ರಾಜ್ಯ

ಭಜರಂಗದಳ ಕಾರ್ಯಕರ್ತ ಹರ್ಷನನ್ನು ಕೊಂದ ಹಂತಕರು ಹಿಂದೂ ದ್ವೇಷಿಗಳು- ಎನ್ ಐಎ

Nagaraja AB

ಬೆಂಗಳೂರು: ಶಿವಮೊಗ್ಗದಲ್ಲಿ ಫೆಬ್ರವರಿಯಲ್ಲಿ ನಡೆದಿದ್ದ ಭಜರಂಗ ದಳ ಕಾರ್ಯಕರ್ತ ಹರ್ಷನನ್ನು ಕೊಲೆ ಮಾಡಿದ ಆರೋಪಿಗಳು ಹಿಂದೂ ಸಮುದಾಯದ ಬಗ್ಗೆ ದ್ವೇಷವನ್ನು ಬೆಳೆಸಿಕೊಂಡಿದ್ದರು. ಭಜರಂಗ ದಳ ಕಾರ್ಯಕರ್ತರ ವಿರುದ್ಧ ಘೋಷಣೆ ಕೂಗುತ್ತಾ ಹರ್ಷನನ್ನು ಕೊಂದಿರುವುದಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ ಇತ್ತೀಚಿಗೆ ವಿಶೇಷ ಕೋರ್ಟ್ ಗೆ ಸಲ್ಲಿಸಿರುವ ಚಾರ್ಜ್ ಶೀಟ್ ನಲ್ಲಿ ಹೇಳಿದೆ.

ರಾಜ್ಯದಲ್ಲಿ ಎದಿದ್ದ ಹಿಜಾಬ್ ವಿವಾದ ನಡುವೆ ಸಾರ್ವಜನಿಕರ ಗಮನ ಸೆಳೆಯುವ ನಿಟ್ಟಿನಲ್ಲಿ ಹರ್ಷನನ್ನು ಹತ್ಯೆ ಮಾಡಲಾಗಿದೆ. ಆರೋಪಿಗಳು ಸಿಎಎ-ಎನ್ ಆರ್ ಸಿ ವಿಚಾರ, ಹಿಜಾಬ್ ವಿವಾದ ಮತ್ತು ಭಜರಂಗದಳ ಕಾರ್ಯಕರ್ತರಿಂದ ಗೋವುಗಳ ರಕ್ಷಣೆ ಚಟುವಟಿಕೆಗಳಿಂದ ಹಿಂದೂ ಸಮುದಾಯದ ಬಗ್ಗೆ ದ್ವೇಷವನ್ನು ಬೆಳೆಸಿಕೊಂಡಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ ಎಂದು ಚಾರ್ಜ್ ಶೀಟ್ ನಲ್ಲಿ ಹೇಳಲಾಗಿದೆ.

ಇದೇ ಕಾರಣಗಳಿಂದ ಆರೋಪಿಗಳು ಹಿಂದೂ ಸಮುದಾಯದಲ್ಲಿ ಭೀತಿಯನ್ನು ಸೃಷ್ಟಿಸಲು ಮತ್ತು ಶಿವಮೊಗ್ಗ ನಗರದಲ್ಲಿ ಹಿಂದೂ ಮತ್ತು ಮುಸ್ಲಿಂ ಸಮುದಾಯದ ಜನರ ನಡುವೆ ಕೋಮು ಸೌಹಾರ್ದತೆ ಹದಗಡೆಸಿ  ದ್ವೇಷವನ್ನು ಸೃಷ್ಟಿಸಲು ಸಂಚು ರೂಪಿಸಿದ್ದಾರೆ ಎಂದು ಅದು ಹೇಳಿದೆ.

ಆರೋಪಿಗಳು ಶಿವಮೊಗ್ಗದ ಪ್ರಮುಖ ಹಿಂದೂ ಸಮುದಾಯದ ಮುಖಂಡರ ಮೆರವಣಿಗೆಗಳು, ಆಚರಣೆಗಳು ಮತ್ತು ಸಮುದಾಯದ ಕಾರ್ಯಕ್ರಮಗಳ ಚಲನವಲನವನ್ನು ಗಮನಿಸುತ್ತಿದ್ದರು. ನಂತರ ಹರ್ಷವನ್ನು ಪ್ರಮುಖ ಹಿಂದೂ ಸಮುದಾಯದ ಮುಖಂಡ ಎಂದು ತಿಳಿದು ಹತ್ಯೆ ಮಾಡಿದ್ದಾರೆ ಎಂದು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ. 
 

SCROLL FOR NEXT