ಉಪ್ಪಿನಲ್ಲಿ ಬಾಲಕನ ಶವ ಹೂತಿಟ್ಟ ಪೋಷಕರು 
ರಾಜ್ಯ

ಈಜಲು ಹೋಗಿ 10 ವರ್ಷದ ಬಾಲಕ ಸಾವು: ಬದುಕುತ್ತಾನೆಂದು ಶವವನ್ನ ಉಪ್ಪಿನಲ್ಲಿ ಹೊತಿಟ್ಟ ಪೋಷಕರು; ಬಳ್ಳಾರಿಯಲ್ಲೊಂದು ವಿಲಕ್ಷಣ ಘಟನೆ!

ಹೊಂಡದಲ್ಲಿ ಈಜಲು ಹೋಗಿ ಬಾಲಕ ಸಾವನಪ್ಪಿದ್ದು, ಆದರೆ ಉಪ್ಪಿನಲ್ಲಿ ಶವವಿಟ್ಟರೇ ಬಾಲಕ ಬದುಕುಳಿದು ಬರುತ್ತಾನೆ ಎಂದು ಗ್ರಾಮಸ್ಥರು ಮೌಡ್ಯತೆ ಮೆರೆದಿರುವಂತಹ ಘಟನೆ ಬಳ್ಳಾರಿ ತಾಲೂಕಿನ ಸಿರವಾರ ಗ್ರಾಮದಲ್ಲಿ ನಡೆದಿದೆ.

ಬಳ್ಳಾರಿ: ಹೊಂಡದಲ್ಲಿ ಈಜಲು ಹೋಗಿ ಬಾಲಕ ಸಾವನಪ್ಪಿದ್ದು, ಆದರೆ ಉಪ್ಪಿನಲ್ಲಿ ಶವವಿಟ್ಟರೇ ಬಾಲಕ ಬದುಕುಳಿದು ಬರುತ್ತಾನೆ ಎಂದು ಗ್ರಾಮಸ್ಥರು ಮೌಡ್ಯತೆ ಮೆರೆದಿರುವಂತಹ ಘಟನೆ ಬಳ್ಳಾರಿ ತಾಲೂಕಿನ ಸಿರವಾರ ಗ್ರಾಮದಲ್ಲಿ ನಡೆದಿದೆ.

‌ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ವ್ಯಕ್ತಿಯ ಮೃತದೇಹ ಉಪ್ಪಿನ ರಾಶಿಯಲ್ಲಿ  ಇಟ್ಟರೇ ಬದುಕುತ್ತಾನೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣಗಲ್ಲಿ ಹರಿದಾಡಿತ್ತು. ಅದರಂತೆ ಸಿರವಾರ ಗ್ರಾಮದ ಸುರೇಶ್(10) ಎನ್ನುವ ಬಾಲಕ ಸ್ನೇಹಿತರೊಂದಿಗೆ ಈಜಲು ಹೋಗಿ  ನೀರಿನ ಹೊಂಡದಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಕೂಡಲೇ ಪೋಷಕರು ಹಾಗೂ ಗ್ರಾಮಸ್ಥರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಬಾಲಕನ ಮೃತದೇಹವನ್ನು ಉಪ್ಪಿನ ರಾಶಿಯಲ್ಲಿಟ್ಟಿದ್ದಾರೆ.

ನಾಲ್ಕೈದು ಚೀಲದಲ್ಲಿ ಉಪ್ಪು ತಂದು ಮೃತ ದೇಹವನ್ನು ಉಪ್ಪಿನಲ್ಲಿಟ್ಟು ಜೀವ ಉಳಿಸಿಕೊಳ್ಳಲು ಶತ ಪ್ರಯತ್ನ ಮಾಡಿದ್ದಾರೆ. ನಾಲ್ಕು ತಾಸುಗಳ ಕಾಲ ನೋಡಿದ್ದಾರೆ. ಆದ್ರೆ, ಬಾಲಕನ ಬರಲಿಲ್ಲ, ಕೊನೆಗೆ ಪೋಷಕರು ಬಾಲಕನ ಅಂತ್ಯಸಂಸ್ಕಾರ ಮಾಡಿದ್ದಾರೆ.

ನೀರಿನಲ್ಲಿ ಮುಳುಗಿ ಸತ್ತವರನ್ನು ಎರಡು ಗಂಟೆಗಳ ಒಳಗೆ ಉಪ್ಪಿನಲ್ಲಿ ಮುಳುಗಿಸಿಟ್ಟರೆ, ಅವರು ಮತ್ತೆ ಬದುಕುತ್ತಾರೆ ಎನ್ನುವ ಪೋಸ್ಟ್ ನೋಡಿದ್ದ ಕೆಲ ಗ್ರಾಮಸ್ಥರು, ನೂರಕ್ಕೂ ಹೆಚ್ಚು ಕೆ.ಜಿ ಉಪ್ಪನ್ನು ತಂದು ಅದರಲ್ಲಿ ಮುಖವನ್ನಷ್ಟೆ ಕಾಣುವಂತೆ ಬಾಲಕನ ಶವವನ್ನು ಮುಚ್ಚಿಟ್ಟಿದ್ದಾರೆ. ಅದ್ರೆ, ನಾಲ್ಕೈದು ಗಂಟೆಗಳ ಕಾಲ ಇಟ್ಟರೂ ಯಾವುದೇ ಪ್ರಯೋಜನವಾಗದ ಹಿನ್ನೆಲೆ ಬಾಲಕನ ಶವಸಂಸ್ಕಾರ ಮಾಡಿದ್ದೇವೆಂದು‌‌ ಎಂದು ಮೃತ ಬಾಲಕ ತಿಪ್ಪೇಸ್ವಾಮಿ ರೆಡ್ಡಿ ತಿಳಿಸಿದ್ದಾರೆ.

ಕೆಲವು ಗ್ರಾಮಸ್ಥರು ಪೊಲೀಸರು ಮತ್ತು ವೈದ್ಯರಿಗೆ ಮಾಹಿತಿ ನೀಡಿದ್ದು, ಅವರು ಗ್ರಾಮಕ್ಕೆ ಭೇಟಿ ನೀಡಿ ಬಾಲಕ ಮೃತಪಟ್ಟಿದ್ದಾನೆ ಎಂದು ಘೋಷಿಸಿದರು. ನಂತರ ಗ್ರಾಮದ ರುದ್ರಭೂಮಿಯಲ್ಲಿ ಬಾಲಕನ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಕೃಷ್ಣಾ ಮೇಲ್ದಂಡೆ ಯೋಜನೆ-3: ಸರ್ವಪಕ್ಷ ನಾಯಕರೊಂದಿಗೆ ಶೀಘ್ರದಲ್ಲೇ ಸಭೆ; ಡಿಕೆ.ಶಿವಕುಮಾರ್

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

SCROLL FOR NEXT