ರಾಜ್ಯ

ಕೊಪ್ಪಳ: ಕರ್ತವ್ಯ ಮುಗಿಸಿ ಮನೆಗೆ ತೆರಳುವ ವೇಳೆ ಪ್ರವಾಹದಲ್ಲಿ ಕೊಚ್ಚಿ ಹೋದ ಇಬ್ಬರು ಪೊಲೀಸ್ ಪೇದೆಗಳು!

Shilpa D

ಗದಗ: ಕರ್ತವ್ಯಕ್ಕೆ ತೆರಳುತ್ತಿದ್ದ ಮುಂಡರಗಿ ಠಾಣೆಯ ಇಬ್ಬರು ಪೊಲೀಸರು ಹಳ್ಳದಲ್ಲಿ ಕೊಚ್ಚಿ ಹೋಗಿದ್ದು, ಓರ್ವ ಪೇದೆಯ ಶವ ಪತ್ತೆಯಾಗಿದೆ. ಮಹೇಶ್ ವಕ್ಕರದ ಹಾಗೂ ನಿಂಗಪ್ಪ ಹಲವಾಗಲಿ ಕೊಚ್ಚಿ ಹೋಗಿದ್ದ ಪೊಲೀಸ್ ಪೇದೆಗಳಾಗಿದ್ದಾರೆ.

ಬೈಕ್ ನಲ್ಲಿ ತೆರಳುತ್ತಿದ್ದ ಮಹೇಶ್ ಹಾಗೂ ನಿಂಗಪ್ಪ ಜಿಲ್ಲೆಯ ಯಲಬುರ್ಗಾ ತಾಲೂಕಿನ ತೊಂಡೆಹಳ್ಳದಲ್ಲಿ ಕೊಚ್ಚಿ ಹೋಗಿದ್ದರು. ಕೊಪ್ಪಳ, ಗದಗ ಜಿಲ್ಲೆಯ ಪೊಲೀಸರು ಮತ್ತು ಅಗ್ನಿ ಶಾಮಕ ದಳದ ಸಿಬ್ಬಂದಿ ನಾಪತ್ತೆಯಾಗಿದ್ದ ಪೊಲೀಸರಿಗಾಗಿ ಹುಡುಕಾಟ ನಡೆಸಿದ್ದರು. ಮಧ್ಯಾಹ್ನದ ವೇಳೆಗೆ ನಿಂಗಪ್ಪ ಎಂಬುವವರ ಮೃತದೇಹ ಸಿಕ್ಕಿದೆ. ಮತ್ತೊಬ್ಬ ಪೇದೆಗಾಗಿ ಹುಡುಕಾಟ ನಡೆಸಲಾಗುತ್ತಿದೆ.

ಸೋಮವಾರ ಸಂಜೆ ಕರ್ತವ್ಯ ಮುಗಿಸಿ ತಮ್ಮ ವೈಯಕ್ತಿಕ ಕೆಲಸದ ಮೇಲೆ ಕೊಪ್ಪಳಕ್ಕೆ ತೆರಳಿದ್ದರು. ಅವರು ನೈಟ್ ಡ್ಯೂಟಿ ವರದಿ ಮಾಡಬೇಕಿತ್ತು. ಅವರು ಬರದಿದ್ದಾಗ ಅವರ ಸಹೋದ್ಯೋಗಿಗಳು ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರು, ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ನಂತರ ಕೊಪ್ಪಳ ಪೊಲೀಸರನ್ನು ವಿಚಾರಿಸಿದಾಗ ಇಬ್ಬರೂ ಕೊಚ್ಚಿ ಹೋಗಿರುವುದು ತಿಳಿದು ಬಂದಿದೆ.

ಸೋಮವಾರ ರಾತ್ರಿ ನಿಂಗಪ್ಪ ಮತ್ತು ಮಹೇಶ್ ಬೈಕ್‌ನಲ್ಲಿ ಗಜೇಂದ್ರಗಡಕ್ಕೆ ಮರಳುತ್ತಿದ್ದಾಗ ಧಾರಾಕಾರ ಮಳೆ ಸುರಿಯುತ್ತಿತ್ತು. ರಾತ್ರಿ 8.30ರ ಸುಮಾರಿಗೆ ತೊಂಡಿಹಾಳ್ ಹೊಳೆಯ ಬಳಿ ಬಂದಿದ್ದಾರೆ. ತುಂಬಿ ಹರಿಯುತ್ತಿದ್ದ ಹೊಳೆಯಲ್ಲಿ  ಹೋಗದಂತೆ ಮಾಡದಂತೆ ಸ್ಥಳೀಯರು ಮನವಿ ಮಾಡಿದರೂ ಅದೇ ರಸ್ತೆಯಲ್ಲಿ ಹೋಗಿದ್ದಾರೆ, ಈ ವೇಳೆ ಪ್ರವಾಹದ ಹರಿವಿಗೆ ಸಿಲುಕಿ ಇಬ್ಬರು ಕೊಚ್ಚಿ ಹೋದರು ಎಂದು ಮೂಲಗಳು ತಿಳಿಸಿವೆ. ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

SCROLL FOR NEXT