ಪ್ರಧಾನಿ ನರೇಂದ್ರ ಮೋದಿ 
ರಾಜ್ಯ

ಇತರ ಸರ್ಕಾರದ ಯೋಜನೆಗಳ ಹೆಸರು ಬದಲಿಸಿ ಕ್ರೆಡಿಟ್ ತೆಗೆದುಕೊಳ್ಳುವುದು ಪ್ರಧಾನಿ ಮೋದಿ ಚಾಳಿ: ಕಾಂಗ್ರೆಸ್ ಕಿಡಿ

ಇತರ ಸರ್ಕಾರಗಳ ಯೋಜನೆಗಳಿಗೆ ಹೆಸರು ಬದಲಿಸಿ ಕ್ರೆಡಿಟ್ ತೆಗೆದುಕೊಳ್ಳುವುದು ಪ್ರಧಾನಿ ನರೇಂದ್ರ ಮೋದಿ ಅವರ ಚಾಳಿಯಾಗಿದೆ ಎಂದು ಕಾಂಗ್ರೆಸ್ ಕಿಡಿಕಾರಿಯಾಗಿದೆ.

ಬೆಂಗಳೂರು: ಇತರ ಸರ್ಕಾರಗಳ ಯೋಜನೆಗಳಿಗೆ ಹೆಸರು ಬದಲಿಸಿ ಕ್ರೆಡಿಟ್ ತೆಗೆದುಕೊಳ್ಳುವುದು ಪ್ರಧಾನಿ ನರೇಂದ್ರ ಮೋದಿ ಅವರ ಚಾಳಿಯಾಗಿದೆ ಎಂದು ಕಾಂಗ್ರೆಸ್ ಕಿಡಿಕಾರಿಯಾಗಿದೆ.

ಚೀತಾಗಳು ಭಾರತಕ್ಕೆ ಬರುವ ಹಿಂದಿರುವ ಕಾಂಗ್ರೆಸ್ ಪ್ರಯತ್ನಗಳ ಪಟ್ಟಿ ನೀಡಿರುವ ಕಾಂಗ್ರೆಸ್, ಇದನ್ನು ಪ್ರಧಾನಿ ಅರಿಯಲಿ, ನಂತರ ಕ್ಯಾಮೆರಾ ಹಿಡಿದು ಪೋಸ್ ಕೊಡಲಿ ಎಂದು ಹೇಳಿದೆ.

ಆಫ್ರಿಕಾದಿಂದ ಚೀತಾಗಳನ್ನು ಭಾರತಕ್ಕೆ ತರುವ ಪ್ರಸ್ತಾವ 2009ರಲ್ಲಿಯೇ ಸಿದ್ದಪಡಿಸಲಾಗಿತ್ತು. 2010 ರಲ್ಲಿ ಆಗಿನ ಪ್ರಧಾನಿಯಾಗಿದ್ದ ಮನ ಮೋಹನ್ ಸಿಂಗ್ ಅವರು ಚೀತಾ ಯೋಜನೆಗೆ ಅನುಮತಿ ನೀಡಿದ್ದರು ಎಂದು ಕಾಂಗ್ರೆಸ್ ಸಾಮಾಜಿಕ ಜಾಲತಾಣ ಟ್ವೀಟರ್ ನಲ್ಲಿ ತಿಳಿಸಿದೆ.

ಮತ್ತೊಂದು ಟ್ವೀಟ್ ನಲ್ಲಿ ಬಿಜೆಪಿ ಸರ್ಕಾರದಿಂದ ಕರ್ನಾಟಕಕ್ಕೆ ಇದ್ದ ಪ್ರಜ್ಞಾವಂತರ ನಾಡು, ಪ್ರಗತಿಪರ ರಾಜ್ಯ ಎಂಬ ಹೆಗ್ಗಳಿಕೆ ಕಳೆದು ಭ್ರಷ್ಟಾಚಾರದ ರಾಜ್ಯ ಎಂಬ ಹಣೆಪಟ್ಟಿ ಬಂದಿದ್ದು ದುರದೃಷ್ಟಕರ. ಭ್ರಷ್ಟಾಚಾರದ ಮಹಾಪೋಷಕರಾದ ಸಿಎಂಗೆ ತೆಲಂಗಾಣದಲ್ಲಿ ಹಾಕಿದ್ದ ಬೋರ್ಡ್‌ಗಳನ್ನು ವಿರೋಧಿಸುವ ದಮ್ ಇಲ್ಲದಾಗಿದೆ ಎಂದು ಟೀಕಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪೆಟ್ರೋಲಿಯಂ ಉತ್ಪನ್ನಗಳ ಮಿತಬಳಕೆ "ಈಗಿನ ಅಗತ್ಯ"-ಪ್ರಧಾನಿ ಮೋದಿ: ಮುಂದೆ ಕಾದಿದೆಯಾ ಸಂಕಷ್ಟದ ದಿನಗಳು?

IPL 2026: ಕೊನೆಯ ಎಸೆತದಲ್ಲಿ RCBಗೆ ರೋಚಕ ಜಯ; MI ವಿರುದ್ಧದ ಪಂದ್ಯ ಗೆಲ್ಲಿಸಿದ ಕೃನಾಲ್, ಭುವಿ; ಅಗ್ರಸ್ಥಾನಕ್ಕೇರಿದ ಆರ್‌ಸಿಬಿ!

1 ಮತದಿಂದ DMK ಅಭ್ಯರ್ಥಿ ಪೆರಿಯಕರುಪ್ಪನ್ ಸೋಲು; ಅಂಚೆ ಮತ ಗೊಂದಲದ ಬಗ್ಗೆ ECI ವಿರುದ್ಧ ಮದ್ರಾಸ್ ಹೈಕೋರ್ಟ್ ಕಿಡಿ!

S Keerthana: ವಿಜಯ್ ಕ್ಯಾಬಿನೆಟ್ ನಲ್ಲಿ ಪಂಚಭಾಷಾ ಪಾರಂಗತೆ; ಅತಿ ಕಿರಿಯ ಶಾಸಕಿ!

Pak ನಲ್ಲಿ ರಕ್ತದೋಕುಳಿ: ಹೊಸ ಉಗ್ರ ಸಂಘಟನೆ ನಡೆಸಿದ ದಾಳಿಯಲ್ಲಿ 21 ಸೈನಿಕರು ಬಲಿ; ಆಸ್ಪತ್ರೆಗಳಲ್ಲಿ ತುರ್ತು ಪರಿಸ್ಥಿತಿ!

SCROLL FOR NEXT