಾರಣ ವಕೀಲರ ತಂಡ ಸಲ್ಲಿಸಿದ ಅರ್ಜಿಯನ್ನು ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಕಲ್ಕಣಿ ವಿಚಾರಣೆಗೆ ಕೈಗೆತ್ತಿಕೊಂಡಿದ್ದರು. ತಕರಾರು ಸಲ್ಲಿಕೆಗೆ ಅವಕಾಶ ಕಲ್ಪಿಸಿ ವಿಚಾರಣೆಯನ್ನು ಸೆ.1ಕ್ಕೆ ಮುಂದೂಡಲಾಗಿತ್ತು.

SCROLL FOR NEXT